ಭೌತಶಾಸ್ತ್ರ
 
1.    ಬೆಳಕಿನ ವೇಗ ಸೆಕೆಂಡಿಗೆ 3 ಲಕ್ಷ ಕಿ.ಮೀ.ನಂತೆ ಒಂದು ವರ್ಷದಲ್ಲಿ ಕ್ರಮಿಸುವ ದೂರ - ಒಂದು ಜ್ಯೋತಿರ್ವರ್ಷ
 
2.    ಒಂದು ಆಂಗ್ಸ್ಟಾಂ ಎಂದರೆ – 1°-10 ಮೀ
 
3.    ದೃಗ್ಗೋಚರ ಬೆಳಕಿನ ವ್ಯಾಪ್ತಿ – 400 nm ರಿಂದ 750 nm
 
4.    ಕ್ಷ - ಕಿರಣಗಳ ತರಂಗ ದೂರ ವ್ಯಾಪ್ತಿ – 0.1 A to 100 A
 
5.    ದೂರದರ್ಶಕ ಉಪಕರಣದ ರಿಮೋಟ್ ಕಂಟ್ರೋಲ್ನಲ್ಲಿ ಉಪಯೋಗಿಸುವ ವಿಕಿರಣ - ಅವಗೆಂಪು
 
6.    ಹರಳು ರಚನೆಯ ಅಧ್ಯಯನಕ್ಕೆ ಬಳಸುವ ವಿಕರಣ - ಕ್ಷ-ಕಿರಣ
 
7.    ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸುವ ವಿಕರಣಗಳು - ಗಾಮಾ ವಿಕಿರಣಗಳು
 
8.    ಕ್ವಾಂಟಂ ಸಿದ್ಧಾಂತವನ್ನು ವಿವರಿಸಿದವರು - ಮ್ಯಾಕ್ಸ್ ಪ್ಲಾಂಕ್
 
9.    ಕೆಲವು ವಸ್ತುಗಳ ಮೇಲೆ ಬೆಳಕು ಬಿದ್ದಾಗ ಇಲೆಕ್ಟ್ರಾನ್ಗಳು ಉತ್ಸರ್ಜನೆ ಆಗುವ ಪರಿಣಾಮ - ದ್ಯುತಿ ವಿದ್ಯುತ್ ಪರಿಣಾಮ
 
10. ಐನ್ಸ್ಟೀನರಿಗೆ ನೋಬೆಲ್ ಪ್ರಶಸ್ತಿ ಬಂದದ್ದು - ದ್ಯುತಿ ವಿದ್ಯುತ್ ಪರಿಣಾಮಕ್ಕೆ
 
11. ಲೇಸರ್‌ (LASER) ಎಂದರೆ - ವಿಕರಣ ಚೋದಿತ ಉತ್ಸರ್ಜನೆಯಿಂದ ಬೆಳಕಿನ ವರ್ಧನೆ
 
12. ಇಲೆಕ್ಟ್ರಾನುಗಳು ಹೆಚ್ಚಿನ ಶಕ್ತಿಯ ಕಕ್ಷೆಯಿಂದ ಕಡಿಮೆ ಶಕ್ತಿಯ ಕಕ್ಷೆಗೆ ಜಿಗಿದಾಗ, ಆಗುವ ಪರಿಣಾಮ - ಫೋಟಾನ್ 
ಉತ್ಸರ್ಜನೆ ಪ್ರಕ್ರಿಯೆ
 
13. ಏಕಕಾಲಕ್ಕೆ ಪರಮಾಣುಗಳನ್ನು ಕಡಿಮೆ ಶಕ್ತಿ ಸ್ಥಿತಿಯಿಂದ ಅಧಿಕ ಶಕ್ತಿ ಸ್ಥಿತಿಗೆ ಏಣಿಸುವ ಪ್ರಕ್ರಿಯೆ - ಸಂದಣ ವಿಲೋಮನ
 
14. ಪ್ರಥಮ ಲೇಸರ್ ನಿರ್ಮಿಸಿದವರು - ಟಿ.ಎಚ್. ಮೈಮೆನ್
 
15. ಲೇಸರ್ ಪ್ರತಿಫಲಕಗಳನ್ನು ಬಳಸಿ ಎರಡು ವಸ್ತುಗಳ ನಡುವಿನ ದೂರವನ್ನು ಅಳೆಯುವ - ಲೇಸರ್ ರೇಂಜಿಂಗ್
 
16. ದೃಶ್ಯದ ಮೂರು ಆಯಾಮಗಳ ಚಿತ್ರಗಳನ್ನು ಪಡೆಯಲು ಉಪಯೋಗಿಸುವ ತಾಂತ್ರಿಕತೆ - ಹಾಲೋಗ್ರಾಫಿ.
 
17. ಇಲೆಕ್ಟ್ರಾನಿನ ವಿದ್ಯುದಾವೇಶ - 1.6 x 10-19 C.
 
18. ಅರೆವಾಹಕಗಳ ವಾಹಕತೆಯನ್ನು ಹೆಚ್ಚಿಸುವ ಬೆರಕೆ ಧಾತುಗಳು - ಡೋಪೆಂಟ್
 
19. ಅರವಾಹಕಗಳ ವಾಹಕತೆಯನ್ನು ಹೆಚ್ಚಿಸಲು ಬಳಸುವ ಡೋಪೆಂಟ್ - ಆಂಟಿಮನ್ / ಅರ್ಸೆನಿಕ್
 
20. ಪರ್ಯಾಯ ವಿದ್ಯುತ್ತನ್ನು ನೇರ ವಿದ್ಯುತ್ತಾಗಿ ಪರಿವರ್ತಿಸಲು ಬಳಸುವ ಸಾಧನ - ಡೈಯೋಡ್
 
21. ಅಪೇಕ್ಷಿತ ಆವೃತ್ತಿಯ ವಿದ್ಯುತ್ಆಂದೋಲನಗಳನ್ನು ಪಡೆಯು ಸಾಧನ - ಆಸಿಲೇಟರ್
 
22. ರೇಡಿಯೋ ಸಂಪರ್ಕವನ್ನು ಬೆಳಕಿಗೆ ತಂದ ವಿಜ್ಞಾನಿ - ಮಾರ್ಕೊನಿ
 
23. ಶಬ್ದವನ್ನು ವಿದ್ಯುತ್ಸಂಕೇತಗಳಾಗಿ ಪರಿವರ್ತಿಸುವ ಸಾಧನ - ಟ್ರಾನ್ಸ್ಡ್ಯೂಸರ್
 
24. ರೇಡಿಯೋ ಪ್ರಸಾರದಲ್ಲಿ ಶ್ರವಣ ಆವೃತ್ತಿ ಸಂಕೇತಗಳನ್ನು ಶಕ್ತಿಯುತ ಮಾಡುವ ಸಾಧನ - ಪ್ರವರ್ಧಕ
 
25. ರೇಡಿಯೋ ಪ್ರಸಾರ ವ್ಯವಸ್ಥೆಯಲ್ಲಿ ರೇಡಿಯೋ ಅಲೆಗಳನ್ನು ಉತ್ಪಾದನೆ ಮಾಡುವ ಸಾಧನ 408 ತಾಂತ್ರಿಕತೆ - RF  
ಆಸಿಲೇಟರ್
 
26. AF ಸಂಕೇತವನ್ನು RF ಅಲೆಗಳ ಮೇಲೆ ಆಧ್ಯಾರೋಪಿಸುವ ಪ್ರಕ್ರಿಯೆ - ಮಾಡ್ಯೂಲೇಷನ್
 
27. FM ರೇಡಿಯೋ ಕೇಂದ್ರಗಳ ವಾಹಕ ಅವೃತ್ತಿ – 88 ರಿಂದ108 MHz
 
28. ವಕ್ರಿಭವನಕ್ಕೆ ಕಾರಣ - ಬೆಳಕಿನ ವೇಗದಲ್ಲಿ ವ್ಯತ್ಯಾಸ
 
29. ಬಿಳಿಯ ಬೆಳಕನ್ನು ವಿಭಜಿಸಿದಾಗ ದೊರೆಯುವ ಬಣ್ಣಗಳ ಶ್ರೇಣಿ - ರೋಹಿತ
 
30. ಪ್ರಯೋಗಶಾಲೆಗಳಲ್ಲಿ ಬೆಳಕನ್ನು ವಿಭಜಿಸಿ ರೋಹಿತ ಪಡೆಯಲು ಬಳಸುವ ಸಾಧನ - ರೋಹಿತ ದರ್ಶಕ
 
31. ಪಾಸಿಟ್ರಾನ್ ಎಂದರೆ ಧನ ಎಲೆಕ್ಟ್ರಾನ್
 
32. ಸೂರ್ಯ ಮತ್ತು ನಕ್ಷತ್ರಗಳಲ್ಲಿರುವ ಧಾತುಗಳನ್ನು ಕಂಡು ಹಿಡಿಯಲು ಸಾಧ್ಯವಾಗಿರುವುದು - ರೋಹಿತದ ವಿಶ್ಲೇಷಣೆ
 
33. ಸೂರ್ಯಾಸ್ತ ಮತ್ತು ಸೂರ್ಯೋದಯಗಳ ಬಣ್ಣ ಕೆಂಪಾಗಿರಲು ಕಾರಣ - ಸೂರ್ಯನ ಬೆಳಕು ಗರಿಷ್ಠ ದೂರ ಚಲಿಸುವುದು
 
34. ದ್ರವ್ಯಗಳ ಅಣು ಸಂಯೋಜನೆಯ ಅಧ್ಯಯನಕ್ಕೆ ಬಳಸುವ ತತ್ವ - ರಾಮನ್ ಪರಿಣಾಮ
 
35. ವಾಯುವಿನಲ್ಲಿ ಶಬ್ದದ ಜವ - 300 ಮೀ / ಸೆಂ
 
36. ವಾಯುವಿಗಿಂತ ದ್ರವ ಮತ್ತು ಘನ ಪದಾರ್ಥಗಳಲ್ಲಿ ಶಬ್ದದ ಜವ - ಹೆಚ್ಚು
 
37. ಶ್ರವಣಾತೀತ ಶಬ್ದದ ಆವೃತ್ತಿ – 20 KHz
 
38. ಶುಷ್ಕ ಒಗೆತ, ಲೋಹದ ಅಚ್ಚುಗಳಲ್ಲಿ ಬಿರುಕು, ಕ್ರಿಮಿಶುದ್ಧಿಕಾರಕಗಳಲ್ಲಿ ಬಳಸುವ ತರಂಗಗಳು - ಶ್ರವಣಾತೀತ 
ತರಂಗಗಳು
 
39. ಮೂತ್ರಕೋಶದ ಕಲ್ಲು ಮತ್ತು ಪಿತ್ತ ಕಲ್ಲುಗಳನ್ನು ಪುಡಿಮಾಡಲು ಬಳಸುವ ತರಂಗಗಳು - ಶ್ರವಣಾತೀತ ತರಂಗಗಳು
 
40. SONAR ವಿಸ್ತ್ರತ ರೂಪ - Sound Navigation and Ranging.
 
41. ನೀರಿನಲ್ಲಿರುವ ವಸ್ತುಗಳ ಸ್ಥಾನ, ದೂರ, ದಿಕ್ಕು ಮತ್ತು ಚಲಿಸುತ್ತಿದ್ದರೆ, ಅವುಗಳ ಜನಗಳನ್ನು ಅಳತೆ ಮಾಡುವ ಸಾಧನ -  
ಸೊನಾರ್
 
42. ಗರ್ಭವನ್ನು ಪರೀಕ್ಷಿಸಲು ಬಳಸುವ ಸ್ಕ್ಯಾನರ್ - ಶ್ರವಣಾತೀತ ತರಂಗ ಸ್ಕ್ಯಾನರ್
 
43. ತರಂಗಗಳ ಆಕರ ಮತ್ತು ವೀಕ್ಷಕರ ನಡುವಿನ ಸಾಪೇಕ್ಷ ಚಲನೆಯಿಂದಾಗಿ ತರಂಗಗಳ ಆವೃತ್ತಿಯಲ್ಲಾಗುವ ತೋರಿಕೆಯ 
ಬದಲಾವಣೆ - ಡಾಪ್ಲರ್ ಪರಿಣಾಮ
 
44. ಚಲಿಸುತ್ತಿರುವ ವಾಹನಗಳ ವೇಗವನ್ನು ಪತ್ತೆಹಚ್ಚುವ ಸಾಧನ - ರಾಡಾರ್ ಗನ್
 
45. ಕೃತಕ ಉಪಗ್ರಹಗಳ ಜಾಡನ್ನು ಕಂಡುಹಿಡಿಯಲು ಬಳಸುವ ತತ್ವ - ಡಾಪ್ಲರ್ ಪರಿಣಾಮ
 
46. ನಿರ್ದಿಷ್ಟ ತರಂಗದೂರದ ಬೆಳಕನ್ನು ಉತ್ಸರ್ಜಿಸುವ ಆಕರವು ನಮ್ಮಿಂದ ದೂರ ಚಲಿಸುತ್ತಿದ್ದರೆ, ತರಂಗವು ದೃಗ್ಗೋಚರ 
ರೋಹಿತದಲ್ಲಿನ ಕೆಂಪು ತುದಿಗೆ ಪಲ್ಲಟವಾಗುವುದು - ಕೆಂಪು ಪಲ್ಲಟ
 
47. ನಕ್ಷತ ಗೆಲಾಕ್ಸಿಗಳ ಜವವನ್ನು ಕಂಡು ಹಿಡಿಯಲು ಬಳಸುವ ತತ್ವ – ಡಾಪ್ಲರ್ ಪರಿಣಾಮ
 
48. ವಿಕಿರಣ ಪಟುತ್ವವನ್ನು ಆವಿಷ್ಕರಿಸಿದವರು - ಹೆನ್ರಿ ಬೆಕ್ಚರಲ್
 
49. ಕೆಲವು ಧಾತುಗಳ ವಿಕಿರಣ ಪಟುತ್ವಕ್ಕೆ ಕಾರಣ - ಅಸ್ಥಿರ ಬಪೀಜ
 
50. ಲ್ಫಾ ಕಿರಣಗಳ ಆವೇಶ - ಧನ
 
51. ಲ್ಫಾ ಕಿರಣಗಳೆಂದರೆ - ಹೀಲಿಯಮ್ ಬೀಜಗಳು
 
52. ಬೀಟಾ ಕಿರಣಗಳೆಂದರೆ - ಇಲೆಕ್ಟ್ರಾನುಗಳು
 
53. ಒಂದು ಧಾತುವು ಆಲ್ಫಾ ಅಥವಾ ಬೀಟಾ ಕಿರಣಗಳನ್ನು ಉತ್ಸರ್ಜಿಸಿ ಇನ್ನೊಂದು ಧಾತುವಾಗಿ ಪರಿವರ್ತನೆಯಾಗುವ 
ಪ್ರಕ್ರಿಯೆಗೆ (TRANSMUTATION) - ದ್ರವ್ಯಾಂತರಣ
 
54. ರೇಡಿಯಂ ಬೀಜವು ಆಲ್ಫಾ ಕಣವನ್ನು ಉತ್ಸರ್ಜಿಸಿದಾಗ ದೊರೆಯುವ ಉತ್ಪನ್ನ - ರೆಡಾನ್
 
55. ವಿಕರಣ ಪಟುತ್ವವುಳ್ಳ ಧಾತುವು ಕಣವನ್ನು ಉತ್ಸರ್ಜಿಸಿದಾಗ, ಅದರ ಪರಮಾಣು ಸಂಖ್ಯೆಯ ಮೌಲ್ಯ 1 ರಿಂದ ಹೆಚ್ಚಾಗಲು 
ಕಾರಣ- ನ್ಯೂಟ್ರಾನ್ ಪರಿವರ್ತನೆಗೊಂಡು ಪ್ರೋಟಾನ್ ಮತ್ತು ಇಲೆಕ್ಟ್ರಾನ್ ಆಗುವುದು
 
56. ಯುರೇನಿಯಂ 238 ರ ಅರ್ಧಾಯುಷ್ಯ - 4.5 ಬಿಲಿಯನ್ ವರ್ಷಗಳು
 
57. ಒಂದೇ ಪರಮಾಣು ಸಂಖ್ಯೆಯಿದ್ದು, ಬೇರೆ ಬೇರೆ ರಾಶಿ ಸಂಖ್ಯೆಗಳನ್ನು ಹೊಂದಿರುವ ಒಂದೇ ಧಾತುವಿನ ಪರಮಾಣುಗಳುಐಸೋಟೋಪುಗಳು
 
58. ರೇಡಿಯೋ ಐಸೋಟೋಪುಗಳನ್ನು ಕೃತಕವಾಗಿ ತಯಾರಿಸಲು - ಮಂದ ನ್ಯೂಟ್ರಾನುಗಳಿಂದ ತಾಡನ ಮಾಡಬೇಕು.
 
59. ವ್ಯವಸಾಯದಲ್ಲಿ ಫಾಸ್ಟೇಟ್ ಅಗತ್ಯವನ್ನು ತಿಳಿಯಲು ಬಳಸುವ ರೇಡಿಯೋ ಐಸೋಟೋಪು - ರೇಡಿಯೋ ರಂಜಕ
 
60. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಐಸೋಟೋಪು ರೇಡಿಯೋ ಕೋಬಾಲ್ಟ್
 
61. ಪಳೆಯುಳಿಕೆಗಳ ವಯಸ್ಸನ್ನು ಅಂದಾಜು ಮಾಡಲು ಬಳಸುವ ಐಸೋಟೋಪು - ರೇಡಿಯೋಕಾರ್ಬನ್
 
62. ಪರಮಾಣು ಬೀಜದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನುಗಳನ್ನು ಒಟ್ಟು ಗೂಡಿಸಿರುವ ಶಕ್ತಿ - ಬೈಜಿಕ ಬಲ
 
63. ಐನ್ಸ್ಟೀನರ ರಾಶಿ - ಶಕ್ತಿ ಅಂತರ್ಪರಿವರ್ತನೀಯ ಸಮೀಕರಣದ ಪ್ರಕಾರ ಒಂದು ಮಿ.ಗ್ರಾಂ. ದ್ರವ್ಯವನ್ನು ಶಕ್ತಿಯಾಗಿ 
ಪರಿವರ್ತಿಸಿದರೆ ಸಿಗುವ ಶಕ್ತಿಯ ಪರಮಾಣುವಷ್ಟು - 9 x 1010 J
 
64. ಒಂದು ಭಾರ ಪರಮಾಣುವಿನ ಅಸ್ಥಿರ ಬೀಜವು ಒಡೆದು ಎರಡು ಮಧ್ಯಮ ಪ್ರಮಾಣದ ಬೀಜಗಳಾಗಿ ಅಗಾಧ ಪ್ರಮಾಣದ 
ಶಕ್ತಿ ಬಿಡುಗಡೆ ಯಾಗುವ ಕ್ರಿಯೆ- ಬೈಜಿಕ ವಿದಳನ
 
65. ಬೈಜಿಕ ವಿದಳನ ಪ್ರಕ್ರಿಯೆ ಕಂಡು ಹಿಡಿದವರು - ಆಟೋಹಾನ್ ಮತ್ತು ಫ್ರಿಜ್ ಸ್ಟ್ರಾಸ್ಮನ್
 
66. ಯುರೇನಿಯಂ 235 ಪರಮಾಣುಗಳನ್ನು ನ್ಯೂಟ್ರಾನುಗಳಿಂದ ತಾಡಿಸಿದಾಗ, ಉಂಟಾಗುವ ಮುರುಕುಗಳು - ಬೇರಿಯಂ,  
ಕ್ರಿಪ್ಪಾನ್
 
67. ವಿದಳನದಲ್ಲಿ ಉಂಟಾದ ನ್ಯೂಟ್ರಾನುಗಳು ವಿದಳನ ಕ್ರಿಯೆಯನ್ನು ಗುಣಕ ದೋಪಾದಿಯಲ್ಲಿ ಮುಂದುವರೆಸುವ ಪ್ರಕ್ರಿಯೆ -  
ಸರಪಳಿ ಕ್ರಿಯೆ
 
68. ವಿದಳನ ಸರಪಳಿ ಕ್ರಿಯೆಯನ್ನು ಸತತವಾಗಿರುವಂತೆ ಮಾಡುವ ವಿದಳನ ವಸ್ತುವಿನ ಕನಿಷ್ಠ ಗಾತ್ರ - ಕ್ರಾಂತಿಗಾತ್ರ
 
69. ಬೈಜಿಕ ಕ್ರಿಯಾಕಾರಿಯಲ್ಲಿ ವಿದಳನ ಕ್ರಿಯೆಯಲ್ಲಿ ಬಿಡುಗಡೆಯಾದ ಕ್ಷಿಪ್ರ ನ್ಯೂಟ್ರಾನುಗಳನ್ನು ನಿಧಾನಗೊಳಿಸುವ 
ಮಂದಕಾರಿ - ಗ್ರಾಫೈಟ್
 
70. ಬೈಜಿಕ ಕ್ರಿಯಾಕಾರಿಯಲ್ಲಿ ನ್ಯೂಟಾನುಗಳನ್ನು ಹೀರಿಕೊಂಡು ಕ್ರಿಯಾಕಾರಿಯನ್ನು ಸ್ಥಗಿತಗೊಳಿಸಲು ಬಳಸುವ ನಿಯಂತ್ರಕ 
ಸರಳುಗಳು - ಕ್ಯಾಡ್ಮಿಯಂ, ಬೋರಾನ್
 
71. ಉಷ್ಣ ಬೈಜಿಕ ಕ್ರಿಯೆಗಳು ನಡೆಯುವುದು - ಸೂರ್ಯನಲ್ಲಿ
 
72. ಹೈಡೋಜನ್ ಬಾಂಬಿನ ತತ್ವ - ಹೈಡೋಜನ್ ಬೀಜಗಳ ಅನಿಯಂತ್ರಿತ ಸಮ್ಮಿಲನ
 
73. ಹೈಡೋಜನ್ ಬೀಜಗಳ ಸಮ್ಮಿಲನ ಕ್ರಿಯೆಯಲ್ಲಿ ಭಾಗವಹಿಸುವ ಬೈಜಿಕ ಕ್ರಿಯಾವರ್ಧಕ ಇಂಗಾಲ
 
74. ಸೌರ ಒಲೆಯ ಪೆಟ್ಟಿಗೆಯ ಒಳ ಮೇಲ್ಮಗೆ ಕಪ್ಪು ಬಣ್ಣ ಹಚ್ಚುವ ಕಾರಣ - ಹೆಚ್ಚು ಶಕ್ತಿ ಹೀರಿಕೊಳ್ಳಲು
 
75. ಕೃತಕ ಉಪಗ್ರಹಗಳಲ್ಲಿ ಶಕ್ತಿಯ ಮುಖ್ಯ ಆಕರಗಳು - ಸೌರಕೋಶಗಳು
 
76. ಭೂಮಿಯು ಒಂದು ಕಾಂತದಂತೆ ವರ್ತಿಸುತ್ತದೆ ಎಂದು ಸಾಬೀತು ಪಡಿಸಿದವರು - ವಿಲಿಯಮ್ ಗಿಲ್ಬರ್ಟ್
 
77. ಪ್ರಬಲ ಕಾಂತಕ್ಷೇತ್ರಕ್ಕೊಳಗಾದಾಗ ಆ ಕ್ಷೇತ್ರದ ದಿಕ್ಕಿನಲ್ಲಿಯೇ ದುರ್ಬಲ ಕಾಂತತ್ವ ಪಡೆಯುವ ಪ್ಯಾರಾಕಾಂತೀಯ 
ವಸ್ತುಗಳು - ಪ್ಲಾಟಿನಂ, ಮೆಗ್ನೆಷಿಯಂ
 
78. ಶಾಶ್ವತ ಕಾಂತಗಳನ್ನು ತಯಾರಿಸಲು ಬಳಸುವ ಲೋಹಗಳು - ಕಬ್ಬಿಣ, ಕೋಬಾಲ್ಟ್, ನಿಕ್ಕಲ್ ಮತ್ತು ಉಕ್ಕು
 
79. ಕಾಂತದಿಂದ ಕಬ್ಬಿಣವನ್ನು ಉಜ್ಜಿದಾಗ ಕಬ್ಬಿಣ ಕಾಂತತ್ವ ಪಡೆಯಲು ಕಾರಣ - ಅಣುಗಳು ನಿರ್ದಿಷ್ಟ ದಿಕ್ಕಿನಲ್ಲಿ 
ಜೋಡಣೆಗೊಳ್ಳುತ್ತವೆ
 
80. ಕಾಂತಗಳನ್ನು ಬಿಸಿ ಮಾಡಿದಾಗ ಅಥವಾ ಎತ್ತಿ ಹಾಕಿದಾಗ ಕಾಂತತ್ವ ನಷ್ಟವಾಗಲು ಕಾರಣ - ಅಣುಕಾಂತಗಳ 
ಚದುರುವಿಕೆ
 
81. ರೋಗಗಳನ್ನು ಪತ್ತೆ ಹಚ್ಚಲು ಬಳಸುವ ಕಾಂತದ ತತ್ವ - ಕಾಂತೀಯ ಅನುರಣನ ಬಿಂಬನ
 
82. ಕಾಂತತ್ವದ ನಷ್ಟ ತಡೆಯಲು ಬಳಸುವ ರಕ್ಷಕ - ಮೃದು ಕಬ್ಬಿಣ
 
83. ಸೂರ್ಯನಿಂದ ಹೊಮ್ಮುವ ವಿದ್ಯುತ್ ಕಣಗಳು ಭೂ ಕಾಂತ ಕ್ಷೇತ್ರದ ಪ್ರಭಾವಕ್ಕೆ ಒಳಗಾಗಿ ವಾತಾವರಣದ ಅನಿಲಗಳನ್ನು ಅಯಾನೀಕರಿಸಿ ಬೆಳಕನ್ನು ಹೊಮ್ಮಿಸುವ ಪ್ರಕ್ರಿಯೆ - ಧ್ರುದಪ್ರಭ (ಅರೋರ)
 
84. ವಿದ್ಯುಚ್ಛಕ್ತಿಯ ಅಂತರರಾಷ್ಟ್ರೀಯ ಏಕಮಾನ - ಜೂಲ್
 
85. ವಿದ್ಯುತ್ ಸಾಮರ್ಥ್ಯದ ಅಂತರರಾಷ್ಟ್ರೀಯ ಏಕಮಾನ - ವ್ಯಾಟ್
 
86. ದ್ರಾವಣ ಸ್ಥಿತಿಯಲ್ಲಿದ್ದಾಗ ತಮ್ಮ ಮೂಲಕ ವಿದ್ಯುತ್ಹರಿಯಲು ಬಿಡುವ ಸಂಯುಕ್ತಗಳು - ಎಲೆಕ್ಟೋಲೈಟ್ಗಳು
 
87. ವಿದ್ಯುತ್ ಬಲ್ಬನ್ನು ರಚಿಸಿದ ವಿಜ್ಞಾನಿ - ಥಾಮಸ್ ಆಲ್ವ ಎಡಿಸನ್
 
88. ಶುಷ್ಕಕೋಸದಲ್ಲಿರುವ ಧನದ್ರುವ - ಗ್ರಾಫೈಟ್ ಕಡ್ಡಿ
 
89. ವಿದ್ಯುತ್ ಪ್ರವಾಹವಿರುವ ವಾಹಕದ ಸುತ್ತ ಉಂಟಾಗುವ ಕಾಂತೀಯ ಬಲರೇಖೆಗಳ ದಿಕ್ಕನ್ನು ಕಂಡುಹಿಡಿಯುವ - ಮ್ಯಾಕ್ಸ್ವೆಲ್ನ ಬಲಗೈ ಹಿಡಿಗಟ್ಟು ನಿಯಮ.
 
90. ವಾಹಕದಲ್ಲಿ ಹರಿಯುವ ವಿದ್ಯುತವಾಹದ ಪರಿಣಾಮವನ್ನು ಅಳೆಯಲು ಬಳಸುವ ಉಪಕರಣಗಳು, - ಆಮ್ಮೀಟರ್, ಗ್ಯಾಲ್ವನೋಮೀಟರ್
 
91. ಪರಮಾಣುವಿನ ಬೀಜ ಸ್ಥಿರತೆ ಕಾಪಾಡುವ ಬಲ - ಪ್ರಬಲ ಬೈಜಿಕ ಬಲ
 
92. ವಿದ್ಯುಪ್ರವಾಹದ ಅಂತರರಾಷ್ಟ್ರೀಯ ಏಕಮಾನ - ಆಂಪೇರ್
 
93. ವಿದ್ಯುತ್ ಚಾಲಕ ಬಲವನ್ನು ಅಳೆಯುವ ಉಪಕರಣ - ವೋಲ್ಡ್ ಮೀಟರ್
 
94. ವಾಹಕ ತಂತಿಯ ಉದ್ದ ಹೆಚ್ಚಾದರೆ, ತೆಳುವಾದರೆ, ತಾಪ ಹೆಚ್ಚಾದರೆ ಅದರ ವಿದ್ಯುತ್ ರೋಧವು - ಹೆಚ್ಚುತ್ತದೆ
 
95. ವಾಹಕ ತಂತಿಯ ತೆಳುವಾದಾಗ ವಿದ್ಯುತ್ ರೋಧವು ಹೆಚ್ಚಲು ಕಾರಣ - ಎಲೆಕ್ಟ್ರಾನುಗಳ ಚಲನೆಗೆ ಕಡಿಮೆ ಸ್ಥಳಾವಕಾಶ
 
96. ವಿದ್ಯುತ್ ಮಂಡಲದಲ್ಲಿ ವಿದ್ಯುತ್ ರೋಧವನ್ನು ಏರಿಳಿಸಲು ಬಳಸುವ ಸಾಧನ - ರಿಯೋಸ್ಟಾಟ್
 
97. ವಿದ್ಯುತ್ ಮಂಡಲದಲ್ಲಿನ ಉಪಕರಣಗಳಲ್ಲಿ ಸೋರಿದ ವಿದ್ಯುತ್ತಿನಿಂದ ಆಘಾತಗಳನ್ನು ತಪ್ಪಿಸುವುದು - ಭೂಸಂಪರ್ಕ ತಂತಿ
 
98. ವಿವಿಧ ಬಣ್ಣಗಳ ಬೆಳಕಿಗೆ ಕಾರಣ - (ಲ್ಯಾಂಬ್ಡಾ) ಬೇರೆ ಬೇರೆ ತರಂಗಾಂತರಗಳು
 
99.ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಲಂಬವಾಗಿ ಪ್ರಸಾರವಾದರೆ - ವಕ್ರೀಭವನವಾಗುವುದಿಲ್ಲ
 
100.  ಬೆಳಕು ಸಾಂದ್ರ ಮಾಧ್ಯಮದಿಂದ ವಿರಳ ಮಾಧ್ಯಮಕ್ಕೆ ದಾಟುವಾಗ ಯಾವ ಕಡೆಗೆ ಬಾಗುತ್ತದೆ - ಲಂಬದಿಂದ ದೂರ
 
101.ಯಾವುದೇ ಎರಡು ಮಾಧ್ಯಮಗಳಿಗೆ ಸಂಬಂಧಿಸಿದಂತೆ ಪತನ ಕೋನದ ಸೈನು ಮತ್ತು ವಕ್ರಿಮ ಕೋನದ ಸೈನುಗಳ ನಿಷ್ಪತ್ತಿ ಸ್ಥಿರವಾಗಿರುತ್ತದೆನ್ನುವ ನಿಯಮ - ಸೈಲ್ಸ್ನ ನಿಯಮ
 
 
 
 
 
......... END .......