.......... ಪರಿವಿಡಿ ..........

1)  7 ನೇ ತರಗತಿ ವಿಜ್ಞಾನ

  • ಜೀವಕೋಶಗಳ ಅಧ್ಯಯನ
  • ಪ್ರಾಣಿಗಳಲ್ಲಿ ನರವ್ಯೂಹ
  • ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ  
  • ನೀರು 
  • ಅನುವಂಶೀಯವಾಗಿ ಬರುವ ರೋಗಗಳು: 
  • ಆಮ್ಲ

 8ನೇ ತರಗತಿ ವಿಜ್ಞಾನ

8ನೇ ತರಗತಿ ಜೀವ ಶಾಸ್ತ್ರ

9ನೇ ತರಗತಿ ಭೌತ ಶಾಸ್ತ್ರ

9ನೇ ತರಗತಿ ಜೀವ ಶಾಸ್ತ್ರ

10ನೇ ತರಗತಿ ಭೌತಶಾಸ್ತ್ರ

10ನೇ ತರಗತಿ ಜೀವಶಾಸ್ತ್ರ

 .................................

 

 

7ನೇ ತರಗತಿ ವಿಜ್ಞಾನ
 
ಜೀವಕೋಶಗಳ ಅಧ್ಯಯನ
 (1) ಪ್ರತಿಯೊಂದು ಜೀವಕೋಶ 3 ಪ್ರಮುಖ ಭಾಗಗಳಿಂದ ಕೂಡಿದೆ.
1. ಕೋಶಪೊರೆ,

2. ಕೋಶದ್ರವ್ಯ
3. ಕೋಶ ಕೇಂದ್ರ
 
(2) ಕೋಶಪೊರೆ, ಕೋಶ ಕೇಂದ್ರದ ಮಧ್ಯೆ ಕೋಶ ದ್ರವ್ಯವಿರುತ್ತದೆ.
 
(3) ಕೋಶ ದ್ರವ್ಯದಲ್ಲಿ ಅನೇಕ ರೀತಿಯ ಕಣದಂಗಗಳು ಕಂಡುಬರುತ್ತವೆ.
 
(4) ಗಾಲ್ಗಿ ಸಂಕೀರ್ಣ ಜೀವಕೋಶಗಳಿಗೆ ಬೇಕಾದ “ಕಿಣ್ವಗಳನ್ನು” ಉತ್ಪಾದಿಸ್ಮತ್ತದೆ.
 
(5) “ಕೋಶರಸಾಂತರ ಜಾಲ ”ಪ್ರೋಟೀನ್” ಉತ್ಪಾದನೆ ಮತ್ತು ಸಂಗ್ರಹ ಕಾರ್ಯದಲ್ಲಿ ಸಹಾಯವಾಗುತ್ತವೆ.
 
(6) “ಕೋಶಬೀಜ” ಜೀವಕೋಶದ ಮಧ್ಯಬಾಗದಲ್ಲಿದ್ದು, ಜೀವಕೋಶದ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.
(7) ಜೀವಕೋಶದ ಒಂದು ಭಾಗವಾದ ಅತ್ಯಂತ ಪ್ರಮುಖ ಭಾಗವಾಗಿದ್ದು, ಇದರಲ್ಲಿ DNA & RNA ಗಳಿದ್ದು, ಇದು ದಾರದಂತಹ ರಚನೆಗಳಿಂದ ಕೂಡಿರುತ್ತದೆ.
(8) “ಸೆಂಟ್ರಿಯೋಲ್” ಕೋಶ ವಿಭಜನೆಯ ಸಂದರ್ಭದಲ್ಲಿ ಕದಿರಿನ ಎಳೆಗಳನ್ನು ಉತ್ಪತ್ತಿ ಮಾಡುತ್ತದೆ.
(9) ಲೈಸೋಜೋಮ್” ಜೀವಕೋಶದ “ಆತ್ಮಹತ್ಯಾ ಸಂಚಿ" ಎಂದು ಕರೆಯುವರು.
(10) ಜೀವಕೋಶವನ್ನು ಕಂಡುಹಿಡಿದ ವಿಜ್ಞಾನಿ “ರಾಬರ್ಟ್ ಹುಕ್”
(11) ಸೂಕ್ಷ್ಮದರ್ಶಕವನ್ನು ಕಂಡುಹಿಡಿದ ವಿಜ್ಞಾನಿ “ಲೆವೆನ್ ಹುಕ್”
(12) ಆಸ್ಟ್ರಿಚ್ ಪಕ್ಷಿಯ ಮೊಟ್ಟೆ “ಏಕಕೋಶದ್ದಾಗಿದೆ”
(13) ಅಮಿಬಾ, ಯೂಗ್ಲೀನಾ, ಪ್ಯಾರಮೀಸಿಯಂ ಇವುಗಳು ಏಕಕೋಶ ಜೀವಿಗಳಾಗಿವೆ.
(14) ದೇಹದ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು “ಅಂಗಾಂಶ” ಸಹಾಯ ಮಾಡುತ್ತವೆ.
(15) ರಕ್ತ, ಮೂಳೆ, ಅಸ್ತಿಮಜ್ಜು ಇವುಗಳು ಸಂಯೋಜಕ ಅಂಗಾಂಶವಾಗಿದೆ.
(16) ಚರ್ಮ ಮತ್ತು ನರ ಅನುಲೇಪಕ ಅಂಗಾಂಶವಾಗಿದೆ.
(17) ಸ್ನಾಯು-ಅಂಗಾಂಶ ಸ್ಥಿತಿಸ್ಥಾಪಕ ಶಕ್ತಿಯನ್ನು ಹೊಂದಿದ್ದು, “ಚಲನೆಗೆ ಸಹಾಯ" ಮಾಡುತ್ತದೆ.
(18) ಸಸ್ಯ ಅಂಗಾಂಶವನ್ನು ರಕ್ಷಕ ಅಂಗಾಂಶ, ವಾಹಕ ಅಂಗಾಂಶ, ಆಧಾರ ಅಂಗಾಂಶ, ಮತ್ತು ವರ್ಧನ ಅಂಗಾಂಶ, ಎಂದು ವಿಭಾಗಿಸಬಹುದು.
(19) ಸೈಲಂ: ನೀರ್ಗೋಳವೆ :: ಪ್ಲೋಯಂ: ಆಹಾರ ಕೊಳವೆ
(20) ತೆಂಗಿನ ನಾರು : ಆಧಾರ ಅಂಗಾಂಶಕ್ಕೆ ಉದಾಹರಣೆ
(21) “ವರ್ಧನ ಅಂಗಾಂಶ” ಎಲ್ಲಾ ಸಸ್ಯ ಅಂಗಾಂಶಗಳ ಉತ್ಪಾದನಾ ಕೇಂದ್ರವಾಗಿದೆ. ಇದು ಯಾವಾಗಲೂ ಬೆಳೆಯುತ್ತಿರುತ್ತವೆ.
(22) ಯಾವುದು ಸ್ಥಳವನ್ನು ಅಕ್ರಮಿಸುತ್ತದೆಯೋ ಮತ್ತು ದ್ರವ್ಯರಾಶಿಯನ್ನು ಹೊಂದಿವೆಯೋ ಅದೇ ದ್ರವ್ಯ.
(23) ದ್ರವ್ಯವು ಅಧಿಕ ಉಷ್ಣತೆಯಲ್ಲಿ ಪ್ಲಾಸ್ಮಾ ಸ್ಥಿತಿಯಾಗಿರುತ್ತದೆ.
(24) “ ಆಕ್ಸಿ ಅಸಿಟಲೀನ್ ” ಜ್ವಾಲೆ ಪ್ಲಾಸ್ಮಾ ಸ್ಥಿತಿಗೆ ಉದಾಹರಣೆಯಾಗಿದ್ದು, ಇದನ್ನು ಲೋಹದ ಬೆಸುಗೆಯಲ್ಲಿ ಬಳಸುತ್ತಾರೆ.
(25) “ ಹೀಲಿಯಂ ”  ಅನಿಲ ರೂಪದ ಮೂಲವಸ್ತುವಾಗಿದೆ. (ತಟಸ್ಥವಾಗಿರುವ ವಸ್ತುವಾಗಿದೆ)
(26) ರಂಜಕ, ಸೋಡಿಯಂ, ಇಂಗಾಲ ಇವು ಫನರೂಪದ ಮೂಲ ವಸ್ತುವಾಗಿದೆ.
(27) ‘109’ ಮೂಲ ವಸ್ತುಗಳಿದ್ದು, ಪ್ರಾಕೃತಿಕವಾಗಿ 92 ಮಾತ್ರ ಸಿಗುತ್ತವೆ. ಉಳಿದವುಗಳನ್ನು ಪ್ರಯೋಗಾಲಯದಲ್ಲಿ ತಯಾರಿಸುತ್ತಾರೆ.
(28) ಸೋಡಿಯಂ ಒಂದು ಲೋಹವಾಗಿದೆ.
(29) ವಸ್ತುಗಳು ಯಾವುದರಿಂದ ರಚನೆಯಾಗಿವೆ ಎಂದು ತಿಳಿಯಲು ನಡೆಸಿದ ಸಂಶೋಧನೆಯನ್ನು “ಆಲ್‍ಕೆಮಿ” ಅಥವಾ “ಕಸವಾದ” ಎಂದು ಕರೆಯುತ್ತಾರೆ.
(30) ಬೇರೆ ಬೇರೆ ಮೂಲವಸ್ತುಗಳಲ್ಲಿರುವ ಪರಮಾಣುಗಳು ಬಿನ್ನವಾಗಿರುತ್ತವೆ.
(31) ಲೋಹಗಳ ಸಂಕೇತಗಳು :
Ag- ಬೆಳ್ಳಿ ,
Au-ಚಿನ್ನ
Hg- ಪಾದರಸ
Sn-ತವರ
Pb-ಸೀಸ
Na-ಸೋಡಿಯಂ  
K-ಪೊಟ್ಯಾಸಿಯಂ
(32) ಪರಮಾಣುಗಳ ವೈವಿಧ್ಯತೆಯೇ ಮೂಲವಸ್ತುಗಳ ಸೃಷ್ಠಿಗೆ ಕಾರಣವಾಗಿದೆ.
(33) ಮೂಲವಸ್ತು ಅಥವಾ ಸಂಯುಕ್ತ ವಸ್ತುವಿನ ಅತ್ಯಂತ ಸ್ವತಂತ್ರ ಕಣವನ್ನು ಅಣು ಎಂದು ಕರೆಯುವರು.
(34) ಅಣುವಿನಲ್ಲಿರುವ ಪರಮಾಣು ಸಂಖ್ಯೆಯನ್ನು ಸಂಕೇತದ ಮೂಲಕ ತಿಳಿಯುವುದಕ್ಕೆ “ಅಣುಸೂತ್ರ” ಎನ್ನುವರು.
(35) ಪ್ರತಿಫಲನದಲ್ಲಿ ಪತನಕೋನ ಪ್ರತಿಫಲನ ಕೋನಕ್ಕೆ ಸಮವಾಗಿರುವುದು.
(36) ಸಮತಲ ದರ್ಪಣದಲ್ಲಿ ಪ್ರತಿಬಿಂಬ ವಿಥ್ಯಾ ಪ್ರತಿಬಿಂಬವಾಗಿರುತ್ತದೆ. ವಸ್ತುವಿನ ಗಾತ್ರದಷ್ಟು ಇರುತ್ತದೆ “ಪಾಶ್ರ್ವ ವಿಪರ್ಯಾಯಕ್ಕೆ “ ಒಳಗಾಗುತ್ತದೆ.
(37) ಪ್ರತಿಬಿಂಬ ಕನ್ನಡಿಯ ಹಿಂದಕ್ಕೆ ಉಂಟಾದಂತೆ ಭಾಸವಾದರೆ ಅದನ್ನು ಮಿಥ್ಯಾಪ್ರತಿಬಿಂಬ ಎನ್ನುವರು
(38) ನೋಟದ ನೇರಕ್ಕಿಲ್ಲದ ಅಥವಾ ಬೇರೆ ಎತ್ತರದಲ್ಲಿರುವ ದೃಶ್ಯಗಳನ್ನು ನೋಡಲು “ಪರಿಯೋಸ್ಕೋಪ್“ ಗಳನ್ನು ಉಪಯೋಗಿಸುತ್ತಾರೆ.
(39) ಸಬ್‍ಮೆರೀನ್‍ಗಳಲ್ಲಿ ನೀರಿನ ಮೇಲಿನ ದೃಶ್ಯಗಳನ್ನು ನೋಡಲು “ಪೆರಿಯೋಸ್ಕೋಪ್” ಗಳನ್ನು ಬಳಸುತ್ತಾರೆ.
(40) ಸಮತಲದರ್ಪಣ ವನ್ನು ಸೌರಓಲೆಗಳಲ್ಲಿ ಸೂರ್ಯನ ಕಿರಣಗಳು ಓಲೆಯ ಒಳಭಾಗಕ್ಕೆ ಪ್ರತಿಫಲಿಸಲು ಉಪಯೋಗಿಸುತ್ತಾರೆ.
(41) ನುಣುಪಾದ ಮೆರಗುಗೊಳಿಸಿದ ಮೇಲ್ಮೈಯನ್ನು ದರ್ಪಣ ಎನ್ನುತ್ತಾರೆ.
(42) ಸಮತಲ ದರ್ಪಣವನ್ನು ಸೂಕ್ಷ್ಮ ದರ್ಶಕದಲ್ಲಿ ಬೆಳಕನ್ನು ವಸ್ತುವಿನ ಮೇಲೆ ಬೀಳುವಂತೆ ಮಾಡಲು ಉಪಯೋಗಿಸುತ್ತಾರೆ.
(43) ಕಿರಣಗಳು ತಗ್ಗಿನ ಭಾಗದ ಮೂಲಕ ಪ್ರತಿಫಲಿಸುವಂತಿದ್ದರೆ ಅದು ನಿಮ್ನದರ್ಪಣ. ಇಲ್ಲಿ ಕಿರಣಗಳು ಚೆದುರುತ್ತವೆ.
(44) ಕಿರಣಗಳು ಉಬ್ಬಿನ ಭಾಗದ ಮೂಲಕ ಪ್ರತಿಫಲಿಸುವಂತಿದ್ದರೆ ಅದು ಪೀನದರ್ಪಣ, ಇಲ್ಲಿ ಕಿರಣಗಳು ಕೇಂದ್ರೀಕೃತವಾಗುತ್ತದೆ.
(45) ನಿಮ್ನದರ್ಪಣದ ಪ್ರಧಾನ ಅಕ್ಷದ ಸಮಾಂತರವಾಗಿ ಚಲಿಸುವ ಯಾವುದೇ ಕಿರಣವು ಪ್ರತಿಫಲನದ ಬಳಿಕ ಪ್ರಧಾನ ಸಂಗಮದ ಮೂಲಕ ಹಾದು ಹೋಗುತ್ತದೆ.
(46) ನಿಮ್ನ ದರ್ಪಣದಲ್ಲಿ ಉಂಟಾಗುವ ಪ್ರತಿಬಿಂಬವು ಸತ್ಯ ಪ್ರತಿಬಿಂಬವಾಗಿದ್ದು, ಸ್ಥಾನವನ್ನು ಅನುಸರಿಸಿ ವಸ್ತುವಿನ ಗಾತ್ರದಲ್ಲಿ ವ್ಯತ್ಯಾಸವುಂಟಾಗುತ್ತದೆ. ಪ್ರತಿಬಿಂಬವು ತಲೆಕೆಳಗಾಗಿರುತ್ತದೆ. (ಫಿಲಂ ಪ್ರೋಜೆಕ್ಟರ್)
(47) ಪೀನದರ್ಪಣದಲ್ಲಿ ಪ್ರತಿಬಿಂಬವು ವಿಥ್ಯಾ ಪ್ರತಿಬಿಂಬವಾಗಿದ್ದು, ನೇರವಾಗಿರುತ್ತದೆ. ಮತ್ತು ವಸ್ತುವಿಗಿಂತ ಚಿಕ್ಕದಾಗಿರುತ್ತದೆ.
(48) ಸತ್ಯಪ್ರತಿಬಿಂಬವು ತಲೆಕೆಳಗಾಗಿ ಕಾಣುತ್ತದೆ - ನಿಮ್ನ
(49) ಮಿಥ್ಯಾ ಪ್ರತಿಬಿಂಬ ನೇರವಾಗಿ ಕಾಣುತ್ತದೆ ಮತ್ತು ಗಾತ್ರ ಂಕ್ಕದಾಗಿರುತ್ತದೆ. - ಪೀನ
(50) ಟಾರ್ಚ್ ಲೈಟ್ ಮತ್ತು ಹೆಡ್ ಲೈಟ್‍ಗಳಲ್ಲಿ ಬಲ್ಪನ್ನು ಪ್ರಧಾನ ಸಂಗಮದಲ್ಲಿಟ್ಟಿರುತ್ತಾರೆ. ಇದರಿಂದ ಬೆಳಕು ಪ್ರತಿಫಲಿಸಿ ಸಮಾಂತರವಾಗಿ ಚಲಿಸುತ್ತದೆ.
(51) ಪೀನದರ್ಪಣವು ವಸ್ತುವಿನ ಂಕ್ಕದಾದ ಪ್ರತಿಬಿಂಬವನ್ನು ಮೂಡಿಸುತ್ತದೆ.
(52) ಪೀನದರ್ಪಣವನ್ನು ವಾಹನದ ಹಿನ್ನೋಟವಾಗಿ ಬಳಸುತ್ತಾರೆ. ಮತ್ತು ಬೀದಿ ದೀಪಗಳಲ್ಲಿ ಬಳಸುತ್ತಾರೆ.
(53) “ಕೆಲಡಿಯೋಸ್ಕೋಪ್” (ಬಹುರೂಪದರ್ಶಕ) ಆವರ್ತ ಪ್ರತಿಫಲನದಿಂದ ಆಕರ್ಶಕ ವಿನ್ಯಾಸಗಳನ್ನು ಪಡೆಯಲು ಉಪಯೋಗಿಸುತ್ತಾರೆ.
(54) ನಾಯಿಕೊಡೆ ಬ್ಯಾಕ್ಟೀರಿಯಾಗಳು ತಮ್ಮ ಆಹಾರಕ್ಕಾಗಿ ಸಾವಯವ ಪದಾರ್ಥಗಳನ್ನು ಅವಲಂಬಿಸಿದೆ ಇವುಗಳನ್ನು ಕೊಳೆತಿನಿಗಳು ಎನ್ನುವರು.
(55) ಕೀಟಹಾರಿ ಸಸ್ಯಗಳು “ಸಸಾರಜನಕದ ಕೊರತೆಯಿಂದ ಕೀಟಹಾರಿ ಸಸ್ಯಗಳನ್ನು ಅವಲಂಬಿಸಿದೆ. ಉದಾ: ನೊಣದ ಬೋನು, ಹೂಜಿಗಿಡ, ಇಬ್ಬನಿಗಿಡ.
(56) ಅಮಿಬಾ ತಮ್ಮ ಆಹಾರವನ್ನು ಮಿಥ್ಯಾಪಾದಗಳ ಸಹಾಯದಿಂದ ನೀರಿನಿಂದ ಪಡೆಯುತ್ತವೆ.ಹೈಡ್ರಾ ಒಂದು ಸರಳ ಬಹುಕೋಶೀಯ ಜೀವಿ. ಇದು ಸ್ಪರ್ಶಾಂಗಗಳ ಸಹಾಯದಿಂದ ಅಹಾರವನ್ನು ಹಿಡಿಯುತ್ತವೆ. ಇವೆರಡರ ಉಸಿರಾಟವನ್ನು ವಿಸರಣಾ ಕ್ರಿಯೆ ಎಂದು ಕರೆಯುತ್ತಾರೆ.
(57) ಎರೆಹುಳು, ಜಿರಲೆ, ಮೀನು, ಕಪ್ಪೆ, ಮುಂತಾದ ಮೇಲ್ಮಟ್ಟದ ಜೀವಿಗಳಲ್ಲಿ ನಿರ್ದಿಷ್ಟ ಅಂಗಗಳ ಮೂಲಕ ಜೀರ್ಣಕ್ರಿಯೆ ನಡೆಯುತ್ತದೆ.
(58) ಉಸಿರಾಟವೆಂಬ ಜೀವಕ್ರಿಯೆಯಿಂದ ಶಕ್ತಿಯು ಬಿಡುಗಡೆಯಾಗುತ್ತದೆ. ಇಲ್ಲಿ ರಾಸಾಯನಿಕ ಶಕ್ತಿಯು ಶಾಖ ಶಕ್ತಿಯಾಗಿ ಬಿಡುಗಡೆಯಾಗುತ್ತದೆ.
(59) ಶಿಲಿಂದ್ರ, ಬ್ಯಾಕ್ಟೀರಿಯಾಗಳು ಆಮ್ಲಜನಕದ ಸಹಾಯವಿಲ್ಲದೆ ಉಸಿರಾಡಬಲ್ಲವು.
(60) ಸಸ್ಯಗಳು ಉಸಿರಾಟ ಕ್ರಿಯೆಯಲ್ಲಿ ಆಮ್ಲಜನಕವನ್ನು ಉಪಯೋಗಿಸುತ್ತವೆ. ದ್ಯುತಿಸಂಶ್ಲೇಶಣೆ ಕ್ರಿಯೆಯಲ್ಲಿ ಇಂಗಾಲದ-ಡೈ-ಆಕ್ಸೈಡ್ ಅನ್ನು ಉಪಯೋಗಿಸುತ್ತವೆ. ಅಂದರೆ ಸಸ್ಯಗಳು ರಾತ್ರಿ ಇಂಗಾಲದ-ಡೈ-ಆಕ್ಸೈಡ್ ಬಿಡುಗಡೆಗೊಳಿಸುತ್ತವೆ. ಹಗಲಿನಲ್ಲಿ ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತವೆ.
(61) ಅಮೀಬಾ ಮತ್ತು ಹೈಡ್ರಾ ಉಸಿರಾಟ ಕ್ರಿಯೆಗೆ ವಿಶೇಷ ಅಂಗಗಳಿಲ್ಲ. ಇವು ವಿಸರಣೆಯಿಂದ ಉಸಿರಾಡುತ್ತವೆ.
(62) ಎರೆಹುಳು, ಜಿಗಣೆ ಇವುಗಳಿಗೂ ಉಸಿರಾಟ ಕ್ರಿಯೆಗೆ ವಿಶೇಷ ಅಂಗಗಳಿಲ್ಲ. ತೇವಭರಿತ ಚರ್ಮದಿಂದ ವಿಸರಣಕ್ರಿಯೆಯಿಂದ ಉಸಿರಾಡುತ್ತವೆ.
(63) ಭೂವಾಸಿ ಕಪ್ಪೆಯು ತೇವಭರಿತ ಚರ್ಮ ಮತ್ತು ಶ್ವಾಸಕೋಶದಿಂದ ಉಸಿರಾಡುತ್ತದೆ.
(64) ಸೇವಿಸುವ ಆಹಾರ ಜೀವಕೋಶಗಳ ಕ್ರಿಯೆಗೆ ಅತ್ಯವಶ್ಯಕವಾದದ್ದು.
(65) ಏಕಕೋಶೀಯ ಜೀವಿಗಳು ಆಹಾರವನ್ನು ನೇರವಾಗಿ ಪಡೆದು ವಾತಾವರಣಕ್ಕೆ ನೇರವಾಗಿ ಬಿಡುತ್ತವೆ.
(66) ಕೆಳವರ್ಗದ ಸಸ್ಯಗಳಾದ ಪಾಂಗಳಲ್ಲಿ ಆಹಾರವು ವಿಸರಣೆ ಕ್ರಿಯೆಯಿಂದ ಒಂದು ಕೋಶದಿಂದ ಮತ್ತೋಂದು ಕೋಶಕ್ಕೆ ಸಾಗಿಸಲ್ಪಡುತ್ತದೆ.
(67) ಮಾನವ ದೇಹದಲ್ಲಿ ಸಾಗಾಣಿಕಾ ವ್ಯೂಹದಲ್ಲಿ ಸಾಗಾಣಿಕಾ ವ್ಯೂಹದಲ್ಲಿ ಹೃದಯ, ರಕ್ತನಾಳ, ರಕ್ತವನ್ನು ಒಳಗೋಂಡ ಸಾಗಾಣಿಕ ವ್ಯೂಹವಿದೆ.
(68) ಅಪಧಮನಿಗಳಲ್ಲಿ ಹರಿಯುವಾಗ ರಕ್ತ ಅಲೆಗಳಂತಹ ಚಲನೆ ಉಂಟಾಗುತ್ತದೆ. ಇದನ್ನು ನಾಡಿ ಎಂದು ಕರೆಯುತ್ತಾರೆ.
(69) ಅಭಿದಮನಿ, ಅಪಧಮನಿ, ಲೋಮನಾಳ ಇವು ಹೃದಯದ ರಕ್ತನಾಳಗಳು.
(70) ಆಮ್ಲಜನಕ ರಹಿತ ರಕ್ತ ಶ್ವಾಸಕ ಪರಿಚಲನೆಯಲ್ಲಿರುತ್ತದೆ.
(71) ಆಮ್ಲಜನಕ ಸಹಿತ ರಕ್ತ ದೈಹಿಕ ಪರಿಚಲನೆಯಲ್ಲಿರುತ್ತದೆ.
(72) ರಕ್ತ ದ್ರವರೂಪದ ಅಂಗಾಂಶವಾಗಿದೆ, ರಕ್ತವನ್ನು 4 ಭಾಗಗಳಾಗಿ ವಿಂಗಡಿಸಲಾಗಿದೆ. ರಕ್ತದಲ್ಲಿ ದ್ರವರೂಪದ ರಕ್ತ, ಘನರೂಪದ ರಕ್ತ ಎಂದು ವಿಂಗಡಿಸಬಹುದು. ಪ್ಲಾಸ್ಮಾ, ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಮತ್ತು ಕಿರುತಟ್ಟೆ, ಇವು ರಕ್ತದ 4 ವಿಧಗಳು.
(73) ಪ್ಲಾಸ್ಮಾ ದ್ರವರೂಪದ ರಕ್ತವಾಗಿದೆ. ಇದರಲ್ಲಿ ಶೇ. 90 % ಭಾಗ ನೀರು ಇದೆ.
(74) ಕೆಂಪುರಕ್ತ ಕಣ ಇದು ಫನರೂಪದ್ದಾಗಿದೆ. ಹಿಮೋಗ್ಲೋಬಿನ್ ಎಂಬ ಕೆಂಪು ವರ್ಣಕವನ್ನು ಹೊಂದಿದೆ. ಇದು ಆಮ್ಲಜನಕವನ್ನು ದೇಹದ ನಾನಾ ಭಾಗಗಳಿಗೆ ಕೊಂಡೊಯ್ಯುತ್ತದೆ.
(75) ಬಿಳಿರಕ್ತ ಕಣ ಇದು ಘನರೂಪದ್ದಾಗಿದೆ. ರೋಗಾಣುಗಳನ್ನು ನಾಶಪಡಿಸುತ್ತದೆ.
(76) ಕಿರುತಟ್ಟೆ - ಘನರೂಪವನ್ನು ಹೊಂದಿದೆ. ರಕ್ತ ಹೆಪ್ಪುಗಟ್ಟಲ್ಲು ಸಹಾಯ ಮಾಡುತ್ತದೆ. (ವಿಟಮೀನ್-ಕೆ)
(77) ಪ್ಲಾಸ್ಮಾ ಮತ್ತು ಕೆಂಪು ರಕ್ತಕಣಗಳಲ್ಲಿರುವ ಅಂಟಿಜೆನ್ ಮತ್ತು ಆಂಟಿಬಾಡಿಗಳೆಂಬ ಸಸಾರಜನಕಗಳ ಆಧಾರದ ಮೇಲೆ ರಕ್ತವನ್ನು 4 ಗುಂಪುಗಳಾಗಿ ವಿಂಗಡಿಸಬಹುದು. (ಎ.ಬಿ.ಒ ಮತ್ತು ಎಬಿ)
(78) ಶಸ್ತ್ರಕ್ರಿಯೆಯ ನಂತರ ರೋಗಿಗೆ ರಕ್ತವನ್ನು ನೀಡುವುದಕ್ಕೆ ‘ರಕ್ತಪೋರಣ’ ಎನ್ನುವರು.
(79) ರಕ್ತದ ಬಣ್ಣ ಮಾನವನಲ್ಲಿ ಕೆಂಪು, ಜಿರಲೆ - ಬಿಳಿ, ಸೀಗಡಿಮೀನು - ಹಸಿರು, ನಕ್ಷತ್ರ ಮೀನು - ನೀಲಿ
(80) ಪ್ರಾಣಿಗಳಂತೆ ಸಸ್ಯಗಳು ಉಸಿರಾಟಕ್ಕೆ ಆಮ್ಲಜನಕವನ್ನು ಉಪಯೋಗಿಸುತ್ತವೆ. ಬ್ಯಾಕ್ಟೀರಿಯಾ, ಬಂತುಹುಳು, ಕೊಕ್ಕೆಹುಳು, ಇವು ಸಜೀವಿಗಳಿಂದ ಆಹಾರ ಪಡೆಯುತ್ತವೆ. ಇವುಗಳನ್ನು ಪರೋಪಜೀವಿಗಳೆಂದು ಕರೆಯುತ್ತಾರೆ. (PARASITES)

ಪ್ರಾಣಿಗಳಲ್ಲಿ ನರವ್ಯೂಹ
(81) ಸೆರಬ್ರಮ್’ ಜ್ಞಾನೇಂದ್ರಿಯಗಳ ಸಂದೇಶವನ್ನು ಗ್ರಹಿಸುತ್ತದೆ. ಹಾಗೂ ಜ್ಞಾಪಕದ ಕೇಂದ್ರವಾಗಿರುವುದು ಮುಮ್ಮೆದುಳು ಇದು ಅತಿ ಗಟ್ಟಿಯಾದ ದೊಡ್ಡದಾಗಿರುತ್ತದೆ.
(82) ಹಿಮ್ಮೆದುಳು’ ಇದು ಸ್ನಾಯುಗಳ ಚಟುವಟಿಕೆಯನ್ನು ನಿಯಂತ್ರಿಸುತ್ತದೆ.
(83) ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ವ್ಯಕ್ತಪಡಿಸಲು ಸರವ್ಯೂಹ ಸಹಾಯ ಮಾಡುತ್ತದೆ.
(84) ಅಮಿಭಾ ತನ್ನ ಕೋಶಪೊರೆಯಿಂದ ಅಥವಾ ಕೋಶದ ಮೇಲ್ಮೈಯಿಂದ ಪ್ರಚೋದನೆಯನ್ನು ಗ್ರಹಿಸುತ್ತದೆ. ಪ್ಲನೇರಿಯಾ ನರಗ್ರಂಥಿಗಳಿಂದ, ಎರೆಹುಳು ಮತ್ತು ಕೀಟಗಳಲ್ಲಿ ನರಗ್ರಂಥಿಗಳಿಂದ ಆದ ಮೆದುಳು ಇರುತ್ತದೆ.
(85) ಹೈಡ್ರಾ, ಪ್ಲನೇರಿಯಾ, ಸರಳ ಬಹುಕೋಶೀಯ ಜೀವಿಗಳಾಗಿವೆ.
(86) ಮೀನು, ಕಪ್ಪೆ, ಪಕ್ಷಿ, ಸರಿಸೃಪ, ಸಸ್ತನಿಗಳಲ್ಲಿ ಸಂಕೀರ್ಣವಾದ ನರವ್ಯೂಹವಿರುತ್ತದೆ.
(87) ಮಾನವ ಮೆದುಳಿನಲ್ಲಿ “ಮುಮ್ಮೆದುಳು ಅತ್ಯಂತ ದೊಡ್ಡದಾಗಿದೆ. ಇದು ಜ್ಞಾನೇಂದ್ರಿಯಾಗಳಿಂದ  ಬರುವ ಸಂದೇಶಗಳನ್ನು ಗ್ರಹಿಸುತ್ತದೆ. ಇದು ಜ್ಞಾಪಕಶಕ್ತಿಯ ಕೇಂದ್ರವಾಗಿದೆ.
(88) ಮದ್ಯದ ಮೆದುಳು ಮುಮ್ಮೆದುಳು ಮತ್ತು ಹಿಮ್ಮೆದಳನ್ನು ಸೇರಿಸುತ್ತದೆ.
(89) ‘ ಜ್ಞಾನವಾಹಿ’ ನರಗಳನ್ನು ಮೆದುಳಿಗೆ ಸಂದೇಶಗಳನ್ನು ರವಾನಿಸುತ್ತದೆ. ಮೆದುಳಿನ ಪ್ರತಿಕ್ರಿಯೆಗಳನ್ನು ‘ಕ್ರಿಯಾವಾಹಿ’ ನರಗಳಿಗೆ ತಲುಪಿಸುವಲ್ಲಿ ‘ ಮೆದುಳುಬಳ್ಳಿ ‘ ಸಹಾಯ ಮಡುತ್ತದೆ.
(90) ಜ್ಞಾನವಾಹಿ ನಗರಳು ಸಂದೇಶಗಳನ್ನು ಮೆದುಳಿಗೆ ತಲುಪಿಸುತ್ತೆ. ಕ್ರಿಯಾವಾಹಿ ನರಗಳು ಪ್ರತಿಕ್ರಿಯೆಯನ್ನು ಸ್ನಾಯು ಹಾಗು ಗ್ರಂಥಿಗಳಿಗೆ ತಿಳಿಸುತ್ತೆ.
(91) ಸಸ್ಯಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು “ಹಾರ್ಮೋನುಗಳಿಂದ ಮಾಡುತ್ತವೆ. ಸಸ್ಯಗಳಲ್ಲಿ ನರವ್ಯೂಹ ಕಂಡುಬರುವುದಿಲ್ಲ.
(92) ಸಸ್ಯಗಳು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತವೆ ಎಂದು ಮೊದಲ ಬಾರಿಗೆ ತೋರಿಸಿಕೊಟ್ಟವರು - ಸರ್. ಜಗದೀಶ್ ಚಂದ್ರಬೋಸ್
(93) ಸಸ್ಯಗಳಲ್ಲಿ ಬರುವಂತಹ ಕೆಲವು ಹಾರ್ಮೋನುಗಳೆಂದರೆ- ಆಕ್ಸಿನ್, ಬಿಬ್ಬರಿಲಿನ್, ಸೈಟೋಕೈನಿನ್.
(94) ಪ್ರಚೋದನೆಗಳಿಂದ ಚಲನೆಯುಂಟಾಗುತ್ತದೆ. ಉದಾ: ಸಸ್ಯಗಳು ಚಲಿಸುವುದಿಲ್ಲ, ಆದರೆ ಸಸ್ಯದ ಭಾಗಗಳಲ್ಲಿ ಚಲನೆಯುಂಟಾಗುತ್ತದೆ.
(95) ಲಿಂಗಾಣುಗಳೆಂಬ ಏಕಕೋಶೀಯ ರಚನೆಗಳ ಸಂಯೋಗದಿಂದ ಸಂತಾನೋತ್ಪತ್ತಿ ನಡೆಯುವುದನ್ನು “ಲಿಂಗ ರೀತಿಯ ಸಂತಾನೋತ್ಪತ್ತಿ’ ಎನ್ನುವರು. ಜೀವಿಗಳಲ್ಲಿ ಲಿಂಗಾಣುಗಳ ರಚನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ.
(96) ಪ್ರಾಣಿಗಳಲ್ಲಿ 4 ವಿಧಧ ಚಲನೆ ಕಾಣಬರುತ್ತದೆ.
(97) ಕೋಶಾಂತಂಕ ಚಲನೆ - ಕೋಶ ವಿಭಜನೆಯ ಸಂದರ್ಭದಲ್ಲಿ
(98) ಅಮಿಭಾ ಮಾದರಿ ಚಲನೆ- ಕೋಶದ ಚಲನೆಯಿಂದ ಮಿಥ್ಯಪಾದ ಉಂಟಾಗಿ
(99) ಕಶಾಂಗ ಮತ್ತು ರೋಮಿಕ ಭಾಗಗಳಿಂದ ಚಲನೆ ಉದಾ: ಯೂಗ್ಲೀನಾ ಮತ್ತು ಪ್ಯಾರಾಮೀಸಿಯಂ
(100) ಸ್ನಾಯಿಕ ಚಲನೆ - ಮೇಲ್ಮಟ್ಟದ ಜೀವಿಗಳಲ್ಲಿ
(101) ಸಸ್ಯಗಳು ಕೂಡ ಲಿಂಗ ರೀತಿಯ ಸಂತಾನೋತ್ಪತ್ತಿ ಮಾಡುತ್ತದೆ.
(102) ಸಸ್ಯದ ಸಂತಾನೋತ್ಪತ್ತಿ ಭಾಗ ‘ ಹೂ ‘
(103) ಹೂವಿನ ಗಂಡು ಭಾಗ ಕೇಸರ, ಹೆಣ್ಣು ಭಾಗ - ಶಲಾಕ
(104) ಒಂದೇ ಹೂವಿನಲ್ಲಿ ಕೇಸರ ಮತ್ತು ಶಲಾಕ ಎರಡು ಇದ್ದರೆ ಅದು ದ್ವಿಲಿಂಗ ಪುಷ್ಪ. ಉದಾ: ದಾಸವಾಳ
(105) ಒಂದು ಹೂವಿನಲ್ಲಿ ಶಲಾಕ ಅಧವಾ ಕೇಸರ ಒಂದು ಮಾತ್ರ ಇದ್ದರೆ ಅದು ಏಕಲಿಂಗ ಪುಷ್ಪ ಉದಾ: ಕುಂಬಳ

ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ
(106) ವೀರ್ಯಾಣುಗಳು ವೃಷಣಗಳಲ್ಲಿ ಉತ್ಪತ್ತಿಯಾಗುತ್ತವೆ.
(107) ಪುರುಷ ಮತ್ತು ಸ್ತ್ರೀ ಜನನಾಂಗಗಳು ಒಂದೇ ಪ್ರಾಣಿಯಲ್ಲಿದ್ದರೆ ಅದು ದ್ವಿಲಿಂಗ ಪ್ರಾಣಿ ಉದಾ: ಎರೆಹುಳು, ಮತ್ತು ಹೈಡ್ರಾ
(108) ವೀರ್ಯಾಣು ಮತ್ತು ಅಂಡಾಣುಗಳ ಸಂಯೋಗ ಜೀವಿಯ ದೇಹದ ಹೊರಭಾಗದಲ್ಲಿ ನಡೆದರೆ ಅದು ಬಾಹ್ಯ ಗರ್ಭಧಾರಣೆ ಉದಾ; ಮೀನು ಮತ್ತು ಕಪ್ಪೆ
(109) ಸಸ್ತನಿ ಸರಿಸೃಪ, ಪಕ್ಷಿಗಳಲ್ಲಿ ಒಳಗರ್ಭಧಾರಣೆ ನಡೆಯುತ್ತದೆ.
(110) ಮಾನವನಲ್ಲಿ ಗರ್ಭಾವಧಿಯ ಕಾಲ ‘38 ವಾರ’

ನೀರು
(111) ನೀರಿನ ಘಟಕಗಳನ್ನು ವೋಲ್ಟಾಮೀಟರ್ ಸಹಾಯದಿಂದ ಪರೀಕ್ಷಿಸಬಹುದು
(112) ನೀರು 0C  ತಾಪದಲ್ಲಿ ಘನೀಕರಿಸುತ್ತದೆ.
(113) ಮಂಜುಗಡ್ಡೆಯ ಸಾಂದ್ರತೆ ನೀರಿನ ಸಾಂದ್ರತೆಗಿಂತ ಕಡಿಮೆ ಇರುವುದರಿಂದ ಮಂಜುಗಡ್ಡೆ ನೀರಿನಲ್ಲಿ ತೇಲುತ್ತದೆ.
(114) ನೀರು ಘನೀಕರಿಸಿದಾಗ ಅದು ಮಂಜುಗಡ್ಡೆಯಾಗಿ ವಿಸ್ತಾರಗೊಳ್ಳುತ್ತದೆ.
(115) 4C ನಲ್ಲಿ ಗಾತ್ರ ಕನಿಷ್ಠವಾಗುತ್ತದೆ ಮತ್ತು ಮಂಜುಗಡ್ಡೆ ಉಷ್ಣನಿರೋಧಕ.
(116) ನೀರು ಲೋಹಗಳೊಂದಿಗೆ ವರ್ತಿಸಿ ಆಕ್ಸೈಡ್ ಹೈಡ್ರಾಕ್ಸೈಡ್‍ಗಳನ್ನು ಉಂಟುಮಾಡಿ ಜಲಜನಕವನ್ನು ಬಿಡುಗಡೆಗೊಳಿಸುತ್ತದೆ.
(117) ಇಂಗಾಲದ- ಡೈ-ಆಕ್ಸೈಡ್ ನೀರಿನಲ್ಲಿ ಕರಗಿದರೆ ಇಂಗಾಲದ ಆಮ್ಲ ಉಂಟಾಗುತ್ತದೆ.
(118) ಗಂಧಕದ ಡೈ ಆಕ್ಸೈಡ್ ನೀರಿನಲ್ಲಿ ಕರಗಿದರೆ ಗಂಧಕದ ಆಮ್ಲ ಉಂಟಾಗುತ್ತದೆ.
(119) ನಿರ್ದಿಷ್ಟ ಉಷ್ಣತೆಯಲ್ಲಿ ಗರಿಷ್ಟ ಪ್ರಮಾಣದ ದ್ರವ್ಯವನ್ನು ಕರಗಿಸಿಕೊಳ್ಳುವ ದ್ರಾವಣವನ್ನು ‘ಪ್ರರ್ಯಾಪ್ತ ದ್ರಾವಣ’ ಎಂದು ಕರೆಯುವರು. ಉದಾ: ನೀರು
(120) ‘ಭಟ್ಟಿ ಇಳಿಸುವಿಕೆ’ ಯಿಂದ ನೀರನ್ನು ಕರಗುವ ಲವಣಗಳಿಂದ ಮುಕ್ತಗೊಳಿಸಬಹುದು.
(121) ಭಟ್ಟಿ ಇಳಿಸಿದ ನೀರು ಕುಡಿಯಲು ಯೋಗ್ಯವಲ್ಲ. ಕಾರಣ ಅದು ನಮ್ಮ ದೇಹದಲ್ಲಿರುವ ರಾಸಾಯನಿಕ ವಸ್ತುಗಳನ್ನು ಕರಗಿಸುತ್ತದೆ. ಸ್ವಲ್ಪ ಅಡಿಗೆ ಉಪ್ಪು ಬಳಸಿ ಕುಡಿಯಬಹುದು.
(122) 0 C ಯಿಂದ 4C ಗೆ ನೀರು ಕಾಯಿಸಿದಾಗ ನೀರು ಸಂಕುಚಿತವಾಗುತ್ತದೆ.  4C  ಯಿಂದ 0C  ನವರೆಗೆ ನೀರು ವಿಕಾಸವಾಗುತ್ತೆ.
(123) ಸೂರ್ಯನ ಶಾಖ ಶಕ್ತಿಯಿಂದಾಗಿ ಎಲ್ಲಾ ಜೈವಿಕ ಕ್ರಿಯೆಗಳು ನಡೆಯುತ್ತವೆ.
(124) ಸೂರ್ಯನ ಮೇಲ್ಮೈ ಶಾಖ 6000C
(125) ಶಾಖವನ್ನು ಅಳೆಯುವ ಏಕಮಾನ ಕ್ಯಾಲರಿ ಮತ್ತು ಜೌಲ್
(126) 1 ಕ್ಯಾಲೋರಿ = 4.2 ಜೌಲ್
(127) ವಸ್ತುಗಳ ಉಷ್ಣಗ್ರಹಣ ಸಾಮಥ್ಯ ವೈವಿದ್ಯವಾಗಿರುತ್ತದೆ.
(128) ಒಂದು ಗ್ರಾಂ ವಸ್ತುವಿನ ತಾಪವನ್ನು ಒಂದು ಸೆಂಟಿಗ್ರೇಡ್ ಹೆಚ್ಚಿಸಲು ಕೊಡಬೇಕಾದ ಶಾಖ ಆ ವಸ್ತುವಿನ ‘ಉಷ್ಣಗ್ರಹಣ ಶಕ್ತಿ’ ಎನ್ನುತ್ತೇವೆ.
(129) ಶಾಖದಿಂದ ವಸ್ತುಗಳ ಸ್ಥಿತಿ ಬದಲಾಗುತ್ತದೆ.
(130) ನೀರಿನ ಕುದಿಯುವ ಬಿಂದು 100⁰C
(131) ನೀರು ಬಾಷ್ಪ ಗುಪ್ತೋಷ್ಣವಾಗಲು 540 ಕ್ಯಾಲೋರಿ/ ಗ್ರಾಂ ಶಾಖ ಕೊಡಬೇಕಾಗುತ್ತದೆ.
(132) ಮಂಜುಗಡ್ಡೆಯ ಕುದಿಯುವ ಬಿಂದು 0⁰C ಇದನ್ನು ದ್ರವೀಕರಣ ಗುಪ್ತೋಷ್ಣ ಎನ್ನುತ್ತಾರೆ. ಮಂಜುಗಡ್ಡೆ ನೀರಾಗಲು ಕೊಡಬೇಕಾದ ಶಾಖ 80 ಕ್ಯಾಲೋರಿ/ ಗ್ರಾಂ.
(133) ಶಾಖದಿಂದ ವಸ್ತುಗಳು ವಿಕಾಸವಾಗುತ್ತದೆ. ಸ್ಥಿತಿ ಬದಲಾಗುತ್ತದೆ. ಶಾಖ ವರ್ಗಾವಣೆಯಾಗುತ್ತದೆ.
(134) ಅಣುಗಳ ಕಂಪನದಿಂದ ಶಾಖವು ವರ್ಗಾವಣೆಯಾಗುವುದನ್ನು ಉಷ್ಣವಹನ ಅಥವಾ ವಹನ ಕ್ರಿಯೆ ಎನ್ನುತ್ತಾರೆ.
(135) ಅಣುಗಳು ಕೆಳಗಿನಿಂದ ಮೇಲಕ್ಕೆ, ಮೇಲಿನಿಂದ ಕೆಳಕ್ಕೆ ಚಲಿಸುವುದನ್ನು ಸಂವಹನ ಎನ್ನುವರು.
(136) ಶಾಖವು ಮದ್ಯವರ್ತಿಯ ಸಹಾಯವಿಲ್ಲದೆ ಬಿಸಿಯಾದ ವಸ್ತುವಿನಿಂದ ತಣ್ಣನೆಯ ವಸ್ತುವಿಗೆ ವರ್ಗಾವಣೆಯಾಗುವುದನ್ನು ವಿಕೀರಣ ಎನ್ನುವರು.
(137) ಉಷ್ಣತೆಯ ಏಕಮಾನ ಕ್ಯಾಲೋರಿ
(138) ಪೌಷ್ಠಿಕಾಂಶಗಳು ಒದಗಿಸುವ ಶಕ್ತಿಯನ್ನು ಕಿಲೋ ಕ್ಯಾಲೋರಿ ಯಲ್ಲಿ ಅಳೆಯುತ್ತಾರೆ.
(139) ಅತೀ ಬಿಸಿಯಾದ ಮತ್ತು ಅತೀ ತಂಪಾದ ಆಹಾರ ಸೇವನೆಯಿಂದ ಹಾರ್ಮೋನುಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

ಅನುವಂಶೀಯವಾಗಿ ಬರುವ ರೋಗಗಳು:
(140) ಹಿಮೋಪಿಲಿಯಾ ಈ ರೋಗದಿಂದ ರಕ್ತ ಹೆಪ್ಪುಗಟ್ಟುವುದಿಲ್ಲ.
(141) ವರ್ಣಾಂಧತೆ ಈ ರೋಗವಿರುವರು ಹಸಿರು ಕೆಂಪುಬಣ್ಣವನ್ನು ಗುರುತಿಸುವುದಿಲ್ಲ.
(142) ಕಿವುಡುತನ, ಮೂಗುತನ, ಕುರುಡುತನ ಇವು ಕ್ರಿಯಾ ನ್ಯೂನ್ಯತೆಯಿಂದ ಬರುವಂತ ರೋಗಗಳು
(143) ಅಂಗನ್ಯೂನ್ಯತೆಯ ರೋಗಗಳು ಅನುವಂಶೀಯವಲ್ಲ.
(144) ಗಾಳಿ ಒಂದು ಮಿಶ್ರಣವಾವಿದ್ದು, ಅದು ಸ್ಥಳದಿಂದ ಸ್ಥಳಕ್ಕೆ ಕಾಲದಿಂದ ಕಾಲಕ್ಕೆ ವ್ಯತ್ಯಾಸ ಹೊಂದುತ್ತದೆ.
(145) ಗಾಳಿಯ ಪ್ರಮುಖ ಘಟಕ ಸಾರಜನಕ ಮತ್ತು ಆಮ್ಲಜನಕ.
(146) ಗಾಳಿಯಲ್ಲಿರುವ ಇತರೆ ಅನಿಲಗಳು ಆರ್ಗಾನ್, ನಿಯಾನ್, ಕ್ಸೆಯಾನ್, ಕ್ರಪ್ಟಾನ್, ಹೀಲಿಯಂ, ಇಂಗಾಲದ ಡೈ ಆಕ್ಸೈಡ್, ಮಾನಾಕ್ಸೈಡ್, ಜಲಜನಕದ ಸಲ್ಪೇಡ್‍ಗಳು.
(147) ಗಾಳಿಯಲ್ಲಿ ಸಾರಜನಕದ ಪ್ರಮಾಣ 78% ಇದು ಸಾಮಾನ್ಯ ಸಂದರ್ಭಗಳಲ್ಲಿ ಕ್ರಿಯಾಶೀಲವಲ್ಲ, ದಹನಾನುಕೂಲವಿಲ್ಲ.
(148) ಗಾಳಿಯಲ್ಲಿರುವ ಮಿಶ್ರಣದಲ್ಲಿ ಅತ್ಯಂತ ಕ್ರಿಯಾಶೀಲವದದ್ದು, ಆಮ್ಲಜನಕ, ಇದರ ಪ್ರಮಾಣ 21%
(149) ಸಾರಜನಕವು ಆಮ್ಲಜನಕದ ಕ್ರಿಯಾಶೀಲತೆಯನ್ನು ದುರ್ಬಲಗೊಳಿಸುತ್ತದೆ. ಇಲ್ಲದಿದ್ದರೆ ಆಮ್ಲಜನಕದಿಂದ ಭೂಮಿಯ ಮೇಲಿರುವ ವಸ್ತುಗಳು ಉರಿದು ಹೋಗುತ್ತಿದ್ದವು.
(150) ಗಾಳಿಯಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣ 0.03% ವಾತಾವರಣದಲ್ಲಿ ಇದರ ಪ್ರಮಾಣ ಹೆಚ್ಚಾದರೆ ‘ಹಸಿರುಮನೆ’ ಪರಿಣಾಮ ಉಂಟಾಗುತ್ತದೆ.
(151) ಇಂಗಾಲದ ಡೈ ಆಕ್ಸೈಡ್‍ನ್ನು ತಂಪುಪಾನಿಯಗಳಲ್ಲಿ ಮಾಂಸ, ಮೀನು, ಸಂರಕ್ಷಣೆಯಲ್ಲಿ ಬಳಸುತ್ತಾರೆ.
(152) ಆರ್ಗಾನ್ - ವಿದ್ಯುತ್ ದೀಪ. ನಿಯಾನ್ ಜಾಹಿರಾತು ದೀಪಗಳಲ್ಲಿ ಉಪಯೋಗಿಸುತ್ತಾರೆ.
(153) ಗಾಳಿಯಲ್ಲಿರುವ ನೀರಾವಿ ರಾತ್ರಿ ತಂಪುಗೊಂಡು ದ್ರವದ ಹನಿಗಳಾಗಿ ಬೀಳುತ್ತಾ ಹೋಗುತ್ತದೆ.
(154) ಗಾಳಿಯಲ್ಲಿ ನೀರಾವಿ ಸ್ಥಳದಿಂದ ಸ್ಥಳಕ್ಕೆ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಇದರ ಗರಿಷ್ಠ ಮಟ್ಟ ಶೇ 4 ರಿಂದ 5. ಇದು ಉಷ್ಣತೆ ಮತ್ತು ಎತ್ತರವನ್ನು ಅವಲಂಬಿಸಿದೆ.
(155) ಅನಿಲಗಳನ್ನು ದ್ರವರೂಪಕ್ಕೆ ತಂದಾಗ ಅವುಗಳ ಗಾತ್ರ ಕಡಿಮೆಯಾಗುತ್ತದೆ. ಹೀಗಾಗಿ ಅನಿಲವನ್ನು ಸಿಲಿಂಡರ್‍ಗಳಲ್ಲಿ ಶೇಖರಿಸುತ್ತಾರೆ.
(156) ದ್ರವ್ಯವು 4 ಸ್ಥಿತಿಯಲ್ಲಿರುತ್ತದೆ.
(157) ದ್ರವ ಆಮ್ಲಜನಕ, ದ್ರವ ಸಾರಜನಕವನ್ನು ಮೀನು ಮಾಂಸ ಮತ್ತಿತರ ಆಹಾರ ಪದಾರ್ಥಗಳ ಸಂರಕ್ಷಣೆಗಾಗಿ ಬಳಸುತ್ತಾರೆ.
(158) ದ್ರವ ಜಲಜನಕ, ದ್ರವ ಆಮ್ಲಜನಕವನ್ನು ರಾಕೇಟ್‍ಗಳಲ್ಲಿ ಇಂಧನಕ್ಕಾಗಿ ಬಳಸುತ್ತಾರೆ.
(159) ದ್ರವ ಹೀಲಿಯಂ ಅನ್ನು ಅಂತರಿಕ್ಷಯಾನದ ಬಲೂನು ಪ್ರಯೋಗದಲ್ಲಿ ಕಲೆರಹಿತ ಉಕ್ಕು ಲೋಹಗಳ ಬೆಸುಗೆಯಲ್ಲಿ ಉಪಯೋಗಿಸುತ್ತಾರೆ
(160) ನೀರು ಲೋಹಗಳೊಂದಿಗೆ ವರ್ತಿಸಿ ಅವುಗಳು ಹೈಡ್ರಾಕ್ಸೈಡ್ ಉಂಟು ಮಾಡುತ್ತವೆ.
(161) ತರಕಾರಿಗಳು ಕೊಳೆತಾಗ ಜಲಜನಕದ ಸಲ್ಫೈಡ್ ಅನೀಲವನ್ನು ಬಿಡುಗಡೆ ಮಾಡುತ್ತದೆ.
(162) ಇಂಗಾಲದ ಡೈಆಕ್ಸೈಡ್ ಮಾನಾಕ್ಸೈಡ್ ನೈಟ್ರಸ್ ಆಕ್ಸೈಡ್ ಕ್ಲೋರೋಫ್ಲೋರೋ ಕಾರ್ಬನ್ ಮೀಥೇನ್ ಇವು ಹಸಿರು ಮನೆ ಅನೀಲಗಳು
(163) ಇಂಗಾಲದ ಮಾನಾಕ್ಸೈಡ್ ಸೇವನೆಯಿಂದ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ಇದು ರಕ್ತದಲ್ಲಿರುವ ಹಿಮೋಗ್ಲೋಬಿನ್ ಜೊತೆ ಸಂಯೋಗ ಹೊಂದಿ ಆಮ್ಲಜನಕದ ಸರಬರಾಜನ್ನು ಕಡಿಮೆ ಮಾಡುತ್ತದೆ.
(164) ಗಂಧಕದ ಡೈ ಆಕ್ಸೈಡ್ ಕಣ್ಣಿನ ತೊಂದರೆ ಉಂಟು ಮಾಡುತ್ತದೆ. ಇದು ಮಳೆ ನೀರಿನಲ್ಲಿ ಕರಗಿ ಆಮ್ಲ ಮಳೆ ಉಂಟಾಗುತ್ತದೆ.
(165) ವಸ್ತುಗಳ ಕಂಪನದಿಂದ ಶಬ್ದ ಉತ್ಪತ್ತಿಯಾಗುತ್ತದೆ.
(166) ಕಂಪನಾಂಕವನ್ನು ಅಳೆಯುವ ಮಾನ ಹರ್ಟ್ಸ್
(167) ಒಂದು ಸೆಕೆಂಡಿನಲ್ಲಿ ಉಂಟಾಗುವ ಕಂಪನಗಳನ್ನು ಕಂಪನಾಂಕ ಎಂದು ಕರೆಯುತ್ತಾರೆ.
(168) ಮನುಷ್ಯನ ಶಬ್ದಗಳ ಕಂಪನಾಂಕ 20 ರಿಂದ 20,000 ಹರ್ಟ್ಸ್
(169) ಕಂಪನಗಳು ಕಿವಿಯ ತಮಟೆಯ ತಾಗಿದಾಗ ಮಾತ್ರ ಶಬ್ದಗಳು ಕೇಳಿಸುತ್ತವೆ.
(170) ಶಬ್ದವು ಗಾಳಿಯಲ್ಲಿ ಒಂದು ಸೆಕೆಂಡಿಗೆ 330 ಮೀಟರ್ ಚಲಿಸುತ್ತದೆ.
(171) ವಸ್ತು ಕಂಡ ನಂತರ ಶಬ್ದ ಕೇಳಿಸುತ್ತದೆ. ಕಾರಣ ಶಬ್ದಕ್ಕಿಂತ ಬೆಳಕಿನ ವೇಗ ಹೆಚ್ಚು.
(172) ಬೆಳಕಿನಂತೆ ಶಬ್ದವು ಕೂಡ ಸಮಾನ ಕೋನದಲ್ಲಿದ್ದಾಗ ಪ್ರತಿಫಲಿಸುತ್ತದೆ.
(173) ಶಬ್ದವು ಪ್ರತಿಫಲನ ಹೊಂದಿದಾಗ ಪ್ರತಿಧ್ವನಿಯಾಗುತ್ತದೆ.
(174) ಶಬ್ದವು ಮಾನವನ ಕಿವಿಯಲ್ಲಿ 1/10 ಸೆಕೆಂಡುಗಳ ಕಾಲ ನಿಲ್ಲುತ್ತದೆ. ಪ್ರತಿಧ್ವನಿ ಉಂಟಾಗಬೇಕಾದರೆ ಪ್ರತಿಫಲಿಸುವ ಮೇಲ್ಮೈ ಶಬ್ದ ಉಂಟಾಗುವ ಸ್ಥಳದಿಂದ 17 ಮೀಟರ್ ದೂರವಿರಬೇಕು.
(175) 20 ಕಂಪನಕ್ಕಿಂತ ಕಡಿಮೆ ಆವರ್ತ ಸಂಖ್ಯೆಯ ಶಬ್ದ ಆಶ್ರವ್ಯ ಶಬ್ದ, 20,000 ಕಂಪನಕ್ಕಿಂತ ಆವರ್ತ ಸಂಖ್ಯೆ ಹೆಚ್ಚಿದರೆ ಶ್ರವಣಾತೀತ ಶಬ್ದ ಎನ್ನುವರು.
(176) ‌ ಶಹನಾಯಿ-ನಾದಸ್ವರ, ಕೊಳಲು-ವಾಯುಕಂಪಿತ
(177) ವಾದ್ಯಗಳು. ಸಿತಾರ, ತಂತಿ ವಾದ್ಯ ಮೃದಂಗ ಮರ್ದನ ವಾದ್ಯ.

ಆಮ್ಲ
(178) ಜಲಜನಕ+ ಆಮ್ಲಜನಕ -> ಜಲಜನಕದ ಆಕ್ಸೈಡ್, ಜಲಜನಕದ ಆಕ್ಸೈಡ್= ನೀರು.
(179) ಕಂದು ಬಣ್ಣದ ತುಕ್ಕು= ಕಬ್ಬಿಣದ ಆಕ್ಸೈಡ್
(180) ಆಮ್ಲಕನಕ ಲೋಹಗಳೊಂದಿಗೆ ವರ್ತಿಸಿದರೆ ಲೋಹೀಯ ಆಕ್ಸೈಡ್ ಉಂಟಾಗುತ್ತದೆ. ಅಲೋಹಗಳೊಂದಿಗೆ ವರ್ತಿಸಿದರೆ ಅಲೋಹಿತ ಆಕ್ಸೈಡ್‍ಗಳನ್ನು ಉಂಟುಮಾಡುತ್ತದೆ.
(181) ಅಲೋಹಿಯ ಆಕ್ಸೈಡ್‍ಗಳು->ಆಮ್ಲೀಯ ಆಕ್ಸೈಡ್, ಲೋಹೀಯ ಆಕ್ಸೈಡ್‍ಗಳು -> ಪ್ರತ್ಯಾಮ್ಲೀಯ ಆಕ್ಸೈಡ್
(182) ದ್ರಾವಣದ ಬಣ್ಣ ಪರಿವರ್ತನೆ ಹೊಂದುವುದು ಆಮ್ಲತೆಯ ಗುಣವಾಗಿದೆ.
(183) ಆಮೀಯ ಆಕ್ಸೈಡ್‍ಗಳು ನೀರಿನಲ್ಲಿ ಕರಗಿ ಆಮ್ಲಗಳು ಉಂಟಾಗುತ್ತದೆ.
(184) ಆಮ್ಲಗಳು ನೀಲಿ ಲಿಟ್ಮಸ್ ಕಾಗದಳನ್ನು ಕೆಂಪು ಬಣ್ಣಕ್ಕೆ ತಿರುಗಿಸುತ್ತದೆ. ಪ್ರತ್ಯಾಮ್ಲಗಳು ಕೆಂಪು ಲಿಟ್ಮಸ್ ಕಾಗದವನ್ನು ನೀಲಿ ಬಣ್ಣಕ್ಕೆ ತಿರುಗಿಸುತ್ತದೆ.
(185) ಪ್ರತ್ಯಾಮ್ಲೀಯ ಆಕ್ಸೈಡ್ ನೀರಿನಲ್ಲಿ ಕರಗಿ ಪ್ರತ್ಯಾಮ್ಲ ಉಂಟು ಮಾಡುತ್ತದೆ.
(186) ಆಮ್ಲ ಲೋಹಗಳೊಂದಿಗೆ ವರ್ತಿಸಿದರೆ ಜಲಜನಕ ಬಿಡುಗಡೆಯಾಗುತ್ತದೆ.
(187) ಆಮ್ಲ ಪ್ರತ್ಯಾಮ್ಲದೊಂದಿಗೆ ವರ್ತಿಸಿ ಲವಣ + ನೀರು ಬಿಡುಗಡೆಯಾಗುತ್ತದೆ.
(188) ಆಮ್ಲದಲ್ಲಿರುವ ಜಲಜನಕದ ಪರಮಾಣುಗಳು ಲೋಹಗಳಿಂದ ಸ್ಥಾನಪಲ್ಲಟಗೊಳ್ಳುತ್ತದೆ.
(189) ಆಮ್ಲ ಕಾರ್ಬೋನೇಟುಗಳೊಂದಿಗೆ ವರ್ತಿಸಿ ಇಂಗಾಲದ ಡೈ ಆಕ್ಸೈಡ್ ಬಿಡುಗಡೆಗೊಳಿಸುತ್ತದೆ.
(190) ಜಲಜನಕ ಇದು ಒಂದು ದಹ್ಯ ವಸ್ತು, ಇದು ಹತ್ತಿಕೊಂಡು ಉರಿಯುತ್ತದೆ.
(191) ಹೈಡ್ರಾಕ್ಸೈಡ್‍ಗಳು ಪ್ರತ್ಯಾಮ್ಲಗಳಾಗಿರುತ್ತದೆ.
(192) ಕಾರ್ಬನಿಕ್ ಆಮ್ಲಗಳನ್ನು ಮೃದು ಪಾನೀಯಗಳಲ್ಲಿ ಉಪಯೋಗಿಸುತ್ತಾರೆ.
(193) ತುಕ್ಕು ನಿವಾರಿಸಲು ಹೈಡ್ರೋಕ್ಲೋರಿಕ್ ಆಮ್ಲವನ್ನು ಉಪಯೋಗಿಸುತ್ತಾರೆ.
(194) TNT & TNG  -> ಸಿಡಿಮದ್ದು ಇವುಗಳ ತಯಾರಿಕೆಯಲ್ಲಿ ನೈಟ್ರಿಕ್ ಆಮ್ಲವನ್ನು ಉಪಯೋಗಿಸುತ್ತಾರೆ.
(195) TNT -> ಟ್ರೈ ನೈಟ್ರೋ ಟಾಲೀನ್ TNG  ->ಟ್ರೈ ನೈಟ್ರೋ ಗ್ಲಿಸರಿನ್
(196)  ಪಾಸ್ಪರಿಕ್ ಆಮ್ಲ, ಆಸ್ಪರಿಕ್ ಆಮ್ಲ, ಅಮೋನಿಯಂ ನೈಟ್ರೆಟ್, ಕ್ಯಾಲ್ಸಿಯಂ ನೈಟ್ರೇಟ್ ಗಳ ತಯಾರಿಕೆಯಲ್ಲಿ -> ನೈಟ್ರಿಕ್ ಆಮ್ಲವನ್ನು ಉಪಯೋಗಿಸುತ್ತಾರೆ.
(197) ವಿನಿಗರ್ ನಲ್ಲಿ ಅಸಿಟಿಕ್ ಆಮ್ಲವಿರುತ್ತದೆ.
(198) ಪ್ರಬಲ ನೈಟ್ರಿಕ್ ಆಮ್ಲ ಮತ್ತು ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲಗಳ 1:3 ಗಳ ಮಿಶ್ರಣವನ್ನು ದ್ರವಗಳ ರಾಜ ಎಂದು ಕರೆಯುವರು.
(199) ನೀರಿನಲ್ಲಿ ಕರಗುವ ಲೋಹದ ಆಕ್ಸೈಡ್‍ಗಳನ್ನು ಕ್ಷಾರಗಳು ಎನ್ನುವರು. ಅಂದರೆ ಇವುಗಳಲ್ಲಿ ಲೋಹವಿರುವುದಿಲ್ಲ. ಆದರೆ ಇವು ಪ್ರತ್ಯಾಮ್ಲಗಳು ಹೌದು.
(200) ಪ್ರತ್ಯಾಮ್ಲಗಳು ಕಹಿ ರುಚಿಯನ್ನು ಹೊಂದಿರುತ್ತದೆ.
(201) ಪ್ರತ್ಯಾಮ್ಲಗಳು ಇಂಗಾಲದ ಡೈ ಆಕ್ಸೈಡ್‍ಗಳನ್ನು ಹೀರಿಕೊಂಡು ಕಾರ್ಬೋನೇಟುಗಳನ್ನು ಉತ್ಪತ್ತಿ ಮಾಡುತ್ತದೆ.
(202) ಕ್ಷಾರಿಯ ದ್ರಾವಣಗಳು ಅಮೋನಿಯಂ ಲವಣಗಳೊಂದಿಗೆ ವರ್ತಿಸಿ ಅಮೋನಿಯಾ ಅನೀಲಗಳನ್ನು ಬಿಡುಗಡೆಗೊಳಿಸುತ್ತದೆ.
(203) ಹುಣಸೆ ಹಣ್ಣು ಮತ್ತು ನಲ್ಲಿಕಾಯಿ ಇದು ಟಾರ್ಟಾರಿಕ್ ಆಮ್ಲ.
(204) ಟೊಮೊಟೊ ಹಣ್ಣು- ಆಕ್ಸಾಲಿಕ್ ಆಮ್ಲ
(205) ಸಾಬೂನು ಕಾಗದ ಕೃತಕ ದಾರ, ಗ್ಲಿಸರಿನ್, ಸೋಡಾ ವಾಟರ್‍ಗಳ ತಯಾರಿಕೆಯಲ್ಲಿ ಸೋಡಿಯಂ ಹೈಡ್ರಾಕೈಡ್ ಉಪಯೋಗಿಸುತ್ತಾರೆ.
(206) ನೀರನ್ನು ಮೃದುಗೊಳಿಸಲು, ಮಣ್ಣಿನ ಆಮ್ಲತೆಯನ್ನು ಕಡಿಮೆಗೊಳಿಸಲು ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅನ್ನು ಉಪಯೋಗಿಸುತ್ತಾರೆ.
(207) ಚಲುವೆ ಪುಡಿ ಅಥವಾ ಬ್ಲೀಚಿಂಗ್ ಪೌಡರ್ ಕ್ಯಾಲ್ಸಿಯಂ ಆಕ್ಸಿ ಕ್ಲೋರೈಡ್
(208) ಅಲ್ಯುಮಿನಿಯಂ ಹೈಡ್ರಾಕ್ಸೈಡ್ ಮತ್ತು ಮೆಗ್ನಿಷಿಯಂ ಹೈಡ್ರಾಕ್ಸೈಡ್ ಅನ್ನು ಆಮ್ಲ ನಿರೋಧಕವಾಗಿ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.
(209) ಸೋಡಿಯಂ ಹೈಡ್ರಾಕ್ಸೈಡ್ ಇದನ್ನು ಕಾಸ್ಟಿಕ್ ಸೋಡ ಎಂದು ಕರೆಯುತ್ತಾರೆ.
(210) ಪೊಟ್ಯಾಸಿಯಂ ಹೈಡ್ರಾಕ್ಸೈಡ್ ಇದು ಕಾಸ್ಟಿಕ್ ಪೊಟ್ಯಾಷ್
(211) ಆಮ್ಲ ಮತ್ತು ಪ್ರತ್ಯಾಮ್ಲಗಳು ನೀರಿನಲ್ಲಿ ವರ್ತಿಸಿ ಆಮ್ಲವೂ ಅಲ್ಲದ ಪ್ರತ್ಯಾಮ್ಲವೂ ಅಲ್ಲದ ಲವಣಗಳನ್ನು ಉತ್ಪತ್ತಿ ಮಾಡುವುದಕ್ಕೆ ತಟಸ್ಥೀಕರಣ ಎನ್ನುವರು.
(212) ಸಲ್ಫೈಡ್ , ನೈಟ್ರೇಡ್, ಕಾರ್ಬೋನಿಕ್, ಕ್ಲೋರೈಡ್ ಇವೆಲ್ಲವು ಲವಣಗಳು ಅಂದರೆ ಆಮ್ಲವೂ ಅಲ್ಲ, ಪ್ರತ್ಯಾಮ್ಲವೂ ಅಲ್ಲ.
(213) ಲವಣಗಳು ತಟಸ್ಥೀಕರಣ ಕ್ರಿಯೆಯಿಂದ ಉಂಟಾಗುತ್ತದೆ.
(214) ಸೋಡಿಯಂ ಕಾರ್ಬೋನೇಟ್ ಅಥವಾ ವಾಷಿಂಗ್ ಸೋಡಾ  Na₂CO₃ ಇದರ ಉಪಯೋಗ ನೀರು ಮೃದುಗೊಳಿಸಲು ಮತ್ತು ಬಟ್ಟೆ ತೊಳೆಯಲು.
(215) ಸೋಡಿಯಂ ಬೈಕಾರ್ಬೋನೇಟ್ ಆಥವಾ ಅಡಿಗೆ ಸೋಡಾ - NaHCO₃  ಬೇಕಿಂಗ್ ಪುಡಿ ತಯಾರಿಸಲು ಉಪಯೋಗಿಸುತ್ತಾರೆ. ಇದನ್ನು ಬ್ರೆಡ್ ಬನ್ನುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅಗ್ನಿಶಾಮಕ ಯಂತ್ರಗಳಲ್ಲಿಯೂ ಉಪಯೋಗಿಸುತ್ತಾರೆ.
(216) ಸೋಡಿಯಂ ಕ್ಲೋರೈಡ್ ಅಡಿಗೆ ಉಪ್ಪು (NaCl)
(217) ಅಮೋನಿಯಂ ಕ್ಲೋರೈಡ್ - (NH₄Cl)
(218) ಪೊಟ್ಯಾಷಿಯಂ ನೈಟ್ರೇಟ್ - (KHO₃) ಮದ್ದಿನ ಪುಡಿ, ಗಾಜು, ಕೃತಕ ಗೊಬ್ಬರಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
(219) ಕ್ಯಾಲ್ಸಿಯಂ ಕಾರ್ಬೋನೆಟ್ - (CaCO₃)
(220) ತಾಮ್ರದ ಸಲ್ಫೇಟ್ - (C₄SO₄) ತಾಮ್ರದ ವೋಲ್ಟಾಮೀಟರಿನಲ್ಲಿ ಉಪಯೋಗಿಸುತ್ತಾರೆ.
(221) 121. ಪೊಟ್ಯಾಷ್‌ ಪಟಿಕ -> (K₂SO₄ Al₂(SO₄)₃ 4 H₂O) ಇದನ್ನು ‘ಯುಗ್ಮ ಲವಣ’ಎನ್ನುವರು, ಇದನ್ನು ಕುಡಿಯುವ ನೀರು ಶುದ್ದಿಕರಿಸಲು, ಗಾಯಕ್ಕೆ ಹಚ್ಚಲು, ಚರ್ಮದ ಕೈಗಾರಿಕೆಗಳಲ್ಲಿ ಉಪಯೋಗಿಸುತ್ತಾರೆ.
(222) ಕ್ಯಾಲ್ಸಿಯಂ ಕಾರ್ಬೋನೇಟ್ (CaCO₃) -> ಸಿಮೆಂಟ್ ತಯಾರಿಕೆಯಲ್ಲಿ, ಕಬ್ಬಿಣದ ಅದಿರಿನಿಂದ ಕಬ್ಬಿಣವನ್ನು ಬೇರ್ಪಡಿಸಲು ಉಪಯೋಗಿಸುತ್ತಾರೆ.‌
(223) ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್ -> ಚೆಲುವೆಪುಡಿ
(224) ಸೋಡಿಯಂ ಬೈಕಾರ್ಬೋನೇಟ್ -> ಬೇಕಿಂಗ್ ಪುಡಿ (ಅಡುಗೆ ಸೋಡಾ/ಬೇಕಿಂಗ್ ಪುಡಿ)
(225) IRS – Indian Remote Sensing Satallites  (ದೂರ ಸಂವೇದಿ ಉಪಗ್ರಹ)
(226) ಪ್ರಚನ್ನ ಶಕ್ತಿಯನ್ನು ‘ವಿಭವಶಕ್ತಿ’ ಎಂತಲೂ ಕರೆಯುವರು.
(227) ಕೆಂಪು ಮಣ್ಣು-> ಇದರಲ್ಲಿ ಕಬ್ಬಿಣದ ಆಕ್ಸೈಡ್ ಹೆಚ್ಚು ಇರುತ್ತದೆ. ಕಾಫಿ, ಟೀ, ಏಲಕ್ಕಿ ಚೆನ್ನಾಗಿ ಬೆಳೆಯುತ್ತಾರೆ.
(228) ಕಪ್ಪು ಮಣ್ಣು-> ಅತ್ಯಂತ ಉತೃಷ್ಟವಾದ ಮಣ್ಣು, ಇದು ಉತ್ತರ ಕರ್ನಾಟಕದಲ್ಲಿ ಕಂಡುಬರುತ್ತದೆ. ಇದರಲ್ಲಿ ಹತ್ತಿ, ಶೇಂಗಾ, ಕಬ್ಬು ಹೊಗೆಸೊಪ್ಪು ಬೆಳೆಯುತ್ತಾರೆ.
(229) ಮೆಕ್ಕಲು ಮಣ್ಣು -> ನದಿಯಿಂದ ಹರಿದುಬಂದ ಮಣ್ಣು.
(230) ವಾಯುರಾನ್, ಸಿಮಜಿನ್, ಮ್ಯಾರ್ಚೆನ್ -> ಉದಯಪೂರ್ಣ ಕಳೆನಾಶಕಗಳು
(231) ಮಿಶ್ರ ಬೆಳೆಯಿಂದ ಫಲವತ್ತತೆ ಹೆಚ್ಚುತ್ತದೆ.‌ ಉದಾ : ರಾಗಿಯೊಂದಿಗೆ ಅವರೆ, ಕಬ್ಬಿನೊಂದಿಗೆ ಶುಂಟಿ, ಅಡಿಕೆ ತೋಟದಲ್ಲಿ ಏಲಕ್ಕಿ, ಮೆಣಸು, ವೆನಿಲ್ಲಾ ಕಾಯಿ, ವಿಳ್ಳೆದೆಲೆ.
(232) ಸರದಿ ಬೆಳೆಯಲ್ಲಿ ಒಂದು ಬೆಳೆ ಉಪಯೋಗಿಸಿದ ಪೋಷಕಾಂಶಗಳನ್ನು ಮತ್ತೊಂದು ಬೆಳೆ ಮರುದುಂಬಿಸುತ್ತದೆ. ಉದಾ: ಏಕದಳ ಮತ್ತು ದ್ವಿದಳ
(233) ಮುಂಗಾರು ಬೆಳೆ ಜೂನ್ ಮತ್ತು ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. ಇದನ್ನು ‘ಖಾರೀಫ್’ ಬೆಳೆ ಎನ್ನುತ್ತಾರೆ. ಉದಾ: ಭತ್ತ, ಶೇಂಗಾ, ಬೇಳೆಗಳು, ಮೆಣಸು.
(234) ‘ರೈಜೋಬಿಯಂ’ ಬ್ಯಾಕ್ಟೀರಿಯಾ ವಾತಾವರಣದಲ್ಲಿರುವ ಸಾರಜನಕವನ್ನು ಉಪಯೋಗಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಇದು ದ್ವಿದಳ ದಾನ್ಯಗಳ ಬೇರುಗಳಲ್ಲಿ ಇರುತ್ತದೆ.
(235) ‘ಹಾರ್ವೆಸ್ಟರ್ ಕಂಬೈನ್ (ಒಕ್ಕಣಿ ಯಂತ್ರ) ಇದನ್ನು ಕಾಳನ್ನು ಕಸಕಡ್ಡಿಯಿಂದ ಬೇರ್ಪಡಿಸಲು ಉಪಯೋಗಿಸುತ್ತಾರೆ. Harvester Combain
(236) ಬ್ಯಾಕ್ಟೀರಿಯಾ ಮುಂತಾದ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯ ಮೂಲಕ ಸಸ್ಯ ಮತ್ತು ಪ್ರಾಣಿಜನ್ಯ ತ್ಯಾಜ್ಯ ಕೊಳೆಯಿಸಿ ಪಡೆಯುವ ಪದಾರ್ಥವೆ ಸಾವಯವ ಗೊಬ್ಬರ.
(237) ಜೈವಿಕ ಕ್ರಿಯೆಗಳಿಂದ ಗೊಬ್ಬರ ದೊರಕುವುದನ್ನು ಜೈವಿಕ ಗೊಬ್ಬರ ಎಂದು ಕರೆಯುವರು. ಈ ಕ್ರಿಯೆಯಲ್ಲಿ ಭಾಗವಹಿಸುವ ಬ್ಯಾಕ್ಟೀರಿಯಾಗಳೆಂದರೆ ರೈಜೋಬಿಯಂ, ವೆಜೋಸ್ಟಾರಿಲ್ಲಂ,

8ನೇ ತರಗತಿ ವಿಜ್ಞಾನ
(238) ಮ್ಯಾಗ್ನಟೈಟ್ ಕಬ್ಬಿಣದ ಅದಿರು- ನೈಸರ್ಗಿಕ ಕಾಂತ
(239) ದಂಡಕಾಂತ, ಲಾಳಕಾಂತ, ಸೂಜಿಕಾಂತ, ಇವುಗಳು ಕೃತಕ ಕಾಂತಗಳು
(240) ದಂಡಕಾಂತ, ಪ್ಯಾರಕಾಂತೀಯ, ಫೇರೋಕಾಂತೀಯ ಇವು ಕಾಂತಿಯ ವಸ್ತುಗಳ ವಿಧಗಳು
(241) ಅಲ್ಯುಮಿನಿಯಂ, ಕ್ರೋಮಿಯಂ, ಕಾಪರ್ ಸಲ್ಫೇಟ್, ಪ್ಲಾಟೀನಂ ಇವು ಪ್ಯಾರಾ ಕಾಂತಿಯ ವಸ್ತುಗಳು.
(242) ಯಾಂತ್ರಿಕ ವಿಧಾನ ಮತ್ತು ವಿದ್ಯುತ್ ವಿಧಾನದಿಂದ ಕೃತಕ ಕಾಂತಗಳನ್ನು ತಯಾರಿಸಬಹುದು.
(243) ವಿದ್ಯುತ್ ವಿಧಾನದಿಂದ ಕೃತಕ ಕಾಂತಗಳನ್ನು ತಯಾರಿಸುವುದಕ್ಕೆ ‘ಎಲೆಕ್ಟ್ರೋಮ್ಯಾಗ್ನೆಟ್’ಎನ್ನುವರು.
(244) ಎರಡು ದಂಡಕಾಂತಗಳನ್ನು ಅವುಗಳ ವಿರುದ್ದ ದಿಕ್ಕಿನಲ್ಲಿ ಇಟ್ಟು ಅವುಗಳ ಮದ್ಯೆ ಒಂದು ಮರದ ತುಂಡು ಇರಿಸಿ ಕಾಂತವನ್ನು ರಕ್ಷಿಸುತ್ತಾರೆ.
(245) ವಿದ್ಯುತ್‍ಚ್ಚಕ್ತಿಯನ್ನು ಅಳೆಯುವ ಅಂತರಾಷ್ಟ್ರೀಯ ಏಕಮಾನ ಜೌಲ್ 1 ಕಿಜೆ = 1000 ಜೆ
(246) ಶಾಖವು ‘ಶಕ್ತಿಯ ಒಂದು ರೂಪ’ ಎಂದು ತೋರಿಸಿಕೊಟ್ಟವರು ಜೂಲ್
(247) ವಿದ್ಯುತ್ ಸಾಮಥ್ರ್ಯವನ್ನು ಕಂಡುಹಿಡಿಯುವ ಸೂತ್ರ  P =( E/T)
(248) ವಿದ್ಯುತ್ ಸಾಮಥ್ರ್ಯದ ಅಂತರಾಷ್ಟ್ರೀಯ ಏಕಮಾನ - ವ್ಯಾಟ್
(249) ವ್ಯಾಟ್ = ಒಂದು ಉಪಕರಣ, ಒಂದು ಸೆಕೆಂಡಿನಲ್ಲಿ ಒಂದು ಜೂಲ್ ಬಳಸಿದರೆ ವ್ಯಾಟ್ ಆಗುತ್ತದೆ.
(250) ವಿದ್ಯುತ್‍ಚ್ಚಕ್ತಿಯ ವ್ಯವಹಾರಿ ಏಕಮಾನ Kwh = 3600000 K/J
(251) ವಿದ್ಯುತ್ ಫೀಜ್ -> ಸೀಸ ಮತ್ತು ತವರದಿಂದ ಮಾಡಲ್ಪಟ್ಟಿದೆ. ಇದರ ರೋಧಕ ಹೆಚ್ಚು, ದ್ರವನಬಿಂದು ಕಡಿಮೆ
(252) ವಿದ್ಯುತ್ ದೀಪ -> ಉಷ್ಣೋತ್ಪನ್ನ ಪರಿಣಾಮ ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.
(253) ವಿದ್ಯುತ್ ದೀಪದಲ್ಲಿ ತಾಮ್ರದ ತಂತಿಯ ಮೂಲಕ ಟಂಗ್‍ಸ್ಟನ್ ತಂತಿಯಿಂದ ಕಟ್ಟಿರುತ್ತಾರೆ.
(254) ದೀಪದ ಆಯಸ್ಸು ಹೆಚ್ಚಿಸಲು ಅದರ ಬುರುಡೆಯಲ್ಲಿ ನೈಟ್ರೋಜನ್ ತುಂಬಿರುತ್ತಾರೆ.
(255) ವಿದ್ಯುತ್ ಕೋಶ ಮತ್ತು ಶುಷ್ಕಕೋಶದ ಮೂಲಕ ವಿದ್ಯುತ್ ಉತ್ಪಾದಿಸಬಹುದು.
(256) ರಸಾಯನಿಕ ಶಕ್ತಿಯನ್ನು ವಿದ್ಯುತ್‍ಶಕ್ತಿಯನ್ನಾಗಿ ಪರಿವರ್ತಿಸುವ ಸಾದನ - ವಿದ್ಯುತ್ ಕೋಶ
(257) ಸಂಖ್ಯಾ ಮೌಲ್ಯ ಮಾತ್ರ ಇದ್ದರೆ -> ಅದಿಶ, ಸಂಖ್ಯಾ ಮೌಲ್ಯದೊಂದಿಗೆ ದಿಕ್ಕು ಇದ್ದರೆ -> ಸದಿಶ
(258) ಸ್ಥಾನಪಲ್ಲಟ ಎಂದರೆ ಒಂದು ಸ್ಥಳವನ್ನು ತಲುಪಲು ಇರುವ ಕನಿಷ್ಠ ಮಾರ್ಗ. ಆಂದರೆ ಇಲ್ಲಿ ದಿಕ್ಕು ಅನಿವಾರ್ಯವಾಗಿರುತ್ತದೆ.
(259) ಚಲಿಸಿದ ದೂರ ಯಾವ ಮಾರ್ಗವಾದರು ಅನುಸರಿಸಿ ಸ್ಥಳವನ್ನು ತಲುಪಿರುತ್ತೆ. ಇದಕ್ಕೆ ದಿಕ್ಕು ಇರುವುದಿಲ್ಲ.
(260) ಜವದ ಅಂತರಾಷ್ಟ್ರೀಯ ಏಕಮಾನ -> ಮೀ/ಸೆ/ಎಂಎಸ್-1
(261) ಜವಕ್ಕೆ ದಿಕ್ಕಿಲ್ಲ ಆದ್ದರಿಂದ ಇದು ಅದಿಶ
(262) ಕಾಯದ ಸ್ಥಾನಪಲ್ಲಟದ ದರ -> ವೇಗ -> ಸದಿಶ
(263) ವೇಗದ ಬದಲಾವಣೆಯ ದರವೇ ‘ವೇಗೋತ್ಕರ್ಷ’
(264) ವೇಗೋತ್ಕರ್ಷ ಒಂದು ಸದಿಶ ಇದರ ಅಂತರಾಷ್ಟ್ರೀಯ ಏಕಮಾನ M/s²
(265) ವೇಗದಲ್ಲಾಗುವ ಬದಲಾವಣೆಯನ್ನು ಕಾಲದಿಂದ ಬಾಗಿಸಿದರೆ ವೇಗೋತ್ಕರ್ಷವು ದೊರೆಯುತ್ತದೆ.
(266) ಸಮ ಅವಧಿಯಲ್ಲಿ ಏಕರೀತಿಯಲ್ಲಿ ಪುನರಾವರ್ತನೆಯಾಗುವ ಚಲನೆಯನ್ನು ಆವರ್ತ ಚಲನೆ ಎನ್ನುವರು.
(267) ಚಲನೆಯ ಪಥದ ಯಾವುದೇ ಬಿಂದುವನ್ನು ಯಾವ ದಿಕ್ಕಿನಲ್ಲಿ ದಾಟುತ್ತದೋ ಅದೇ ದಿಕ್ಕಿನಲ್ಲಿ ಎರಡನೆ ಬಾರಿಗೆ ದಾಟಲಾರಂಬಿಸಿದಾಗ ಒಂದು ‘ಆಂದೋಲನ’ ಪೂರ್ಣವಾಗುತ್ತದೆ.
(268) ಏಕಮಾನ ಕಾಲದಲ್ಲಿ ಆಗುವ ಆಂದೋಲಗಳ ಸಂಖ್ಯೆಯೆ ಆಂದೋಲಗಳ ಆವೃತ್ತಿ.
(269) ಅಂತಾರಾಷ್ಟ್ರೀಯ ಪದ್ದತಿಯಲ್ಲಿ ಆವೃತ್ತಿಯ ಏಕಮಾನ -> ಹರ್ಟ್ಸ್
(270) ಆಂದೋಲ = 1 ಸೈಕಲ್‍ಪೌಂಡ್/ ಸೆಕೆಂಡ್
(271) ಲೋಲಕದ ಗುಂಡಿನರಾಶಿ, ಸಾಂದ್ರತೆ, ತೂಕ ಇವು ಆಂದೋಲದ ಅವಧಿಯನ್ನು ಅವಲಂಬಿಸಿಲ್ಲ.
(272) ಸರಳ ಲೋಲಕವನ್ನು ಕಾಲಮಾಪಕವಾಗಿ ಗುರುತ್ವ, ವೇಗೋತ್ಕರ್ಷ ಕಂಡುಹಿಡಿಯಲು ಉಪಯೋಗಿಸುತ್ತಾರೆ.
(273) ಯಾಂತ್ರಿಕ ತರಂಗಗಳು ಪ್ರಸಾರವಾಗಲು ಮಾದ್ಯಮದ ಅವಶ್ಯಕತೆ ಇದೆ.
(274) ಪಾರ= ಕಂಪನ ವಿಸ್ತಾರ, ಆಂದೋಲಾವಧಿ= ಕಂಪನಾವಧಿ, ಆವೃತ್ತಿ = ಕಂಪನಾಂಕ
(275) ಕಂಪನದ ಗರಿಷ್ಠ ವಿಸ್ತಾರವೇ ‘ ಕಂಪನಾವಿಸ್ತಾರ’, ಕಂಪನ ವಿಸ್ತಾರವಾಗಲು ತೆಗೆದುಕೊಂಡ ಸಮಯವೇ ಕಂಪನಾವಧಿ
(276) ನಿಗಧಿತ ಸಮಯದಲ್ಲಿ ಆದ ಕಂಪನಗಳ ಸಂಖ್ಯೆಯೇ ‘ ಕಂಪನಾಂಕ’
(277) ನೀರಿನ ತರಂಗ ‘ಆಡ್ಡ ತರಂಗ’ , ಗಾಳಿಯ ತರಂಗ ‘ನೀಳ ತರಂಗ’
(278) ತರಂಗ ಚಲನೆಯಲ್ಲಿ ಮಾದ್ಯಮದ ಕಣಗಳ ಪ್ರಸರಣ ಆಗುವುದಿಲ್ಲ ಅವುಗಳ ಸಮತೋಲಿತ ಸ್ಥಿತಿಯಲ್ಲಿ ಆದ ಪ್ರಕ್ಷುಬ್ದತೆಯ ಕಾರಣ ಅಂದರೆ ತರಂಗಚಲನೆ ಪ್ರಕ್ಷುಬ್ದತೆಯೇ ಕಾರಣ. ಅಂದರೆ ತರಂಗಚಲನೆ ಪ್ರಕ್ಷುಬ್ದತೆಯಿಂದ ಉಂಟಾಗುತ್ತದೆ.
(279) ತರಂಗದ ಉದ್ದದ ಸಂಕೇತ ಲ್ಯಾಂಬ್ಡ
(280) ಎರಡು ಗರ್ತಗಳ ಅಥವಾ ಶೃಂಗಗಳ ನಡುವಿನ ಅಂತರವೇ ತರಂಗದ ಉದ್ದ 22
(281) ಶಕ್ತಿಯ ಮೂಲಮಾನ ಜೌಲ್
(282) ಬಲದ ಮೂಲಮಾನ - ನ್ಯೂಟನ್
(283) ಕೆಲಸವನ್ನು ಕಂಡುಹಿಡಿಯುವ ಸೂತ್ರ - W=FxS , ಕೆಲಸ = ಬಲ X  ಸ್ಥಾನಪಲ್ಲಟ
(284) ಮಾದ್ಯಮದ ದ್ರವಗಳ ಪ್ರಕ್ಷುಬ್ದತೆಯೇ ತರಂಗ
(285) ಅಂತರಾಷ್ಟ್ರೀಯ ಪದ್ದತಿಯಲ್ಲಿ ಕೆಲಸದ ಏಕಮಾನ - ನ್ಯೂಟನ್ ಮೀಟರ್
(286) ಉಷ್ಣ, ಶಕ್ತಿ, ಶಾಖ ಇವುಗಳ ಆಂತರಾಷ್ಟ್ರೀಯ ಮೂಲಮಾನ ಜೌಲ್
(287) ವಸ್ತುವಿನ ಭೌತ ಸ್ಥಿತಿ ಯಾವುದೇ ಆಗಿರಲಿ ಅದರಲ್ಲಿರುವ ಅಣು, ಪರಮಾಣುಗಳು ಸದಾ ಚಲನೆಯಲ್ಲಿರುತ್ತವೆ.
(288) ಒಂದು ವಸ್ತುವಿನಲ್ಲಿರುವ ಅಣು ಪರಮಾಣುಗಳ ವಿವಿಧ ಚಲನೆಯ ಒಟ್ಟು ಶಕ್ತಿಯ ಮೊತ್ತ ಉಷ್ಣ= ಶಾಖ
(289) ಉಷ್ಣವು ಹೆಚ್ಚಿದಂತೆ ತಾಪವು ಹೆಚ್ಚುತ್ತದೆ ಪರಮಾಣುಗಳು ಚಲಿಸುವುದರಿಂದ (ವೇಗವಾಗಿ) ಹೆಚ್ಚಾಗುತ್ತದೆ. ತಾಪ ಹೆಚ್ಚಾದಂತೆ ಪರಮಾಣುಗಳು ವೇಗವಾಗಿ ಚಲಿಸುತ್ತದೆ.
(290) ದ್ರವ್ಯದ ಪರಿಮಾಣ ಹೆಚ್ಚಿದರೆ ಉಷ್ಣವು ಹೆಚ್ಚಿರುತ್ತೆ ಆದರೆ ತಾಪವು ದ್ರವ್ಯದ ಪರಿಮಾಣವನ್ನು ಅವಲಂಬಿಸಿಲ್ಲ. ಅಂದರೆ ಅಣುಗಳ ಅತ್ಯಂತ ವೇಗದ ಚಲನೆಯಿಂದ ತಾಪದ ಮಟ್ಟ ಹೆಚ್ಚುತ್ತೆ.
(291) ಅಣುಗಳ ಪರಮಾಣುಗಳ ವೇಗದ ಚಲನೆಯಿಂದ ದ್ರವ್ಯರಾಶಿ ಹೆಚ್ಚಿದಂತೆ ಉಷ್ಣ ಹೆಚ್ಚಾಗುತ್ತೆ.
(292) ಅಣುಗಳ ವಿವಿಧ ರೀತಿಯ ಚಲನೆಯಿಂದ ಉಷ್ಣ ಉತ್ಪತ್ತಿಯಾಗುತ್ತದೆ. ಉಷ್ಣತೆಯ ಮಟ್ಟವೇ ತಾಪ. ದ್ರವ್ಯರಾಶಿ ಹೆಚ್ಚಿದಂತೆ ಆ ವಸ್ತುವಿನ ಉಷ್ಣ ಹೆಚ್ಚಾಗುತ್ತದೆ. ಆದರೆ ತಾಪ ಅಣುಗಳ ಅತ್ಯಂತ ವೇಗದ ಚಲನೆಯನ್ನು ಅವಲಂಬಿಸಿದೆ.
(293) ತಾಪವನ್ನು ಅಳೆಯುವ ಮಾನಗಳು -3 1. ಸೆಲ್ಸಿಯಸ್- C   2. ಫ್ಯಾರನ್‍ಹೀಟ್ F   3.ಕೆಲ್ವಿನ್- K
(294) 4C ನಲ್ಲಿ ನೀರು ದ್ರವರೂಪದಲ್ಲಿರುತ್ತದೆ. 4F ಈ ನಲ್ಲಿ ನೀರು ಘನ ರೂಪದಲ್ಲಿರುತ್ತದೆ.
(295) ಫ್ಯಾರನ್‍ಹೀಟ್‍ಗೆ ಪರಿವರ್ತಿಸುವ ಸೂತ್ರ = 9/5 X C + 32
(296) ಸೆಲ್ಸಿಯಸ್‍ಗೆ ಪರಿವರ್ತಿಸುವ ಸೂತ್ರ = 5/9 X F 32
(297) ಫ್ಯಾರನ್‍ಹೀಟ್‍ನಲ್ಲಿ ನೀರಿನ ಕುದಿಯುವ ಬಿಂದು- 212C. 32F  ಘನಿಸುವ ಬಿಂದು
(298) ಕೆಲ್ವಿನ್ ಪದ್ದತಿಯಲ್ಲಿ ನೀರು ಘನಿಸುವ ಬಿಂದು 273 ಘನಿಸುವ ಬಿಂದು 373 K
(299) ಮಾನವನ ದೇಹದ ತಾಪ - 37 C, 98.4 F , 310 K
(300) ಸೆಲ್ಸಿಯಸ್‍ನಿಂದ ಕೆಲ್ವಿನ್‍ಗೆ K= C + 273
(301) ಕೆಲ್ವಿನ್‍ನಿಂದ ಸೆಲ್ಸಿಯಸ್‍ಗೆ -> C = K 273
(302) ತಾಪಮಾನವನ್ನು ಕಂಡುಹಿಡಿದ ವಿಜ್ಞಾನಿ - ಗೆಲಿಲಿಯೋ
(303) ಉಷ್ಣದ ಏಕಮಾನ -> ಕ್ಯಾಲರಿ, ಉಷ್ಣದ ಅಂತರಾಷ್ಟ್ರೀಯ ಏಕಮಾನ ಜೂಲ್ ಕ್ಯಾಲರಿ = 4.2 J
(304) ಪ್ರತಿಯೊಂದು ವಸ್ತುವಿನ ಸ್ಥಿರತಾಪವನ್ನು ‘ದ್ರವನ ಬಿಂದು’ ಎನ್ನುವರು
(305) ಉಷ್ಣ, ಶಕ್ತಿ, ಶಾಖ ಇವುಗಳ ಅಂತರಾಷ್ಟ್ರೀಯ ಏಕಮಾನ ಜೂಲ್
(306) ವೈದ್ಯಕೀಯ ತಾಪಮಾಪಕ, ಸಾಮಾನ್ಯ ತಾಪ ಮಾಪಕದಲ್ಲಿ ‘ ಪಾದರಸವನ್ನು’ ಬಳಸುತ್ತಾರೆ. ಶೀತವಲಯದಲ್ಲಿ ‘ಆಲ್ಕೋಹಾಲ್ ಇರುವ ‘Dormo Meter’ ಬಳಸುತ್ತಾರೆ.
(307) ನಿರ್ವಾತದಲ್ಲಿ ಬೆಳಕಿನ ವೇಗ 3 X 10 M/s
(308) ಬೆಳಕು ಒಂದು ಮಾದ್ಯಮದಿಂದ ಮತ್ತೊಂದು ಮಾದ್ಯಮಕ್ಕೆ ಚಲಿಸುವಾಗ ಆ ಮಾದ್ಯಮದ ಮೇಲ್ಮೈಯನ್ನು ಬೇರ್ಪಡಿಸಲು ಅದು ತನ್ನ ದಿಕ್ಕನ್ನು ಬದಲಿಸುತ್ತದೆ. ಇದನ್ನು ‘ಬೆಳಕಿನ ವಕ್ರಿಭವನ’ ಎನ್ನುವರು
(309) ಬೆಳಕಿನ ವಕ್ರಿಭವನದ 1 ನೇ ನಿಯಮ : ಪತನ ಕಿರಣ, ವಕ್ರಿಮ ಕಿರಣ, ಎರಡು ಮಾದ್ಯಮಗಳನ್ನು ಪ್ರತ್ಯೇಕಿಸುವ ಮೈ ಮೇಲಿನ ಫಲನ ಬಿಂದುವಿಗೆ ಎಳೆದ ಲಂಬ ಇವು ಮೂರು ಒಂದೇ ಸಮತಲದಲ್ಲಿರುತ್ತದೆ.
(310) ಬೆಳಕಿನ ವಕ್ರಿಭವನದ ೨ ನೇ ನಿಯಮ :  ಪತನ ಕೋನದ ಸೈನು, ವಕ್ರಿಮ ಕೋನದ ಸೈನುಗಳ ನಡುವಿನ ನಿಷ್ಪತ್ತಿ ಸ್ಥಿರವಾಗಿರುತ್ತದೆ. ಇದನ್ನು ವಕ್ರಿಭವನ ಸೂಚ್ಯಂಕ ಎನ್ನುವರು - μ ( ಮ್ಯೂ)
(311) ಪತನ ಕೋನ ದೊಡ್ದದಾಗುತ್ತ ಹೋದಂತೆ ವಕ್ರಿಮಕೋನ 90 ಆದಾಗ ಬೆಳಕು ವಕ್ರೀಭವಿಸುವುದಿಲ್ಲ. ಇದು ಸಂಪೂರ್ಣ ಆಂತರಿಕ ಪ್ರತಿಫಲನ ಉಂಟಾಗುತ್ತದೆ. ಆದ್ದರಿಂದ ನೀರಿನಲ್ಲಿ 90 ಯಲ್ಲಿ ನಿಲ್ಲಿಸಿದ ಕೋಲು ಬಾಗಿದಂತೆ ಕಾಣಿಸುವುದಿಲ್ಲ.
(312) ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನದ ಅನ್ವಯಗಳು : ಸೂಕ್ಷ್ಮದರ್ಶಕ, ದೂರದರ್ಶಕ, ದುರ್ಬೀನ್, ದ್ಯುತಿ, ತಂತು ಕೇಬಲ್ ಬೈಸಿಕಲ್ ಹಿಂಬಾಗದಲ್ಲಿ ಪ್ರತಿಫಲಕ, ವಜ್ರಕ್ಕೆ ಪ್ರಖರವಾದ ಹೊಳಪು ನೀಡುವಲ್ಲಿ
(313) ಕಾಮನಬಿಲ್ಲು ಆಂತರಿಕ ಪ್ರತಿಫಲನ ನಿಯಮವನ್ನು ಅನುಸರಿಸಿಕೊಂಡು ಮೂಡುತ್ತದೆ.
(314) ಕಾಮನಬಿಲ್ಲು ಬೆಳಕಿನ ವಿಭಜನೆಯ ನಿಯಮವನ್ನು ಅನುಸರಿಸುತ್ತದೆ. (ವಕ್ರೀಭವನ ನಿಯಮ)
(315) ಮರಿಚಿಕೆ, ಬಿಸಿಲ್ಕುದುರೆ, ಇದು ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲ ನಿಯಮವನ್ನು ಅನುಸರಿಸುತ್ತವೆ.
(316) ವಜ್ರ -> ಬೆಳಕಿನ ಸಂಪೂರ್ಣ ಆಂತರಿಕ ಪ್ರತಿಫಲನದಿಂದ ಹೊಳೆಯುತ್ತದೆ.
(317) ಹೆಚ್ಚು ಸಾಂದ್ರಮಾದ್ಯಮದಿಂದ ಕಡಿಮೆ ಸಾಂದ್ರಮಾದ್ಯಮಕ್ಕೆ ಬೆಳಕು ಪ್ರಸಾರವಾಗುವಾಗ ಮಾದ್ಯಮವನ್ನು ಪ್ರತ್ಯೇಕಿಸುವ ಮೈನಲ್ಲಿ ಏರ್ಪಡುವ ಪತನ ಕೋನ ಕ್ರಾಂತಿ ಕೋನಕ್ಕಿಂತ ದೊಡ್ಡದಾಗಿದ್ದರೆ ಮಾತ್ರ ಬೆಳಕು ಸಂಪೂರ್ಣ ಆಂತರಿಕ ಪ್ರತಿಫಲನಗೊಳ್ಳುತ್ತದೆ.
(318) ಬೆಳಕಿನಲ್ಲಿರುವ 7 ಬಣ್ಣಗಳು, ( ನೇರಳೆ, ಬೂದು, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು) VIBGYOR
(319) ಬಾಗುವಿಕೆಯಲ್ಲಿ ಬಣ್ಣಗಳ ಕ್ರಮಾನುಗತ ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ಬೂದು, ನೇರಳೆ
(320) ಬಿಳಿ ಬಣ್ಣದಲ್ಲಿ 7 ಬಣ್ಣಗಳು ಅಡಕವಾಗಿರುತ್ತೆ ಎಂಬುದನ್ನು ತೋರಿಸಿಕೊಟ್ಟ ವಿಜ್ಞಾನಿ - ನ್ಯೂಟನ್
(321) ವಾಯುಮಂಡಲದ ಹೊರಗೆ ಆಕಾಶ ಕಪ್ಪಾಗಿ ಕಾಣುವುದು. ಬೆಳಕಿನ ಚದುರುವಿಕೆಯಿಂದ ಆಕಾಶ ನೀಲಿಯಾಗಿ ಕಾಣುವುದು.
(322) ದಾತುವಿನ ಅತ್ಯಂತ ಚಿಕ್ಕ ಹಾಗು ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ಕಣವೇ ಪರಮಾಣು. ಪರಮಾಣು ಸ್ವತಂತ್ರವಾಗಿರುಬಲ್ಲದು. ಅಥವಾ ಗುಂಪಿನಲ್ಲಿಯೂ ಇರಬಹುದು. ಪರಮಾಣುವನ್ನು ವಿಭಜಿಸಬಹುದು.
(323) ವಸ್ತುವಿನ ಎಲ್ಲಾ ಮೂಲಗುಣಗಳಿರುವ ಅತ್ಯಂತ ಸ್ವತಂತ್ರ್ಯ ಕಣವೇ ಅಣು
(324) ಪರಮಾಣುವಿನ ಗುಚ್ಚ ಅಣುವಾಗಿದ್ದು, ಇದು ಆ ವಸ್ತುವಿನ ಮೂಲಗುಣವನ್ನು ಹೊಂದಿರುತ್ತದೆ.
(325) ಪರಮಾಣು ಅಥವಾ ಪರಮಾಣುವಿನ ಗುಚ್ಚವು ‘ಎಲೆಕ್ಟ್ರಾನ್‍ಗಳನ್ನು ಕಳೆದುಕೊಳ್ಳುವುದರಿಂದ ಅಥವಾ ಪಡೆಯುವುದರಿಂದ ವಿದ್ಯುತ್ ಅಂಶಯುಕ್ತವಾದಾಗ ಅಯಾನು ಎನಿಸಿಕೊಳ್ಳುತ್ತದೆ.
(326) ಪರಮಾಣು ರಾಶಿಯನ್ನು ಕಂಡುಹಿಸಿಯಲು ಹೈಡ್ರೋಜನ್ ರಾಶಿಯನ್ನು ಆದರ್ಶಮಾನ ವನ್ನಾಗಿಸಲಾಗಿದೆ. ಉದಾ: ಆಕ್ಸಿಜನ್ ಪರಮಾಣು ರಾಶಿ-16 ಅಂದರೆ ಹೈಡ್ರೋಜನ್ ರಾಶಿಯ 16 ಪಟ್ಟು ಎಂದರ್ಥ
(327) ಪರಮಾಣು ರಾಶಿ = ದಾತುವಿನ ಒಂದು ಪರಮಾಣು ರಾಶಿ /  ಹೈಡ್ರೋಜನ್ ಒಂದು ಪರಮಾಣು ರಾಶಿ
(328) ಇತ್ತೀಜಿಗೆ ಪರಮಾಣುವಿನ ರಾಶಿಯನ್ನು ಕಂಡುಹಿಡಿಯಲು-> ಕಾರ್ಬನ್ 12 ಅನ್ನು ಉಪಯೋಗಿಸುತ್ತಾರೆ.
(329) ಅಣು ರಾಶಿಯನ್ನು ಕಂಡುಹಿಡಿಯಲು ಮೋಲ್ ಮಾನವನ್ನು ಉಪಯೋಗಿಸುತ್ತಾರೆ.
(330) ಅವೋಗಾಡ್ರೋ = 6.023 X (10)^23  ಹೈಡ್ರೋಜನ್ ಪರಮಾಣುಗಳೀರುತ್ತವೆ.
(331) ಯಾವುದೇ ವಸ್ತುವಿನ ಅಣುರಾಶಿಯನ್ನು 1 ಮೋಲ್ ಎಂದು ಪರಿಗಣಿಸಲಾಗುತ್ತದೆ. ಉದಾ: ನೀರಿನ ಒಂದು ಮೋಲ್ = 8 ಗ್ರಾಂ, (ಒಂದು ಮೋಲ್ = ವಸ್ತುವಿನ ಒಂದು ಗ್ರಾಂ)
(332) ಆಣುರಾಶಿಯ ಒಟ್ಟು ಮೊತ್ತವೇ ‘ಅವೋಗಾಡ್ರೋ’
(333) ಮೂಲವಸ್ತುವು ತನ್ನಲ್ಲಿರುವ ಎಲೆಕ್ಟ್ರಾನ್‍ಗಳನ್ನು ಕಳೆದುಕೊಳ್ಳುವ ಅಥವಾ ಪಡೆದುಕೊಳ್ಳುವ ಸ್ಥಿರ ಸಂಖ್ಯೆ ಸಂಯೋಗ ಸಾಮಥ್ರ್ಯವಾಗಿರುತ್ತದೆ.
(334) ಅತ್ಯಂತ ಹಗುರವಾದ ಪರಮಾಣು-ಹೈಡ್ರೋಜನ್, ಅತ್ಯಂತ ಭಾರವಾದ ಪರಮಾಣು- ಯುರೇನಿಯಂ
(335) ಹೆಚ್ಚು ಸಂಯುಕ್ತಗಳನ್ನು ಉಂಟುಮಾಡುವ ಮೂಲವಸ್ತು- ಹೈಡ್ರೋಜನ್
(336) ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಇರುವಿಕೆಯನ್ನು ಉಳಿಸಿಕೊಳ್ಳುವ ದಾತುಗಳ ಗುಂಪಿಗೆ ರ್ಯಾಡಿಕಲ್ಸ್ ಎನ್ನುವರು.
(337) ಒಂದು ದಾತು ಒಂದು ಸಂಯುಕ್ತದೊಂದಿಗೆ ಒಂದು ರೀತಿಯಲ್ಲಿ ಬೇರೊಂದು ಸಂಯುಕ್ತದೊಂದಿಗೆ ಬೇರೊಂದು ರೀತಿಯಲ್ಲಿ ವರ್ತಿಸಿದರೆ ‘ ಚರಸಂಯೋಗ ಸಾಮಥ್ರ್ಯ’ಎನ್ನುವರು.
(338) ಬೇರೆ ಬೇರೆ ಪರಮಾಣುಗಳೊಂದಿಗೆ ಆಗುವ ಎಲೆಕ್ಟ್ರಾನ್‍ಗಳ ಚೋಡಣೆಯ ಬದಲಾವಣೆಯನ್ನು ರಾಸಾಯನ ಕ್ರಿಯೆ ಎನ್ನುವರು.
(339) K.L.M.N ಎಲೆಕ್ಟ್ರಾನ್ ಕವಚಗಳು s.p.d.f  ಇವು ಉಪಕವಚಗಳು
(340) ಪರಮಾಣುವಿನ ಯಾವುದೇ ಕವಚದಲ್ಲಿರುಬಹುದಾದ ಎಲೆಕ್ಟ್ರಾನ್‍ಗಳ ಗರಿಷ್ಠ ಸಂಖ್ಯೆ -> 2n²
(341) ಹೈಡ್ರೋಜನ್ ಸ್ಯೂಟ್ರನ್ ಸಂಖ್ಯೆ 0
(342) ಪೊಟ್ಯಾಷಿಯಂ, ಸೋಡಿಯಂ ಇವು ಮೃದುವಾಗಿದ್ದರೂ ಲೋಹಗಳು
(343) ಪಾದರಸ, ಗ್ಯಾಲಿಯಂ ಇವು ದ್ರವ ಲೋಹಗಳು.
(344) ಗ್ರಾಫೈಟ್ ಅಲೋಹವಾಗಿದ್ದರೂ ಇದು ಉಷ್ಣ ಮತ್ತು ವಿದ್ಯುತ್ ವಾಹಕಗಳಾಗಿವೆ (ಹೊಳೆಯುವ ಮೃದುವಸ್ತು)
(345) ಸತು ಲೋಹವಾಗಿದ್ದರೂ ತಂತು ಮತ್ತು ಪತ್ರ ಶೀಲತ್ವ ಹೊಂದಿಲ್ಲ.
(346) ಲೋಹಗಳು ಎಲೆಕ್ಟ್ರಾನ್ ಬಿಟ್ಟುಕೊಡುತ್ತವೆ. ಅಲೋಹಗಳು ಸ್ವೀಕರಿಸುವ ಪ್ರವೃತ್ತಿಯುಳ್ಳವು.
(347) ಹೈಡ್ರೋಜನ್ ಅಲೋಹಗಳೊಂದಿಗೆ ವರ್ತಿಸಿ ಸಹ ವೇಲೆನ್ಸಿ ಸಂಯುಕ್ತಗಳನ್ನು ಕೊಡುತ್ತವೆ. C+ 2H₂ ---> CH
(348) ವಜ್ರ ಮತ್ತು ಗ್ರಾಪೈಟ್ ಇವು ಕಾರ್ಬನಿನ ಶುದ್ದ ರೂಪ.
(349) ಮರಗಳಲ್ಲಿ ಕರ್ಬನ್ ಘನ ಸಂಯುಕ್ತವಾಗಿ ಸೆಲ್ಯುಲೋಸ್ ರೂಪದಲ್ಲಿರುತ್ತದೆ.
(350) ಸುಣ್ಣದ ಕಲ್ಲು, ಅಮೃತ ಶಿಲೆ, ಕಪ್ಪೆಚಿಪ್ಪು, ಇವು ಕಾರ್ಬನಿನ ಘನ ಸಂಯುಕ್ತ ರೂಪವಾಗಿದೆ.
(351) ವಜ್ರ ವಿದ್ಯುತ್ ಅವಾಹಕ, ಉಷ್ಣದ ಅತಿ ದುರ್ಬಲ ವಾಹಕ
(352) ವಜ್ರವನ್ನು 1073 K ತಾಪದಲ್ಲಿ ಕಾಯಿಸಿದಾಗ ಉರಿದು ಕಾರ್ಬನ್ ಡೈ ಆಕ್ಸೈಡ್ ಉಂಟಾಗುತ್ತದೆ.
(353) ಗಾಜು ಮತ್ತು ವಜ್ರವನ್ನು ಕತ್ತರಿಸಲು ವಜ್ರವನ್ನು ಉಪಯೋಗಿಸುತ್ತಾರೆ.
(354) ಇದ್ದಿಲು, ಕಲ್ಲಿದ್ದಿಲು, ಕೋಕ್ ಇವುಗಳು ಕಾರ್ಬನಿನ ಅಸ್ಪಟಿಕ ರೂಪವಾಗಿದೆ.
(355) ಪರಮಾಣುವಿನ ಜೋಡಣೆಯ ವ್ಯತ್ಯಾಸವೆ ದಾತುಗಳ ಬಹುರೂಪತೆಗೆ ಕಾರಣ.
(356) ಸ್ಪಟಿಕತೆ ಎಂಬುವುದು ಪರಮಾಣುವಿನ ಜೋಡಣೆಯ ವ್ಯತ್ಯಾಸವಾಗಿರುತ್ತದೆ.
(357) ಗ್ರಾಫೈಟ್ ವಜ್ರದಂತೆ ಜಡವಸ್ತು, ಗ್ರಾಫೈಟ್ ಅನ್ನು ಲೂಬ್ರಿಕೇಂಟ್‍ಗಳಲ್ಲಿ ಬಳಸುತ್ತಾರೆ.
(358) ಬಿಟುಮಿನಸ್ ಕಲ್ಲಿದ್ದಿಲಿನಲ್ಲಿ 78 % ಕಾರ್ಬನ್ ಇರುತ್ತೆ ಇದನ್ನು ಕೋಲ್‍ವಾಟರ್‍ನಲ್ಲಿ ಉಪಯೋಗಿಸುತ್ತಾರೆ.
(359) ಅಂತ್ರಾಸೈಟ್ 90 % ಕಾರ್ಬನ್ ಇರುತ್ತೆ. ಇದನ್ನು ಉಗಿಬಂಡಿಯಲ್ಲಿ ಉಪಯೋಗಿಸುತ್ತಾರೆ ಮತ್ತು ಹೊಗೆ ರಹಿತ ಉರುವಲಾಗಿ ಉಪಯೋಗಿಸುತ್ತಾರೆ.
(360) ಪೀಟ್ 60 % ಮತ್ತು ಲಿಗ್ನೈಟ್ 70% ಕಾರ್ಬನ್ ಇರುತ್ತದೆ.
(361) ಬಿಟುಮಿನಸ್ ಕಲ್ಲಿದ್ದಲನ್ನು 1573 K ತಾಪದಲ್ಲಿ ಕಾಯಿಸಿದಾಗ ಕೋಕ್ ಉತ್ಪತ್ತಿಯಾಗುವುದು.
(362) C₂H₃  = ‘ಆಕ್ಸಿ ಅಸಿಟಲಿನ್ ‘ ಇದನ್ನು ಲೋಹ ಕತ್ತರಿಸಲು ಮತ್ತು ಲೋಹಗಳ ಬೆಸುಗೆಯಲ್ಲಿ ಉಪಯೋಗಿಸುತ್ತಾರೆ.
(363) ಸಿಲಿಕಾನ್ ಕಾಬೈಡ್ Sic (ಕಾರ್ಬೋರೆಂಡಮ್) - ಹಂತ ಉಪಕರಣಗಳಲ್ಲಿ ಉಪಯೋಗಿಸುತ್ತಾರೆ.
(364) ಕ್ಯಾಲ್ಸಿಯಂ ಕಾಬೈಡ್ ಶೀಘ್ರವಾಗಿ ನೀರಿನೊಡನೆ ವರ್ತಿಸಿ ಅಸಿಟಲಿನ್ ಅನಿಲವನ್ನು ಬಿಡುಗಡೆ ಮಾಗುತ್ತದೆ.
(365) ನಿಸರ್ಗದಲ್ಲಿ ನೇರವಾಗಿ ಸಿಗುವ ಕೆಲವು ಕಾರ್ಬೋನೇಟುಗಳು.
(366) ಮಾಲಟೈಟ್ -> ತಾಮ್ರದ ಕಾರ್ಬೋನ್ಭೆಟ್
(367) ಸಿರುಸೈಟ್ -> ಸೀಸದ ಕಾಬೋನೇಟ್
(368) ಸುಣ್ಣದ ಕಲ್ಲು -> ಕ್ಯಾಲ್ಸಿಯಂ ಕಾರ್ಬೋನೇಟ್
(369)  ಕಾರ್ಬನಿಕ್ ಆಮ್ಲ + ಕ್ಯಾಲ್ಸಿಯಂ ಹೈಡ್ರಾಕ್ಸೈಡ್ -> ಕ್ಯಾಲ್ಸಿಯಂ ಕಾರ್ಬೋನೇಟ್ + ನೀರು
(370) ಕ್ಯಾಲ್ಸಿಯಂ ಆಕ್ಸೈಡ್ + ನೀರು -> ಕ್ಯಾಲ್ಸಿಯಂ ಹೈಡ್ರಾಕ್ಸೈಡ್ + ಶಾಖ
(371) ಕ್ಯಾಲ್ಸಿಯಂ ಕಾರ್ಬೋನೆಟ್- ಸುಣ್ಣದ ಕಲ್ಲು, ಕ್ಯಾಲ್ಸಿಯಂ ಆಕ್ಸೈಡ್ - ಸುಟ್ಟ ಸುಣ್ಣ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ - ಸುಣ್ಣದ ತಿಳಿ ನೀರು.
(372) ಸೋಡಿಯಂ ಕಾರ್ಬೋನೇಟ್ ವಾಷಿಂಗ್ ಸೋಡಾ (Na₂CO₃ )
(373) ಸೋಡಿಯಂ ಕಾರ್ಬೋನೇಟ್ ತಯಾರಿಕೆಗೆ ಸೋಡಿಯಂ ಬೈ ಕಾರ್ಬೋನೇಟ್ ಅನ್ನು ಆಮ್ಲ ನಿರೋಧಕವಾಗಿ ಉಪಯೋಗಿಸುತ್ತಾರೆ.
(374) ಬೇಕಿಂಗ್ ಪುಡಿ => ಸೋಡಿಯಂ ಬೈ ಕಾರ್ಬೋನೇಟ್ + ಪೊಟ್ಯಾಷಿಯಂ ಹೈಡ್ರೋಜನ್
(375) ಮೃದು ಲೋಹ => ಪೊಟ್ಯಾಶ್ + ಸೋಡಿಯಂ
(376) ಕಬ್ಬಿಣ ಲೋಹೋದ್ದರಣದಲ್ಲಿ ಅಪರರ್ಷಣಕಾರಿಯಾಗಿ ಕೋಕ್ ಅನ್ನು ಬಳಸುತ್ತಾರೆ.
(377) ರಬ್ಬರ್ ವಾಲ್ಕನೀಕರಣ -> ಕಾಡಿಗೆ
(378) ಸಂಶ್ಲೇಷಿತ ಪೆಟ್ರೋಲಿಯಂ ತಯಾರಿಕೆಯಲ್ಲಿ ಕಲ್ಲಿದ್ದಲು ಬಳಸುತ್ತಾರೆ.
(379) ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಕಾಯಿಸಿದಾಗ ಕ್ಯಾಲ್ಸಿಯಂ ಆಕ್ಸೈಡ್ ಮತ್ತು ಕಾರ್ಬನ್ ಡೈ ಆಕ್ಸೈಡ್ ದೊರೆಯುತ್ತದೆ.
(380) 4⁰C ಗಿಂತ ಕಡಿಮೆ ತಾಪದಲ್ಲಿ ನೀರು ಹಿಗ್ಗುತ್ತದೆ.
(381) ನೀರು ಒಂದು ಸಂಯುಕ್ತ ಎಂದು 1981 ರಲ್ಲಿ ಹೆನ್ರಿ ಕ್ಯಾವೆಂಡಿಶ್ ಸಂಶೋಧಿಸಿದನು.
(382) ಯುಡಿಯೋ ಮೀಟರ್ ಎಂಬ ಉಪಕರಣದ ಸಹಾಯದಿಂದ ನೀರನ್ನು ಪ್ರಯೋಗ ಶಾಲೆಯಲ್ಲಿ ತಯಾರಿಸುತ್ತಾರೆ.
(383) ಹೈಡ್ರೋಜನ್ ಮತ್ತು ನೈಟ್ರೋಜನ್ ಸಂಶೋಧಿಸಿದವರು -> ಹೆನ್ರಿ ಕ್ಯಾವೆಂಡಿಶ್
(384) ಹೈಡ್ರೋಜನ್‍ನನ್ನು ಆಕ್ಸಿಜನ್ ಪರಿಸರದಲ್ಲಿ ಉರಿಸಿದಾಗ ನೀರು ಉತ್ಪತ್ತಿಯಾಗುತ್ತದೆ.
(385) ಶುದ್ದ ನೀರು ಒಂದು ತಟಸ್ಥ ದ್ರವ ಇದು ಆಮ್ಲಿಯವೂ ಅಲ್ಲ, ಪ್ರತ್ಯಾಮ್ಲಿಯಾವು ಅಲ್ಲ.
(386) ಸೋಡಿಯಂ, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಬೇರಿಯಂ ಇವು ಕ್ರಿಯಾಶೀಲ ದಾತುಗಳು.
(387) ಪಾದರಸಯುಕ್ತ ಸೋಡಿಯಂ ಪೊಟ್ಯಾಷಿಯಂ ನೀರಿಗೆ ಹಾಕಿದರೆ ಕ್ರಿಯೆ ಬಿರುಸು ಕಡಿಮೆಯಾಗಿ ಹೈಡ್ರೋಜನ್ ಸಂಗ್ರಹಿಸಬಹುದು.
(388) ಏಸ್ಟರ್‍ಗಳನ್ನು ಆಹಾರಕ್ಕೆ ಕೃತಕ ಅಪೇಕ್ಷಿತ ವಾಸನೆ ಕೊಡಲು ಉಪಯೋಗಿಸುತ್ತಾರೆ. ಇದು ಆಮ್ಲ ಮತ್ತು ಆಲ್ಕೋಹಾಲ್‍ನಲ್ಲಿ ನೀರು ನಷ್ಟವಾದಾಗ ದೊರೆಯುತ್ತದೆ.
(389) ಸಂಪೂರ್ಣ ಶುದ್ದ ನೀರು ಕುಡಿಯಲು ಯೋಗ್ಯವಲ್ಲ, ಕಾರಣ ಇದು ಸಪ್ಪೆಯಾಗಿರುತ್ತದೆ.
(390) ನಿರ್ದಿಷ್ಟ ಪ್ರಮಾಣದಲ್ಲಿ ದ್ರವಣಗಳು ಮತ್ತು ಅನೀಲಗಳು ಕರಗಿರುವ ನೀರು ಕುಡಿಯಲು ಉಪಯುಕ್ತವಾದ ನೀರು ಆಗಿರುತ್ತದೆ.
(391) ಕಾಯಿಸಿದ ನೀರು ರುಚಿಯಾಗಿರುವುದಿಲ್ಲ. ಕಾರಣ ಅದರಲ್ಲಿ ಆಕ್ಸಿಜನ್ ಇರುವುದಿಲ್ಲ.
(392) ಗುಣಮಟ್ಟದ ನೀರು ಅಳೆಯುವ ಮಾನ -> WHO & ISI
(393) ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಲವಣಗಳು ನೀರಿನ ಗಡಸುತನಕ್ಕೆ ಕಾರಣವಾಗಿವೆ.
(394) ಸೋಡಿಯಂ ನೀರಿನ ಗಡಸುತನವನ್ನು ಹೋಗಲಾಡಿಸುತ್ತೆ.
(395) ಕಾರ್ಬನ್ ಡೈ ಆಕ್ಸೈಡ್, ಗಂಧಕದ ಡೈ ಆಕ್ಸೈಡ್ ಆಮ್ಲ ಮಳೆಗೆ ಕಾರಣವಾಗಿದೆ.
(396) ಶೇಕಡಾವಾರು ಪ್ರಮಾಣದಲ್ಲಿ ಗಾಳಿಗಿಂತ ನೀರಿನಲ್ಲಿ ಹೆಚ್ಚು ಆಮ್ಲಜನಕ ವಿಲೀನವಾಗಿರುತ್ತೆ.
(397) ಅಸವಿತ ನೀರು ಶುದ್ದ ನೀರಲ್ಲ. ಕಾರಣ ಅದರಲ್ಲಿಯೂ ಕೊಂಚ ವಾಯು ವಿಲೀನವಾಗಿರುತ್ತೆ.
(398) Co & H  1:2 ಪ್ರಮಾಣ = ಜಲಾನೀಲ
(399) ಸಂಯುಕ್ತಗಳೊಂದಿಗೆ ಮತ್ತು ಕಾರ್ಬಾನಿಕ್ ಎಸ್ಟರುಗಳೊಂದಿಗೆ ನೀರು ಕ್ರಿಯೆ ನಡೆಸುವಾಗ ತನ್ನಲ್ಲಿರುವ OH ಪರಮಾಣು ಪುಂಜವನ್ನು ನೀಡಿ ಬೇರೊಂದು ಪರಮಾಣು ಪುಂಜವನ್ನು ಪಡೆಯುವುದನ್ನು ‘ಜಲವಿಭಜನೆ’ ಎನ್ನುವರು.
(400) ಕ್ಯಾಲ್ಸಿಯಂ ಮತ್ತು ಮೆಗ್ನೀಷಿಯಂ ಸಲ್ಪೇಟ್‍ಗಳು ನೀರಿಗೆ ಶಾಶ್ವತ ಗಡಸುತನವನ್ನು ನೀಡುತ್ತವೆ.
(401) ಟಿ.ಎಂ.ಸಿ --> ಥೌಸಂಡ್ ಮಿಲಿಯನ್ ಕ್ಯೂಬಿಕ್ ಫೀಟ್ (ಸಾವಿರ ಮಿಲಿಯ ಘನ ಅಡಿ ಎಂದರ್ಥ)
(402) ಕ್ಯೂಸೆಕ್ಸ್ --> ಕ್ಯೂಬಿಕ್ ಫೀಟ್/ಸೆಕೆಂಡ್. ಇದು ನೀರು ಹರಿಯುವ ಪರಿಮಾಣದ ದರ ಸೂಚಿಸುವ ಮಾನ.
(403) ಡ್ಯೂಟೇರಿಯಂ ಎಂಬುದು ಹೈಡ್ರೋಜನ್ ಸಮಸ್ಥನಿ (ಐಸೋಟೋಪು) ಡಿ.
(404) ಡ್ಯೂಟೇರಿಯಂ ಆಕ್ಸೈಡ್ (D²O) ಇದು ಭಾರಜಲ.
(405) (D²O) --> ಇದನ್ನು ಭೈಜಕ ಕ್ರಿಯಾಕಾರಿಗಳಲ್ಲಿ ಮಂದಕವಾಗಿ ಉಪಯೋಗಿಸುತ್ತಾರೆ.
(406) ಪೂರ್ಣ ಶುದ್ದ ನೀರು ಹೆಚ್ಚಿನ ಗಾತ್ರದಲ್ಲಿ ನಸು ನೀಲಿ ಬಣ್ಣದಲ್ಲಿರುತ್ತೆ. ಇದಕ್ಕೆ ಕಾರಣ ನೀರಿನಲ್ಲಿರುವ ಆಕ್ಸಿಜನ್.


ಜೀವ ಶಾಸ್ತ್ರ 8ನೇ ತರಗತಿ
(407) ಚಲನೆಯ ಅಂಗಗಳು: ಅಮೀಬಾ- ಮಿಥ್ಯಪಾದ, ಯೂಗ್ಲೀನಾ - ಲೋಮಾಂಗ(ಸಿಲಿಯಾ), ಪ್ಯಾರಾಮೀಸಿಯಂ- ಕಶಾಂಗ, ಹೈಡ್ರಾ ಕರಬಳ್ಳಿ,
(408) ಕ್ಲಾಮಿಡೋಮಾನಸ್ ಕಶಾಂಗದ ಮೂಲಕ
(409) ಸ್ಪಂಜು, ಹವಳ, ಸಮುದ್ರದ ಅನಿಮೋ ಇವುಗಳು ಚಲಿಸುವುದಿಲ್ಲ.
(410) ಕ್ಲಾಮಿಡೋ ಮಾನಸ್, ವಾಲ್ಟಾಕ್ಸ್, ಇವು ತಮ್ಮ ದೇಹದಿಂದ ಚಲಿಸುತ್ತವೆ.
(411) ಆಹಾರ + ಆಕ್ಸಿಜನ್ --> ಶಕ್ತಿ
(412) ಅತಿ ಹೆಚ್ಚು ಅವಧಿ ಜೀವಿಸುವ ಮರ - ಬ್ರೆಜಿಲ್ ಕೋನ್ ಪೈನ್ (4000-4500 ವರ್ಷ)
(413) ಜೀವಶಾಸ್ತ್ರದ ಪಿತಾಮಹಾ ಅರಿಸ್ಟಾಟಲ್
(414) ವರ್ಗೀಕರಣದ ಪಿತಾಮಹಾ ಕರಲೋಸ್ ಅನೀಯಸ್
(415) ಆಯೂರ್ವೇದ ಪಿತಾಮಹಾ ಚರಕ
(416) ಜೀವಿಗಳ ವರ್ಗೀಕರಣದ ಮಜಲುಗಳು --> ಪ್ರಭೇದ ಜಾತಿ ಕುಟುಂಬ - ಗಣ - ವರ್ಗ - ವಂಶ - ಸಾಮ್ರಾಜ್ಯ.
(417) ಜೀವಿಗಳ ಸಾಮ್ರಾಜ್ಯದ ವಿಧಗಳು 5 ಅವುಗಳು
(418) ಮೊನೆರಾ - ಬ್ಯಾಕ್ಟೀರಿಯಾ, ನೀಲ ಹಸಿರುಶೈವಲ್ಯ
(419) ಪ್ರೊಟೆಸ್ಟ ಅಮೀಬಾ, ಪ್ಯಾರಮೀಸಿಯಂ, ಎಂಟಮಿಬಾ, ಪ್ಲಾಸ್ಮೋಡಿಯಂ, ಶೈವಲ
(420) ಸಸ್ಯ,
(421) ಪ್ರಾಣಿ, ಮತ್ತು
(422) ಶಿಲಿಂದ್ರ
(423) ವೈರಸ್ ಸಾಮಾನ್ಯ ವರ್ಗೀಕರಣದಲ್ಲಿ ಇಲ್ಲ. ಕಾರಣ ಇದಕ್ಕೆ ಜೀವಕೋಶವಿಲ್ಲ. ಇದು ಜೀವ ಮತ್ತು ನಿರ್ಜೀವಗಳ ನಡುವಿನ ಕೊಂಡಿ.
(424) ಪ್ರೊಕ್ಯಾರಿಯೋಟ್‍ಗಳು ಎಂದರೆ ಕೋಶಪೊರೆ, ಮೈಟೊಕಾಂಡ್ರಿಯ ಇಲ್ಲದೆ ಇರುವಂತಹ ಜೀವಿಗಳು.
(425) ಯೂಕ್ಯಾರಿಯೋಟ್ ಎಂದರೆ ಕೋಶಪೊರೆ, ಮೈಟೊಕಾಂಡ್ರಿಯ ಇರುವಂತಹ ಜೀವಿಗಳು
(426) ಅಸಿಟಿಲ್ಗೊರಿಯ- ಇದು ನೀಲಿ ಹಸಿರು ಆಲ್ಗೆ ಮತ್ತು ನಾಸ್ಟಾಕ್‍ಗೆ ಉದಾಹರಣೆಯಾಗಿದೆ.
(427) ಏಕಕೋಶೀಯ ಶೈವಲ - ಕ್ಲಾಮಿಡೋಮಾನಸ್ ಡಯಾಟಂಗಳು
(428) ಬಹುಕೋಶೀಯ ಶೈವಲ - ಪಾಂಡೋರೈನ, ವಾಲ್ವಾಕ್ಸ್
(429) ಎಳೆಯಾಕಾರದ ಶೈವಲ - ಸ್ಪೈರೋಗೈರ ಮತ್ತು ಯುಲೋಫ್ರಿಕ್ಸ್
(430) ಶೀಲಿಂಧ್ರಗಳಲ್ಲಿ ಏಕಕೋಶೀಯ ಶೈವಲ - ಯಿಸ್ಟ್ , ಬಹುಕೋಶೀಯ ಶೈವಲ - ನಾಯಿಕೊಡೆ
(431) ಸಸ್ಯ ವೈರಸ್ ಟಿ.ಎಂ.ವಿ. (ಟೋಬಾಕೊ ಮೋಸಾಯಿಕ್ ವೈರಸ್) ಪ್ರಾಣಿ ವೈರಸ್ - ಹೆಚ್.ಐ.ವಿ
(432) ವೈರಸ್ ನ್ಯೂಕ್ಲಿಕ್ ಆಮ್ಲ ಮತ್ತು ಪ್ರೊಟೀನ್ ಕವಚದಿಂದ ನಿರ್ಮಿತವಾಗಿದೆ.
(433) ಜೀವಕೋಶವನ್ನು ಕಂಡುಹಿಡಿದವರು ರಾಬರ್ಟ್ ಹುಕ್
(434) ಸೂಕ್ಷ್ಮದರ್ಶಕವನ್ನು ಕಂಡುಹಿಡಿದವರು - ಲೆವನ್ ಹಾಕ್
(435) ಜೀವಕೋಶಕ್ಕೆ Cell ಎಂದು ನಾಮಕರಣ ಮಾಡಿದವರು ರಾಬರ್ಟ್ ಹುಕ್
(436) ಕೋಶಪೊರೆ ಇದು ಜೀವಕೋಶದ ಹೊರ ಕವಚ
(437) ಕೋಶಪೊರೆ 2 ರೀತಿಯ ಚಲನೆಗೆ ಅವಕಾಶ ಮಾಡಿಕೊಡುತ್ತದೆ.  1.ವಿಸರಣೆ 2. ಅಭಿಸರಣೆ
(438) ಕಣದಂಗಗಳು ಹೋಶದ್ರವ್ಯದಲ್ಲಿ ಕಂಡುಬರುತ್ತದೆ.
(439) ಪ್ರೋಟೀನ್ ಕಣಗಳು ಎಂಡೋಪ್ಲಾಸ್ಟಿಕ್ ರೆಟಿಕ್ಯುಲಂ ಕಣದಂಗದ ಮೇಲ್ಬಾಗದಲ್ಲಿ ಅಂಟಿಕೊಂಡಿರುತ್ತದೆ ಮತ್ತು ಸ್ವತಂತ್ರವಾಗಿ ಚಲಿಸುತ್ತವೆ.
(440) ರೈಬೋಜೋಮ್ ಮತ್ತು ಸೆಂಟ್ರಿಯೋಲ್ ಇವು ಪೊರೆರಹಿತ ಕಣದಂಗಗಳು.
(441) ದ್ಯುತಿಸಂಶ್ಲೇಷಣಾ ಕ್ರಿಯೆಯು ಕ್ಲೋರೋಪ್ಲಾಸ್ಟ್ ನಲ್ಲಿ ನಡೆಯುತ್ತದೆ.
(442) ಪೊರೆ ಹಿಂಬದಿಗೆ ಮಡಚಿಕೊಳ್ಳುವುದರಿಂದ ಗ್ರಾನ ನಿರ್ಮಾಣವಾಗುತ್ತೆ. ಗ್ರಾನದ ಮೇಲೆ ಕ್ಲೋರೊಫಿಲ್ ಅಣುಗಳು ರಚನೆಗೊಳ್ಳುತ್ತವೆ.
(443) ಗ್ರಾನಗಳ ನಡುವಿನ ಸ್ಥಳ ಸ್ಟೋಮವಾಗಿರುತ್ತೆ.
(444) ಮೈಟೊಕ್ರಾಂಡ್ರಿಯಾದ ಒಳಪೊರೆಯಲ್ಲಿ ಬೆರಳಿನಾಕಾರದ ರಚನೆಯ ಅಂಗವನ್ನು ಕ್ರಿಸ್ಟ ಎನ್ನುವರು.
(445) ಜೀವಕೋಶದ ಶಕ್ತಿಕೇಂದ್ರ ಮತ್ತು ಉಸಿರಾಟದ ಕೇಂದ್ರ ‘ಮೈಟೋಕಾಂಡ್ರಿಯ’
(446) ಮೈಟೊಕಾಂಡ್ರಿಯ ದಲ್ಲಿ ಶಕ್ತಿ ATP (ಅಡಿನೋಸಿನ್ ಟ್ರೈ ಫಾಸ್ಪೇಟ್) ರೂಪದಲ್ಲಿ ಸಂಗ್ರಹವಾಗುತ್ತದೆ.
(447) ಜೀವಕೋಶದ ಸಂಗ್ರಹ ಸ್ಥಳ ರಸದಾಂಗಗಳು
(448) ಜೀವಕೋಶದಲ್ಲಿ ರಾಸಾಯನಿಕ ವಸ್ತುಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುವ ಕಣದಂಗ ‘ಲೈಸೋಜೋಮ್’
(449) ಜೀವಕೋಶದ ಅತ್ಮಹತ್ಯೆ ಸಂಚಿ - ಲೈಸೋಜೋಮ್
(450) ಕೋಶವಿಭಜನೆಯ ಸಂದರ್ಭದಲ್ಲಿ ಕದರಿನ ಎಳೆಗಳನ್ನು ಉತ್ಪತ್ತಿ ಮಾಡುವ ಕಣದಂಗ - ಸೆಂಟ್ರಿಯೋಲ್
(451) ಜೀವಕೋಶ ವಿಸರ್ಜಿಸುವ ನಿರ್ಜೀವ ವಸ್ತುಗಳು ಕ್ಯಾಲ್ಸಿಯಂ ಕಾರ್ಬೋನೆಟ್, ಕ್ಯಾಲ್ಸಿಯಂ ಆಕ್ಸಲೇಟ್
(452) ಕೋಶಕೇಂದ್ರದ ದ್ರವ್ಯದಲ್ಲಿ ಎಳೆಯಂತಹ ರಚನೆಯನ್ನು ಕ್ರೊಮಾಟಿನ್ ಎನ್ನುವರು.
(453) ಕ್ರೊಮ್ಯಾಟಿನ್ ವಿಭಜನೆಯ ಸಂದರ್ಭದಲ್ಲಿ ಸಾಂದ್ರಗೊಂಡು ಕ್ರೋಮೋಜೋಮುಗಳು ಮಾರ್ಪಡುತ್ತವೆ.
(454) ಕ್ರೋಮೊಸೋಮು, ನ್ಯೂಕ್ಲಿಕ್ ಆಮ್ಲ ಪ್ರೋಟಿನ್‍ನಿಂದ ರಚನೆಯಾಗಿದೆ.
(455) ಮಾನವ ಜೀವಕೋಶದಲ್ಲಿ 46 ವರ್ಣತಂತುಗಳು ಇರುತ್ತವೆ.
(456) ಜೀನ್‍ಗಳು ವರ್ಣತಂತುವಿನಲ್ಲಿ ಕಂಡುಬರುತ್ತವೆ. ಇದು DNA  ದ ವಿಶಿಷ್ಟ ಭಾಗವಾಗಿದೆ.
(457) ಕೋಶಕೇಂದ್ರವು ಜೀವಕೋಶದ ಎಲ್ಲಾ ಚಟುವಟಿಕೆಯನ್ನು ನಿಯಂತ್ರಿಸುತ್ತದೆ.
(458) ಕಿರುಕೋಶಕೇಂದ್ರ ಅಥವಾ ನ್ಯೂಕ್ಲಿಯೋಲಸ್, ಇದು ನ್ಯೂಕ್ಲಿಯಸ್‍ನಲ್ಲಿ ಕಂಡುಬರುತ್ತದೆ. ಇದು RNA ಯಿಂದ ಕೂಡಿದೆ. ಇದು ಪ್ರೋಟಿನ್ ಸಂಶ್ಲೇಷನೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ.
(459) DNA ನ್ಯೂಕ್ಲಿಯಸ್‍ನಲ್ಲಿ ಕಂಡುಬಂದರೆ, RNA ನ್ಯೂಕ್ಲಿಯೋಲಸ್‍ನಲ್ಲಿ ಕಂಡುಬರುತ್ತದೆ.
(460) ಕೋಶಭಿತ್ತಿ ಇದು ಸಸ್ಯ ಜೀವಕೋಶದ ಕೋಶಪೊರೆಯ ಹೊರಭಾಗದಲ್ಲಿ ಕಂಡುಬರುತ್ತದೆ.
(461) ಶೈವಲ - ಇದು ಸೂಕ್ಷ್ಮಾಣು ಜೀವಿಯ ಒಂದು ವರ್ಗವಾಗಿದೆ.
(462) ಸೂಕ್ಷ್ಮಾಣು ಜೀವಿಗಳನ್ನು 5 ಭಾಗಗಳಾಗಿ ವಿಂಗಡಿಸುತ್ತಾರೆ. ಅವುಗಳೆಂದರೆ : ವೈರಸ್, ಶಿಲಿಂಧ್ರ, ಬ್ಯಾಕ್ಟೀರಿಯಾ, ಪ್ರೋಟೋಜೋವಾಗಳು, ಶೈವಲ
(463) ಕಾಲರಾ, ಸಿಡುಬು, ಹುಚ್ಚುನಾಯಿ ಕಡಿತಕ್ಕೆ ಲಸಿಕೆಯನ್ನು ಕಂಡುಹಿಡಿದವರು- ಲ್ಯೂಯಿ ಪಾಶ್ಚರ್(ಫ್ರಾನ್ಸ್)
(464) ಮಾನವ ದೇಹದಲ್ಲಿ ಉಂಟಾಗುವ ಅನೇಕ ರೋಗಗಳಿಗೆ ಸೂಕ್ಷ್ಮಾಣು ಜೀವಿಗಳ ಬೆಳವಣಿಗೆಯೇ ಕಾರಣ ಎಂಬುದನ್ನು ತೋರಿಸಿಕೊಟ್ಟ ಮೊದಲ ವಿಜ್ಞಾನಿ ಲ್ಯೂಯಿ ಪಾಶ್ಚರ್
(465) ಬ್ಯಾಕ್ಟೀರಿಯಗಳ ಅಧ್ಯಯನಕ್ಕೆ ವಿಶಿಷ್ಟ ಮಾರ್ಗಗಳನ್ನು ತೋರಿಸಿಕೊಟ್ಟ ವಿಜ್ಞಾನಿ - ರಾರ್ಬರ್ಟ್ ಕೋಚ್
(466) ಕ್ಷಯ, ಆಂಥ್ರಾಕ್ಸ್ ರೋಗಕ್ಕೆ ಬ್ಯಾಕ್ಟೀರಿಯಗಳು ಕಾರಣ ಎಂದು ತೋರಿಸಿಕೊಟ್ಟ ವಿಜ್ಞಾನಿ- ರಾರ್ಬರ್ಟ್ ಕೋಚ್
(467) ಬ್ಯಾಕ್ಟೀರಿಯಕ್ಕೆ 2 ಹೊದಿಕೆ ಇದ್ದು, ರೋಗಕಾರಿ ಬ್ಯಾಕ್ಟೀರಿಯಾಕ್ಕೆ 3 ಹೊದಿಕೆ ಇದೆ. 3ನೇ ಹೊದಿಕೆಗೆ ಕ್ಯಾಪ್ಸೂಲ್ ಎಂದು ಹೆಸರು.
(468) ಬ್ಯಾಕ್ಟೀರಿಯಾದ ಅತ್ಯಂತ ಹೊರಗಿನ ಭಾಗ ಕೋಶಭಿತ್ತಿ
(469) ಜೈವಿಕ ಲಕ್ಷಣಗಳನ್ನು ವಂಶಪರಂಪರವಾಗಿ ಸಾಗಿಸುವ ವಸ್ತು ಡಿಎನ್‍ಎ
(470) ಬ್ಯಾಕ್ಟೀರಿಯಾಗಳ ಉಪಯೋಗ: ಟೀ ಎಲೆಯನ್ನು ಹದಗೊಳಿಸಲು, ಮಿನಿಗಾರ್ ಉತ್ಪಾದಿಸಲು, ಚರ್ಮ ಹದಗೊಳಿಸಲು, ಜೀವ ಉತ್ಪಾದಿಸುವುದಕ್ಕೆ.
(471) ಬ್ಯಾಕ್ಟೀರಿಯಗಳಿಂದ ಬರುವ ರೋಗಗಳು - ನ್ಯೂಮೋನಿಯಾ, ವಿಷಮಶೀತಜ್ವರ, ಕಾಲರಾ, ಡಿಪ್ತೀರಿಯಾ/ ಕ್ಷಯ
(472) ಪ್ರೋಟೋಜೋವಾಗಳಿಂದ ಬರುವ ರೋಗಗಳು.
(473) ಎಂಟಾಮಿಬಾ ಅಮೀಬಿಕ್ ಆಮಶಂಕೆ
(474) ಟ್ರೈಪನೋಸೋಮ - ನಿದ್ರಾರೋಗ
(475) ಜಿಯೋರ್ಡಿಯ ಜಿಯಾರ್ಡಿಯಾಸಿಸ್
(476) ಬ್ರೆಡ್ ಮತ್ತು ಕೇಕ್ ಉತ್ಪಾದನೆಯಲ್ಲಿ ಯೀಸ್ಟ್ ಉಪಯೋಗಿಸುತ್ತಾರೆ.
(477) 60. ಶಿಲೀಂಧ್ರ ದಿಂದ ಆಥ್ಲೇಟ್ಸ್ ಫುಟ್ ರೋಗ ಬರುತ್ತದೆ.
(478) ಒಂದೇ ಒಂದು ಸರಳ ಶರ್ಕರದ ಅಣುವನ್ನು ಹೊಂದಿರುವ ಶರ್ಕರಗಳನ್ನು ಮಾನೋಸ್ಯಾಕರೈಡ್ ಗಳು ಎನ್ನುವರು
(479) ಕಾರ್ಬೋಹೈಡ್ರೆಟುಗಳಲ್ಲಿ 3 ವಿಧಗಳು :- ಶರ್ಕರ, ಪಿಷ್ಟ, ಸೆಲ್ಯುಲೋಸ್.
(480) ಶರ್ಕರ ಮತ್ತು ಪಿಷ್ಟವನ್ನು ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುತ್ತೆ. ಸೆಲ್ಯುಲೋಸ್ ಇದು ನಾರು ಪದಾರ್ಥ.
(481) ಕಾರ್ಬೋಹೈಡ್ರೇಟುಗಳು ಆರ್ಗಾನಿಕ್ ಸಂಯುಕ್ತಗಳಾಗಿವೆ (ಸಾವಯವ)
(482) ಮಾನೋಸ್ಯಾಕರೈಡುಗಳು ಮತ್ತು ಓಲಗೋಸ್ಯಾಕರೈಡುಗಳು ಶರ್ಕರದ 2 ವಿಧಗಳಾಗಿವೆ.
(483) ಮಾನೋ ಸ್ಯಾಕರೈಡುಗಳು ಸಿಹಿರುಚಿಯನ್ನು ಹೊಂದಿರುತ್ತದೆ. ಗ್ಲುಕೋಸ್, ಫ್ರಕ್ಟೋಸ್, ಗ್ಯಾಲಕ್ಟೋಸ್, ಇವೆಲ್ಲವು ಮಾನೋಸ್ಯಾಕರೈಡ್‍ಗಳಾಗಿವೆ. C H O
(484) ಓಲಿಗೋಸ್ಯಾಕರೈಡುಗಳು ಸಂಕೀರ್ಣ ಶರ್ಕರಗಳಾಗಿವೆ
(485) ಸುಕ್ರೋಸ್ ( ಗ್ಲೂಕೋಸ್ + ಫ್ರಕ್ಟೋಸ್)
(486) ಲ್ಯಾಕ್ಟೋಸ್ ( ಗ್ಲೂಕೋಸ್ + ಗ್ಯಾಲಕ್ಟೋಸ್)
(487) ಮಾಲ್ಟೋಸ್ ( ಗ್ಲೂಕೋಸ್ + ಗ್ಲೂಕೋಸ್)
(488) ಶರ್ಕರ ನೀರಿನಲ್ಲಿ ಕರಗುತ್ತದೆ. ಪಿಷ್ಟ ನೀರಿನಲ್ಲಿ ಕರಗುವುದಿಲ್ಲ.
(489) ಶರ್ಕರ ರುಚಿಯಾಗಿರುತ್ತದೆ. ಪಿಷ್ಟ ರುಚಿಯಾಗಿರುವುದಿಲ್ಲ.
(490) ಗ್ಲೂಕೋಸ್ ಕೊಬ್ಬಿನ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ. ಪಿಷ್ಟ, ಕೊಬ್ಬು, ಪ್ರೋಟೀನ್ ಇವುಗಳು ನೀರಿನಲ್ಲಿ ಕರಗುವುದಿಲ್ಲ.
(491) ಕಾರ್ಬೋಹೈಡ್ರೇಟ್ ಸಂಯುಕ್ತಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬಿನಲ್ಲಿರುತ್ತೆ. ಆದ್ದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್‍ಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಕ್ತಿ ಉತ್ಪತ್ತಿ ಮಾಡುತ್ತದೆ.
(492) ಕೊಬ್ಬು -ಆಲ್ಕೋಹಾಲ್, ಬೆನ್‍ಜಿನ್ ಮತ್ತು ಈಥರ್‍ಗಳಲ್ಲಿ ಕರಗುತ್ತದೆ.
(493) ಮೇದೋಜೀರಕಾಂಗ ಗ್ರಂಥಿಯಲ್ಲಿಯ ಲೀಪೇಸ್ ಕಣ್ವದಿಂದ ಗ್ಲಿಸರಾಲ್‍ಗಳಾಗಿ ವಿಭಜನೆಹೊಂದುತ್ತದೆ.
(494) ಕೊಬ್ಬಿನಲ್ಲಿ 2ವಿಧ :- 1. ಪ್ರರ್ಯೋಪ್ತ 2. ಅಪರ್ಯೋಪ್ತ
(495) ಸಾಮಾನ್ಯ ತಾಪದಲ್ಲಿ ಪದಾರ್ಥಗಳು ಘನಸ್ಥಿತಿಯಲ್ಲಿದ್ದರೆ ಅದನ್ನು ಪರ್ಯಾಪ್ತ ಕೊಬ್ಬಿನ ಆಮ್ಲಗಳು ಎನ್ನುವರು .
(496) ಕೊಠಡಿಯ ಸಾಮಾನ್ಯ ತಾಪದಲ್ಲಿ ಪದಾರ್ಥಗಳು ದ್ರವ ಸ್ಥಿತಿಯಲ್ಲಿದ್ದರೆ ಅವುಗಳನ್ನು ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ಎನ್ನುವರು.
(497) ಪ್ರೋಟೀನ್‍ಗಳು ಅಮೀನೋ ಆಮ್ಲಗಳೆಂಬ ನೈಟ್ರೋಜನ್ ಸಂಯುಕ್ತಗಳಿಂದ ಕೂಡಿದೆ.
(498) ಪ್ರೋಟಿನುಗಳು ಸಣ್ಣ ಕರುಳಿನಲ್ಲಿರುವ ಪೆಪ್ಟಿಡೇಸ್ ಎಂಬ ಕಣ್ವದಿಂದ ಅಮೀನೋ ಅಮ್ಲಗಳೆಂಬ ವಿಭಜಿಸುತ್ತವೆ.
(499) ಇನ್ಸುಲೀನ್ ಗ್ಲೂಕಾಗಾನ್ ಹೀಮೋಗ್ಲೋಬಿನ್ ಆಂಟಿಬಾಡಿಗಳು, ಡಿಎನ್‍ಎ, ಆರ್‍ಎನ್‍ಎ, ಸ್ಯೂಕ್ಲಿಕ್ ಆಸಿಡ್ ಇವುಗಳು ಪ್ರೋಟಿನುಗಳಿಗೆ ಉದಾಹರಣೆಗಳಾಗಿವೆ.
(500) ಸರಳ ಪ್ರೋಟಿನುಗಳು ಅಮೀನೋ ಆಮ್ಲಗಳೆಂಬ ಅಣುಗಳಿಂದ ಮಾತ್ರ ಮಾಡಲ್ಪಟ್ಟಿದೆ. ಉದಾ: ಮೊಟ್ಟೆಯ ಅಲ್ಬೂಮಿನ್ ಬೀಜಗಳಲ್ಲಿನ ಗ್ಲಾಬ್ಯುಲೀನ್.
(501) ಯುಗ್ಮ ಪ್ರೋಟೀನ್‍ಗಳು ಅಮೀನೋ ಆಮ್ಲಗಳಲ್ಲದೆ ಇತರ ಅಣುಗಳಿಂದ ಮಾಡಲ್ಪಟ್ಟಿದೆ. ಉದಾ: ಲೀಪೊ ಪ್ರೋಟೀನ್,
(502) ಅಮೀನೊ ಆಮ್ಲದ ಅಣುಸೂತ್ರ --> NH
(503) ಕಾರ್ಬೋಹೈಡ್ರೈಟುಗಳನ್ನು ಅಯೋಡಿನ್‍ನಿಂದ ಪರೀಕ್ಷಿಸುವರು.
(504) ಶರ್ಕರವನ್ನು ಬೆನಡಿಕ್ ದ್ರಾವಣದಿಂದ ಪರೀಕ್ಷಿಸುವರು.
(505) ತಾಮ್ರದ ಸಲ್ಪೇಟ್, ಸೋಡಿಯಂ ಸಿಟ್ರೇಟ್, ಸೋಡಿಯಂ ಕಾರ್ಬೋನೇಟುಗಳ ಮಿಶ್ರಣವೇ ‘ಬೆನೆಡಿಕ್ಟ್’ ದ್ರಾವಣ.
(506) ಸೂಕ್ಷ್ಮಾಣು ಜೀವಿಯ ವಿಘಟನೆಯಿಂದ ಪಡೆಯುವ ಗೊಬ್ಬರ ಸಾವಯವ ಗೊಬ್ಬರ.
(507) ವ್ಯವಸಾಯದ ತ್ಯಾಜ್ಯ ವಸ್ತುಗಳಿಂದ ಪಡೆಯುವ ಗೊಬ್ಬರ ಕಾಂಪೋಸ್ಟ್ ಗೊಬ್ಬರ.
(508) ಮಣ್ಣಿನ ಸೂಕ್ಷ್ಮಾಣು ಜೀವಿಗಳು ಗೊಬ್ಬರವಾಗಿ ಪರಿಣಮಿಸುತ್ತವೆ. ಇದನ್ನು ಜೈವಿಕ ಫಲವತ್ತತೆ ಎನ್ನುವರು. ಉದಾ: ನಾಸ್ಟಾಕ್, ಅಜೋಲಾ, ಅನಾಬೀನಾ, ರೈಜೋಬಿಯಂ.
(509) ಮಣ್ಣಿನ ಪಿ.ಹೆಚ್ ಮೌಲ್ಯ 6.5 ರಿಂದ 7.5 ವರೆಗೆ
(510) ಸೂರ್ಯಕಾಂತಿಯನ್ನು ದಿಣ್ಣೆ ಮತ್ತು ತಗ್ಗು ವಿಧಾನದಿಂದ ಬೆಳೆಯುವರು.
(511) ಜೈವಿಕ ವಿಧಾನದಲ್ಲಿ ಕೀಟಗಳಿಂದ ಪಾಪಾಸ್ಸುಕಳ್ಳಿ ಕಳೆಯನ್ನು ನಿಯಂತ್ರಿಸುತ್ತಾರೆ.
(512) ಯುಪಟೋರಿಯಂ, ಲಾಂಟಾನಾ, ಪಾರ್ಥೇನಿಯಂ, ಹುಲ್ಲು, ಇವು ಕಳೆಗಳಾಗಿವೆ.
(513) ಡಿ.ಡಿ.ಟಿ, ಮೆಲಥಿಯಾನ್, ಬಿಹೆಚ್‍ಸಿ ಅಥವಾ ಗೆಮಾಕ್ಸಿನ್, ಗಂಧಕ, ಸತುವಿನ ಸಲ್ಪೈಡ್, ಇವು ಕೀಟನಾಶಕಗಳಾಗಿವೆ.
(514) ಜೀವಿಗಳು ವಾಸಿಸಲು ಬೇಕಾದ ಉಷ್ಣ - 10` ಸಿ - 40`ಸಿ
(515) ಸಣ್ಣಕರುಳು ಮತ್ತು ದೊಡ್ಡ ಕರಳುಗಳನ್ನು ಅಪೆಂಡಿಕ್ಟಿಸ್ ಸೇರಿಸುತ್ತದೆ.
(516) ಎಲೆಗಳ ವಯಸ್ಸನ್ನು ವೈಜ್ಞಾನಿಕವಾಗಿ ಪರಿಗಣಿಸಿ 4 ಯುಗಗಳನ್ನಾಗಿ ವಿಭಾಗಿಸಿದ್ದಾರೆ.
(517) ಪ್ರೋಟೆರೋಜೋಯಿಕ್ --> ಅಕಶೇರುಕಗಳು
(518) ಪೇಲಿಯೋಜೋಯಿಕ್ --> ಮೀನು
(519) ಮೀಸೋಜೋಯಿಕ್ ---> ಸರಿಸೃಪಗಳು
(520) ಸಿನೋಜೋಯಿಕ್ ---> ಸಸ್ತನಿಗಳ ಕಾಲ
(521) ಸರಿಸೃಪಗಳಿಂದ ಸಸ್ತನಿಗಳು ವಿಕಾಸಗೊಂಡವು
(522) ಸೀಲಾಕಾಂತ್ ಎಂಬ ನೀಲಿ ಮೀನು 400 ಮಿಲಿಯನ್ ವರ್ಷಗಳಿಂದ ಬದುಕುಳಿದಿದೆ.

9ನೇ ತರಗತಿ ಭೌತ ಶಾಸ್ತ್ರ
(523) ಕಾಂತ ಮತ್ತು ಕಾಂತೀಯ ವಸ್ತುಗಳು ಪರಸ್ಪರ ಆಕರ್ಷಿಸುತ್ತವೆ.
(524) ಒಂದೇ ಕಾಂತದ ಇರಡು ಧೃವಗಳ ಆಕರ್ಷಣ ಸಾಮಥ್ರ್ಯ ಒಂದೇ ಆಗಿರುತ್ತದೆ.
(525) ವಿದ್ಯುತ್ ಪ್ರವಾಹದಲ್ಲಿ ಉಷ್ಣ, ಬೆಳಕು, ಕಾಂತ ಇವು ಒಂದನ್ನೊಂದು ಬೇರ್ಪಡಿಸಲಾಗುವುದಿಲ್ಲ ಎಂಬುದನ್ನು ಸಾಬೀತುಪಡಿಸಿದ ವಿಜ್ಞಾನಿ - ಹಾನ್ಸ್ ಕ್ರಿಶ್ಚಿಯನ್ ಆಸ್ರ್ಟೆಡ್
(526) ವಿದ್ಯುತ್ ಪ್ರವಾಹದ ವಾಹಕದಲ್ಲಿ ದಿಕ್ಸುಜಿಯ ದಿಕ್‍ಪಲ್ಲಟವಾಗುವುದು.
(527) ವಿದ್ಯುತ್ ಪ್ರವಾಹವು ಕ್ಷಿತಿಜಕ್ಕೆ ಲಂಬವಾಗಿದ್ದಾಗ ದಿಕ್ಸುಚಿಯ ಮುಳ್ಳು ಅಪ್ರದಕ್ಷಿಣೆಯಲ್ಲಿ ಅನಿಯಾಗುತ್ತದೆ. ಕೆಳಮುಖ ವಾಗಿದ್ದಾಗ ದಿಕ್ಸುಜಿಯ ಮುಳ್ಳು ಪ್ರದಕ್ಷಿಣೆ ಯಾಕಾರದಲ್ಲಿ ಅಣಿಯಾಗುತ್ತವೆ.
(528) ಮ್ಯಾಕ್ಸ್‍ವೆಲೆನ್’ ಬಲಗೈ ಹಿಡಗಟ್ಟು ನಿಯಮದ ಪ್ರಕಾರ ಹೆಬ್ಬೆರಳು ವಿದ್ಯುತ್ ಪ್ರವಾಹದ ದಿಕ್ಕನ್ನು ಸೂಚಿಸಿದರೆ ಇತರೆ ಬೆರಳುಗಳು
(529) ವೃತ್ತಾಲಾರ ವಾಹಕ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾದಾಗ ಸುರುಳಿಯ ಕೇಂದ್ರದಲ್ಲಿ ಏಕರೂಪ ಕಾಂತಕ್ಷೇತ್ರ ಏರ್ಪಡುತ್ತದೆ. ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚಿದಂತೆ ಕಾಂತಕ್ಷೇತ್ರದ ಪ್ರಭಲತೆ ಹೆಚ್ಚುತ್ತದೆ.
(530) ಸುರುಳಿಯ ವ್ಯಾಸ ಕಡಿಮೆಯಾದಂತೆ ಕಾಂತಕ್ಷೇತ್ರದ ಪ್ರಬಲತೆ ಹೆಚ್ಚುತ್ತದೆ.
(531) ವಿದ್ಯುತ್ ಆವಿಷ್ಟ ಕಣಗಳೂ ತಮ್ಮ ಚಲನೆಯಿಂದ ಪಡೆದುಕೊಳ್ಳುವ ಶಕ್ತಿಯೇ ವಿದ್ಯುತ್‍ಚ್ಚಕ್ತಿ
(532) ಏಕಮಾನ ಧನ ವಿದ್ಯುತ್ ಆವೇಶಯುಕ್ತ ಕಣಗಳನ್ನು ಆನಂತ ಬಿಂದುವಿನಿಂದ ನಿಗದಿತ ಬಿಂದುವಿಗೆ ತರುವಲ್ಲಿ ನಡೆದ ಕೆಲಸವನ್ನು ನಿಗದಿತ ಬಿಂದುವಿನ ವಿದ್ಯುತ್ ವಿಭವ ಎನ್ನುವರು.
(533) ವಿದ್ಯುತ್ ವಿಭವದ ಅಂತರಾಷ್ಟ್ರೀಯ ಏಕಮಾನ ಕೂಲಮ್ = 6.3 x10 ಎಲೆಕ್ಟ್ರಾನುಗಳ ಒಟ್ಟು ವಿದ್ಯುತ್ ಆವೇಶ
(534) ವಿಭವಾಂತರದ ಅಂತರಾಷ್ಟ್ರೀಯ ಏಕಮಾನ = ವೋಲ್ಟ್
(535) ವಿಭವಾಂತರವನ್ನು ಅಳೆಯುವ ಅಂತರಾಷ್ಟ್ರೀಯ ಸಾಧನ = ವೋಲ್ಟಾಮೀಟರ್
(536) ವಿದ್ಯುತ್ ಪ್ರವಾಹವನ್ನು ಉಂಟುಮಾಡುವ ಕಣಗಳು ಎಲೆಕ್ಟ್ರಾನುಗಳು
(537) ಒಂದು ಸೆಕೆಂಡಿನಲ್ಲಿ ಒಂದು ವಾಹಕದ ಯಾವುದೇ ಬಿಂದುವಿನ ಮೂಲಕ ಪ್ರವಾಹಿಸುತ್ತಿರುವ ವಿದ್ಯುತ್ ಆವೇಶದ ಪರಿಮಾಣವನ್ನು ಆ ವಾಹಕದಲ್ಲಿರುವ ವಿದ್ಯುತ್ ಪ್ರವಾಹ ಎನ್ನುವರು.
(538) ವಿದ್ಯುತ್ ಪ್ರವಾಹ ಐ ಇದರ ಅಂತರಾಷ್ಟ್ರೀಯ ಏಕಮಾನ = ಆಂಪೈರ್
(539) ಒಂದು ಸೆಕೆಂಡಿನಲ್ಲಿ ಪ್ರವಾಹಿಸಿದ ವಿದ್ಯುದಾವೇಶಗಳ ಪರಿಮಾಣವನ್ನು ಒಂದು ಆಂಪೈರ್ ಎನ್ನುವರು.
(540) ವಿದ್ಯುತ್ ಚಾಲಕ ಬಲದ ಅಂತರಾಷ್ಟ್ರೀಯ ಏಕಮಾನ - ವೋಲ್ಟಾಮೀಟರ್
(541) ವಿದ್ಯುದಾವಿಷ್ಟಗಳ ಚಲನೆಗೆ ವಾಹಕ ಒಡ್ಡಿದ ಅಡಚಣೆಯನ್ನು ವಿದ್ಯುತ್‍ರೋಧ ಎನ್ನುವರು.
(542) ವಿದ್ಯುತ್ ರೋಧದ ಅಂತರಾಷ್ಟ್ರೀಯ ಏಕಮಾನ ಓಮ್
(543) 1 ಹೆಚ್‍ಪಿ = 746 ವ್ಯಾಟ್ ( ಒಂದು ಸೆಕೆಂಡಿನಲ್ಲಿ ಒಂದು ಜೂಲ್ ಶಕ್ತಿ ಬಳಕೆಯಾಗಿ ಕೆಲಸ ನಡೆದರೆ ಅದು ಒಂದು ವ್ಯಾಟ್)
(544) ಒಂದು ಯೂನಿಟ್ = Kwh
(545) ವಿದ್ಯುತ್ ಸಾಮಥ್ರ್ಯದ ವ್ಯವಹಾರಿಕ ಏಕಮಾನ = ಯೂನಿಟ್
(546) ಫ್ಯೂಸ್ ಇದು ವಿದ್ಯುನ್ಮಂಡಲದ ಟ್ರಾಫಿಕ್ ಪೊಲೀಸ್ ಎಂದು ಕರೆಯುವರು.
(547) ಸ್ಥಾನಪಲ್ಲಟ ಕಾಯದ ಆರಂಭಿಕ ಸ್ಥಾನದಿಂದ ಅಂತಿಮ ಸ್ಥಾನಕ್ಕೆ ಇರುವ ಕನಿಷ್ಠ ದೂರ.
(548) ಚಲಿಸಿದ ದೂರ, ಜವ -> ಅದಿಶ, ವೇಗ, ವೇಗೋತ್ಕರ್ಷ, ಸ್ಥಾನಪಲ್ಲಟ -> ಸದಿಶ
(549) ಚಲನೆಗೆ ಕಾರಣವಾಗುವ ಬಲಗಳು ಯಾಂತ್ರಿಕ ಬಲಗಳಾಗಿವೆ.
(550) ಭೂಮಿಯ ವೇಗ 9.8 ms (ಗುರುತ್ವ ವೇಗೋತ್ಕರ್ಷ ಭೂಮದ್ಯ ರೇಖೆಯಲ್ಲಿ ಗರಿಷ್ಠವಿರುತ್ತದೆ)
(551) ಚಲನೆಯ ಸಮೀಕರಣಗಳು:
(552) V=U+at
(553) 2.S=ut+1/2 at²
(554) V=U+2as
(555)  V²-U²=2gh
(556) ಚಲನೆ ಮತ್ತು ಬಲದ ನಡುವಿನ ಸಂಭಂಧವನ್ನು ತೋರಿಸಿಕೊಟ್ಟ ವಿಜ್ಞಾನಿ - ಗೆಲಿಲಿಯೋ
(557) ಯಾವುದೇ ಕಾಯದ ಮೇಲೆ ನಡೆಸುತ್ತಿರುವ ಒಟ್ಟಾರೆ ಫಲಿತ ಬಲದ ಪರಿಮಾಣ ಸೊನ್ನೆ ಆಗದೇ ಇದ್ದರೆ ಆ ಕಾಯ ವೇಗೋತ್ಕರ್ಷಗೊಳಿಸುತ್ತದೆ.
(558) ಚಲನ ಶಕ್ತಿ 1/2 mv
(559) w = f x d
(560) ಪ್ರಚ್ಛನ್ನ ಶಕ್ತಿಯನ್ನು ಕಂಡುಹಿಡಿಯುವ ಸೂತ್ರ -> w = mgh
(561) ಅಂತರಾಷ್ಟ್ರೀಯ ಪದ್ದತಿಯಲ್ಲಿ ಶಕ್ತಿಯ ಏಕಮಾನ ಜೂಲ್ ಅಥವಾ ನ್ಯೂಟನ್ ಮೀಟರ್
(562) ವಸ್ತುಗಳು ಉಷ್ಣದಿಂದ ಏಕರೀತಿಯಲ್ಲಿ ವ್ಯಾಕೋಚಿಸುವುದಿಲ್ಲ.
(563) ಒಂದು ಮೀಟರ್ ಉದ್ದದ ಸಲಾಕೆಯನ್ನು 10ಸಿ ನಷ್ಟು ಉಷ್ಣ ಕೊಟ್ಟಾಗ ಅದರ ಉದ್ದದಲ್ಲಿ ಹೆಚ್ಚಳವಾಗುವುದಕ್ಕೆ ಆ ಘನದ ರೇಖೆಯ ವ್ಯಾಕೋಚನ ಸಹಾಂಕವಾಗುತ್ತದೆ.
(564) ರೇಖೆಯ ವ್ಯಾಕೋಚನ ಸಹಾಂಕದ ಅಂತರಾಷ್ಟ್ರೀಯ ಏಕಮಾನ K-1 (ಪರ್ ಡಿಗ್ರಿ ಕೆಲ್ವಿನ್)
(565) ತಾಪದ ಅಂತರಾಷ್ಟ್ರೀಯ ಏಕಮಾನ - ಕೆಲ್ವಿನ್ (K)
(566) ವಿವಿಧ ವಸ್ತುಗಳ ತಾಪವನ್ನು ಒಂದೇ ಮಟ್ಟಕ್ಕೆ ಏರಿಸಲು ವಿವಿಧ ಮಟ್ಟಗಳಲ್ಲಿ ಉಷ್ಣ ಕೊಡುವುದಕ್ಕೆ ‘ವಿಶಿಷ್ಟೋಷ್ಣ’ ಎಂದು ಕರೆಯುವರು.
(567) ಒಂದು ಕೆ.ಜಿ. ರಾಶಿಯುಳ್ಳ ವಸ್ತುವನ್ನು 1ಸಿ ನಷ್ಟು ಏರಿಸಲು ಕೊಡಲೇಬೇಕಾದ ಉಷ್ಣವನ್ನು ಆ ವಸ್ತುವಿನ ವಿಶಿಷ್ಟೋಷ್ಣ ಎನ್ನುವರು.
(568) ವಿಶಿಷ್ಟೋಷ್ಣ ದ ಅಂತರಾಷ್ಟ್ರೀಯ ಏಕಮಾನ (ಜೂಲ್/ಕಿಲೋಗ್ರಾಂ/ 0 ಡಿಗ್ರಿ ಸೆಲ್ಸಿಯಸ್)
(569) ವಸ್ತುವಿನ ಉಷ್ಣ ಅದರ ಸ್ವಭಾವನ್ನು ಅವಲಂಬಿಸಿದೆ.
(570) ಉಷ್ಣ ಸಾಮಥ್ರ್ಯವನ್ನು ಕಂಡು ಹಿಡಿಯುವ ಸೂತ್ರ - ಊ = ms ( m= ರಾಶಿ s= ವಿಶಿಷ್ಟೋಷ್ಣ)
(571) ಕುದಿಬಿಂದು, ದ್ರವನಬಿಂದು, ಆವಿಕರಣ ಬಿಂದು ಇವುಗಳಲ್ಲಿ ವ್ಯಾತ್ಯಾಸವಿದೆ.
(572) ವಸ್ತುವಿನ ತಾಪವನ್ನು ಹೆಚ್ಚಿಸದೆ ಅದನ್ನು ದ್ರವ ಸ್ಥಿತಿಗೆ ಬದಲಾಯಿಸಲು ಬೇಕಾದ ಉಷ್ಣವನ್ನು ‘ದ್ರವನ ಗೊಪ್ತೋಷ್ಣ’ ಎನ್ನುವರು.
(573) ಕೆಲವು ವಸ್ತುಗಳ ಅವಿಕರಣ ಗುಪ್ತೋಷ್ಣ (KJKg-1) ನೀರು- 2260, ಪಾದರಸ- 300, ಅಮೋನಿಯ-1400, ಆಲ್ಕೋಹಾಲ್ 900
(574) ತಾಪ ಹೆಚ್ಚಿಸದೆ ಗಾತ್ರದಲ್ಲಿ ಏರಿಕೆಯಾಗುವುದೇ ಗುಪ್ತೋಷ್ಣ
(575) ಸಮೀಪ ದೃಷ್ಟಿ ದೋಷ’ ನಿವಾರಣೆಗೆ ನಿಮ್ನ ಮಸೂರವನ್ನು ಉಪಯೋಗಿಸುತ್ತಾರೆ.
(576) ದೂರ ದೃಷ್ಟಿ ದೋಷ’ ನಿವಾರಣೆಗೆ ಪೀನ ಮಸೂರವನ್ನು ಉಪಯೋಗಿಸುತ್ತಾರೆ.
(577) ಸೂಕ್ಷ್ಮದರ್ಶಕಗಳಲ್ಲಿ “ಪೀನಮಸೂರವನ್ನು” ಉಪಯೋಗಿಸುತ್ತಾರೆ.
(578) ಭೂತ ಕನ್ನಡಿಯಲ್ಲಿ “ಪೀನಮಸೂರವನ್ನು” ಉಪಯೋಗಿಸುತ್ತಾರೆ.
(579) ದ್ಯುತಿ ರಾಸಾಯನಿಕ ಕ್ರಿಯೆಯ ಪರಿಣಾಮದಿಂದ ಬಿಂಬ ಪರದೆಯ ಮೇಲೆ ಸ್ಥಿರವಾಗಿ ನಿಲ್ಲುತ್ತದೆ.
(580) ದೂರದರ್ಶಕ, ಬೈನಾಕ್ಯುಲರ್ (ದ್ವಿನೇತ್ರ) ಗಳಲ್ಲಿ ಪೀನಮಸೂರವನ್ನು ಉಪಯೋಗಿಸುತ್ತಾರೆ.
(581) ಸೂರ್ಯನ ಕೇಂದ್ರ ಸಿದ್ದಾಂತವನ್ನು ಮಂಡಿಸಿದವನು ಕೋಪರ್ನಿಕಸ್
(582) ಭೂಮಿ ಅಂಡಾಕಾರದಲ್ಲಿ ಸೂರ್ಯನನ್ನು ಸುತ್ತುತ್ತಿದೆ ಎಂದು ತಿಳಿಸಿದವರು ಕೆಪ್ಲರ್
(583) ರಾತ್ರಿ ಆಕಾಶದಲ್ಲಿ ಪ್ರಕಾಶಮಾನವಾಗಿ ಕಾಣುವ ಕಾಯ ‘ ಚಂದ್ರ, ಶುಕ್ರ ‘
(584) ದೂರದರ್ಶಕ ಕಂಡುಹಿಡಿದವರು ಗೆಲಿಲಿಯೋ
(585) ಶುಕ್ರಗ್ರಹವು ಪರಿಭ್ರಮಿಸುವ ಅವಧಿಗಿಂತ ಭ್ರಮಿಸುವ ಅವಧಿ ಧೀರ್ಘವಾದದ್ದು.
(586) ಕೆಂಪು ಗ್ರಹ - ಮಂಗಳ, ಸೌರವ್ಯೂಹದಲ್ಲಿ ವೇಗವಾಗಿ ಪರಿಭ್ರಮಿಸುವ ಗ್ರಹ- ಗುರು.
(587) ಸೌರವ್ಯೂಹದಲ್ಲಿ ಕಡಿಮೆ ಸಾಂದ್ರತೆಯ ಗ್ರಹ - ಶನಿ
(588) ದೂರದರ್ಶಕದಿಂದ ಪತ್ತೆಯಾದ ಮೊದಲ ಗ್ರಹ ಯುರೇನಸ್
(589) ಭೂಮಿಗೆ ಸಮೀಪವಿರುವ ವಾಯುಮಂಡಲದ ಸ್ತರ ಟ್ರೋಪೋಸ್ಪಿಯರ್ ಅಥವಾ ಪರಿವರ್ತನ ವಲಯ (ಉಷ್ಣಗೋಲ)
(590) ಉಷ್ಣಗೋಲದಲ್ಲಿ ಮುಖ್ಯವಾಗಿ ನೈಟ್ರೋಜನ್ ಮತ್ತು ಆಕ್ಸಿಜನ್
(591) ಎರಡನೇ ಭಾಗ - ಸ್ಟ್ರ್ಯಾಟೋಸ್ಪಯರ್ (ಸ್ತರಗೋಲ)
(592) ಸ್ತರಗೋಲದಲ್ಲಿ ಮುಖ್ಯವಾಗಿ ಓಜೋನ್ ಇದೆ.
(593) ಜಲಗೋಲ ಭೂ ಸಮತಲದ 2/3 ಭಾಗದಿಂದ ಆವೃತ್ತವಾಗಿದೆ.
(594) ಆಮ್ಲ ಮತ್ತು ಪ್ರತ್ಯಾಮ್ಲಗಳೊಂದಿಗೆ ವರ್ತಿಸುವ ಆಕ್ಸೈಡ್‍ಗಳನ್ನು ‘ಮೆಟಲಾಯ್ಡ್’ ಎನ್ನುವರು. ಉದಾ: ಅಲ್ಯುಮಿನಿಯಂ
(595) ಎಲೆಕ್ಟ್ರಾನ್ ಕವಚ ತುಂಬುವ ಸೂತ್ರ -> 2n²
(596) ಹೈಡ್ರೋಜನ್, ಲೀಥಿಯಂ, ಸೋಡಿಯಂ, ಪೊಟ್ಯಾಸಿಯಂ, ಇವು ಕ್ಷಿರಿಯ ಲೋಹಗಳು.
(597) ವಸ್ತುಗಳು ಕುದಿಯುವುದು ‘ ದ್ರವಸ್ಥಿತಿಯಲ್ಲಿ’ ದ್ರವಿಸುವುದು ಘನಸ್ಥಿತಿಯಲ್ಲಿ.
(598) ಎಲೆಕ್ಟ್ರಾನ್ ಉಪ ಕವಚಗಳು s, p, d, f
(599) ರಾಸಾಯನಿಕ ಬಂಧವೆಂದರೆ, ಪರಮಾಣುವನ್ನು ನಿರ್ದಿಷ್ಟ ದೂರದಲ್ಲಿ ಹಿಡಿದಿಡುವ ಆಕರ್ಷಣೆ ಮತ್ತು ವಿಕರ್ಷಣೆಗಳ ನಡುವಿನ ಸಮತೋಲ ಸ್ಥಿತಿ.
(600) ಪರಮಾಣುವಿನ ಋಣ ಅಥವಾ ಧನ ಎಂದು ಕರೆಯಲ್ಪಡುವುದು.: ಯಾವ ಪರಮಾಣುವಿನ ಎಲೆಕ್ಟ್ರಾನ್, ಬೇರೊಂದು ಪರಮಾಣುವಿನ ಎಲೆಕ್ಟ್ರಾನ್‍ನೊಡನೆ ಸಂಯೋಗ ಹೊಂದಿ ಅದರ ಕಕ್ಷೆಯೊಳಗೆ ಪ್ರವೇಶಿಸುತ್ತದೆಯೋ, ಪ್ರವೇಶಿಸಿದಂತಹ ಎಲೆಕ್ಟ್ರಾನ್
(601) ಧನ ಆವೇಶವನ್ನು ಪಡೆಯುತ್ತದೆ. ಪ್ರವೇಶಿಸಿಕೊಂಡ ಪರಮಾಣು ಋಣ ಅವೇಶವನ್ನು ಪಡೆಯುತ್ತದೆ.
(602)  ಧನ ಮತ್ತು ಋಣ ಅಯಾನುಗಳು ಸ್ಥಾಯಿ ವಿದ್ಯುದಾಕರ್ಷಣ ಶಕ್ತಿಯಿಂದ ಬಂಧಿತವಾಗುವುದಕ್ಕೆ ‘ಅಯಾನಿಕ್ ಬಂಧ’ ಎನ್ನುವರು.
(603) ಅಯಾನಿಕ್ ಬಂಧದಲ್ಲಿ ಪರಮಾಣುಗಳು ಸ್ಥಿರ ವಿನ್ಯಾಸವನ್ನು ಪಡೆದಿರುತ್ತವೆ.
(604) ಅಯಾನಿಕ್ ಬಂಧದಲ್ಲಿ ವಸ್ತುಗಳು ಘನ ಸ್ಥಿತಿಯಲ್ಲಿರುತ್ತವೆ. ಉದಾ:Na₂Cl
(605) ಸಹವೇಲೆನ್ಸಿಯ ಬಂಧದಲ್ಲಿ ಎಲೆಕ್ಟ್ರಾನುಗಳ ಎರಡು ಪರಮಾಣುಗಳ ಮಧ್ಯದಲ್ಲಿ ಬಂಧಿತವಾಗಿರುತ್ತವೆ.
(606) ಅಯಾನಿಕ್ ಬಂಧದ ಅಣುಗಳು ಮತ್ತು ದ್ರುವಿಯ ಅಣುಗಳು ಮಾತ್ರ ನೀರಿನಲ್ಲಿ ವಿಲೀನವಾಗುತ್ತವೆ. ಸಹವೇಲೆನ್ಸಿಯ ಬಂಧದ ಅಣುಗಳು ನೀರಿನಲ್ಲಿ ವಿಲೀನವಾಗುವುದಿಲ್ಲ.
(607) ಅಯಾನಿಕ್ ಬಂಧದ ವಸ್ತುಗಳು ಕುದಿಯುವ ಬಿಂದು ದ್ರವನ ಬಿಂದು ಅ ಧಿಕವಾಗಿರುತ್ತದೆ. ಸಹವೇಲೆನ್ಸಿಯ ಬಂಧದ ವಸ್ತುಗಳದ್ದು ಕಡಿಮೆಯಿರುತ್ತದೆ.
(608) ಅಯಾನಿಕ್ ಬಂಧದಲ್ಲಿ ಶಕ್ತಿ-ಉಷ್ಣ ಕೊಟ್ಟಾಗ ಎಲೆಕ್ಟ್ರಾನುಗಳು ವಿಚ್ಛೇದನಗೊಳ್ಳುತ್ತವೆ. ಸಹವೇಲೆನ್ಸಿಯ ಬಂಧದಲ್ಲಿ ಪರಮಾಣುಗಳು ವಿಚ್ಛೇದಳ್ಳುತ್ತವೆ.
(609) ದ್ರುವಿಯ ಅಣು ಅಯಾನಿಕ್ ಬಂಧದಂತೆಯೆ ಇದ್ದರು ಇಲ್ಲಿ ಪರಮಾಣು ಸ್ಥಿರ ವಿನ್ಯಾಸ ಪಡೆಯುವುದಿಲ್ಲ.
(610) ಅತ್ಯಂತ ದುರ್ಬಲ ಬಂಧ - ಹೈಡ್ರೋಜನ್ ಬಂಧ
(611) ದ್ರುವಿಯ ಅಣುಗಳಿಗೆ ಉದಾಹರಣೆ HO, NH₃, HF
(612) ಹೈಡ್ರೋಜನ್ ಬಂಧ ದ್ರುವಿಯ ಬಂಧದಂತೆ ಇರುತ್ತದೆ. ಆದರೆ ಈ ಬಂಧ ಕೇವಲ N.O.F ಗಳೊಂದಿಗೆ ಮಾತ್ರ
(613) ನೀರು ದ್ರುವಿಯ ಅಣು, ಹೈಡ್ರೋಜನ್ ಬಂಧವು ಹೌದು, ಸಹವೇಲೆನ್ಸಿಯ ಬಂಧವು ಹೌದು.
(614) ರಂಜಕದ ಪರಮಾಣು ಸಂಖ್ಯೆ- 15, ಪರಮಾಣು ರಾಶಿ - 31
(615) ಪಾಸ್ಪೇಟ್ ಶಿಲೆ ಅಥವಾ ಮೂಳೆ ಬೂದಿಯನ್ನು ಕಾಯಿಸಿ ರಂಜಕ ಪಡೆಯುತ್ತಾರೆ.
(616) ಬಿಳಿ ರಂಜಕ ಅತ್ಯಂತ ಕ್ರಿಯಾಶೀಲವಾದ ಧಾತು 30 ಸಿ ತಾಪದಲ್ಲಿ ಅಕ್ಸಿಜನ್‍ನೊಂದಿಗೆ ವರ್ತಿಸಿ ಬಿಳಿಧೂಮ ಉಂಟುಮಾಡುತ್ತದೆ.
(617) ಬಿಳಿ ರಂಜಕವನ್ನು ನೀರಿನಲ್ಲಿ ಸಂಗ್ರಹಿಸುತ್ತಾರೆ.
(618) ಬೆಂಕಿ ಕಡ್ಡಿಗಳ ತಯಾರಿಕೆಯಲ್ಲಿ ‘ ಕೆಂಪುರಂಜಕ’ ಉಪಯೋಗಿಸುತ್ತಾರೆ.
(619) ಬೆಂಕಿಕಡ್ಡಿಯು ಪೊಟ್ಯಾಸಿಯಂ ಕ್ಲೋರೈಡ್, ಮ್ಯಾಂಗನೀಸ್ ಡೈ ಆಕ್ಸೈಡ್, ಆಂಟಿಮೊನಿ ಸಲ್ಪೈಡ್ ಗಳ ಮಿಶ್ರಣವಾಗಿದೆ.
(620) ಗಂಧಕದ ದ್ರವನಬಿಂದು ಅತ್ಯಂತ ಕಡಿಮೆ ಇದ್ದು, ಪ್ರಾಶ್ಚ್ ವಿಧಾನದಿಂದ ಪಡೆಯುತ್ತಾರೆ.
(621) ಗಂಧಕವು ಜೀವಿಗಳ ದೇಹದಲ್ಲಿ ಪ್ರೋಟಿನ್ ರೂಪದಲ್ಲಿರುತ್ತದೆ.
(622) ಗಂಧಕವು ‘ಈರುಳ್ಳಿ, ಬೆಳ್ಳುಳ್ಳಿ, ಸಾಸಿವೆಯಲ್ಲಿ ಇರುತ್ತದೆ.
(623) ರಾಂಬಿಕ್ ಗಂಧಕ ಅಷ್ಟಮುಖಿ ಗಂಧಕವಾಗಿದೆ.
(624) ವಿದ್ಯುತ್‍ದ್ವಿಭಾಜನಿಯ ನಿಯಮಗಳ ಜನಕ - ಮೈಕಲ್ ಫ್ಯಾರಡೆ
(625) ಮಡ್ಡಿ ಮತ್ತು ಮಿಶ್ರಣಗಳ ನಡುವಿನ ಸ್ಥಿತಿಯೇ ಕಲಿಲ
(626) ಅತಿ ಚಿಕ್ಕ ಅಳತೆಯನ್ನು ಸೂಚಿಸುವ ಸಂಕೇತ ಡೆಲ್ಟಾ (Delta )
(627) ಟಿಂಡಾಲ್ ಪರಿಣಾಮವನ್ನು ಮೊದಲು ಗುರುತಿಸಿದವನು ಮೈಕಲ್ ಫ್ಯಾರಡೆ
(628) ಕೃತಕ ಮಳೆಯಲ್ಲಿ ಉಪ್ಪು ಮಿಶ್ರಿತ ವಿದ್ಯುತ್‍ಭಾಜ್ಯವನ್ನು ಉಪಯೋಗಿಸುತ್ತಾರೆ.


ಜೀವ ಶಾಸ್ತ್ರ (9ನೇ ತರಗತಿ)
(629) ಸ್ಪಂಜು ಪ್ರಾಣಿಗಳು ಫೋರಿಪೆರ ವಂಶಕ್ಕೆ ಸೇರಿದವು.
(630) ಸ್ಪಂಜು ಜಲವಾಸಿಯಾಗಿದ್ದು, ಇವುಗಳ ದೇಹದ ಮೇಲೆ ಅನೇಕ ರಂದ್ರಗಳಿದ್ದು ಇವುಗಳಿಗೆ ಆಸ್ಟಿಯಾ ಎಂದು ಕರೆಯುತ್ತಾರೆ.
(631) ಸ್ಪಿಕ್ಯೂಲ್‍ಗಳು ಸ್ಪಂಜು ಪ್ರಾಣಿಗಳಲ್ಲಿ ಅಂತರ್‍ಜಾಲಿಕ ವ್ಯವಸ್ಥೆಯನ್ನು ಉಂಟು ಮಾಡುತ್ತದೆ.
(632) ಸ್ಪಿಕ್ಯೂಲ್‍ಗಳು ಸಿಲಿಕಾನ್ ಅಥವಾ ಕ್ಯಾಲ್ಸಿಯಂ ಕಾರ್ಬೋನೇಟ್‍ನಿಂದ ಕೂಡಿರುತ್ತದೆ.
(633) ಸ್ಪಂಜು ಪ್ರಾಣಿಗಳಲ್ಲಿ ಲಿಂಗ ಮತ್ತು ನಿರ್ಲಿಂಗ ರೀತಿಯಲ್ಲಿ ಸಂತಾನೋತ್ಪತ್ತಿ ನಡೆಯುತ್ತದೆ.
(634) ‘ಯುಪ್ಲೆಕ್ಟೆಲ್ಲಾ’ ಎಂಬ ಸ್ಪಂಜು ಪ್ರಾಣಿಗೆ ‘ವೀನಸ್ ಹೂಬುಟ್ಟಿ’ ಎಂದು ಕರೆಯುತ್ತಾರೆ.
(635) ಸೈಕಾನ್, ಹಯಲೋನಿಮಾ, ಯುಸ್ಪಾಂಜಿಯಾ, ಯುಪ್ಲೆಕ್ಟೆಲ್ಲಾ ಇವು ಸ್ಪಂಜು ಪ್ರಾಣಿಗಳಿಗೆ ಉದಾಹರಣೆ
(636) ಶತ್ರುಗಳನ್ನು ಕೊಲ್ಲಲು, ಆಹಾರ ಪಡೆಯಲು ಕುಟುಕು ಕಣಗಳನ್ನು ಹೊಂದಿರುವಂತಹುಗಳಿಗೆ ಕುಟುಕು ಕಣವಂತಗಳು ಎಂದು ಕರೆಯುತ್ತಾರೆ.
(637) ಪೈಸೇಲಿಯವನ್ನು (ಕುಟುಕು ಕಣವಂತ) ಪೋರ್ಚುಗೀಸ್ ಸಮರನೌಕೆ ಎಂದು ಕರೆಯುತ್ತಾರೆ.
(638) ಕುಟುಕಿದಾಗ ವಿಷ ಸೇರಿಸುವ ಕಣವಂತ ಸಿವ್ಯಾಸ್ಟ್ ಎನ್ನುವ ಲೋಳೆಮೀನು.
(639) ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಲೋಳೆಮೀನು ‘ಸ್ಟಿಯಾಲಿಯಾ’
(640) ಚಪ್ಪಟೆಹುಳುಗಳು ದ್ವಿಲಿಂಗಿಗಳಾಗಿವೆ. ಚಪ್ಪಟೆ ಹುಳುಗಳಲ್ಲಿ ಕೆಲವು ಸ್ವವಲಂಬಿ ಕೆಲವು ಪರಾವಲಂಬಿಗಳಿವೆ.
(641) ಜಂತು ಹುಳು, ಕೊಕ್ಕೆಹುಳು ಇವು ಮಾನವನ ದೇಹದ ಸಣ್ಣಕರುಳಿನಲ್ಲಿ ಕಂಡುಬರುತ್ತದೆ.
(642) ಫೈಲೇರಿಯಾ- ಇವು ದುಗ್ಧರಸಗ್ರಂಥಿಗಳಲ್ಲಿ ಕಂಡುಬರುತ್ತದೆ.
(643) ಜಂತುಹುಳುವಿನಿಂದ ಅಜೀಣ್, ಬೇಧಿ ಉಂಟಾಗುತ್ತದೆ.
(644) ಕೊಕ್ಕೆಹುಳುವಿನಿಂದ ರಕ್ತಹೀನತೆ, ಉಂಟಾಗುತ್ತದೆ. ಏಕೆಂದರೆ ಇದು ರಕ್ತನಾಳಗಳನ್ನು ಘಾಸಿಗೊಳಿಸುತ್ತದೆ.
(645) ಫೈಲೇರಿಯಾ ಇದರಿಂದ ಆನೆಕಾಲು ರೋಗ ಬರುತ್ತದೆ.
(646) ಜಿಗಣೆಯ ಜೊಲ್ಲಿನಲ್ಲಿ ‘ಹೆಮೆಂಟಿನ್’ ಎಂಬ ಔಷಧಿ ಕಿಣ್ವವಿರುತ್ತದೆ.
(647) ಅಕಶೇರುಕ ವಂಶದಲ್ಲಿ ಅತ್ಯಂತ ದೊಡ್ಡ ವಂಶ - ಸಂದಿಪದಿಗಳು.
(648) ಸಂಧಿಪಡಿಗಳ ದೇಹದ ಮೇಲೆ ‘ಕೈಟಿನ್’ ಎಂಬ ವಸ್ತುವಿನಿಂದಾದ ಹೊದಿಕೆ ಇರುತ್ತದೆ.
(649) ಏಡಿ, ಸೀಗಡಿ, ಚೇಳು, ಜೇಡ, ಶತಪದಿ, ಸಹಸ್ರಪದಿ, ಇವು ಸಂಧಿಪದಿಗಳಿಗೆ ಉದಾಹರಣಗೆಗಳು.
(650) ಕಣಜ, ಇರುವೆ, ಕೊಡಲೆಕೀಟ, ಚಿಟ್ಟೆ, ಮಿಡತೆ, ಜಿರುಂಡೆ, ಇವು ಸಂದಿಪದಿಗಳು.
(651) ರಕ್ತವು ನಿರ್ದಿಷ್ಟ ನಾಳದಲ್ಲಿ ಹರಿಯದೆ ಹೇಹಾಂತರ ಅವಕಾಶದಲ್ಲಿ ಹರಿಯುವುದಕ್ಕೆ ‘ತೆರೆದ ರಕ್ತ ಪರಿಚಲನಾ ವ್ಯವಸ್ಥೆ ಎನ್ನುವರು.
(652) ರೇಷ್ಮೇಹುಳು, ಜೇನುನೊಣ, ಸೊಳ್ಳೆ, ನೊಣ ಇವು ಸಂಧಿಪದಿಗಳು
(653) ಮೃದುವಾದ ದೇಹ ಹೊಂದಿರುವಂತಹವೇ ಮೃದ್ವಂಗಿಗಳು.
(654) ಮೃದ್ವಂಗಿಗಳಲ್ಲಿ ಅತ್ಯಂತ ದೊಡ್ಡದು ಕಾಟ್ಲ ಮೀನು.
(655) ಮೃದ್ವಂಗಿಗಳು ‘ಟೀಸಿಡಿಯಾ’ ಎಂಗ ಅಂಗಗಳಿಂದ ಮತ್ತು ಮಾಂಟಿಲಿನಾ ಎಂಬ ಹೊರ ಚರ್ಮದಿಂದ ಉಸಿರಾಡುತ್ತದೆ.
(656) ಖೈಟಾನ್, ಬಸವನಹುಳು, ಕಪ್ಪೆಚಿಪ್ಪಿನ ಪ್ರಾಣಿಗಳು, ಡೆಂಟಾಲಿಯಂ, ಆಕ್ಟೋಪಾಸ್ ಸೆಪಿಯಾ ಇವು ಮೃದ್ವಂಗಿಗಳು.
(657) ಚರ್ಮದಲ್ಲಿ ಮುಳ್ಳುಗಳನ್ನು ಹೊಂದಿರುವಂತಹುಗಳಿಗೆ ಕಂಟಕ ಚರ್ಮಿಗಳು ಎಂದು ಕರೆಯುತ್ತಾರೆ.
(658) ಸಮುದ್ರಸೌತೆ, ಕಡಲಪೊರೆ, ನಕ್ಷತ್ರಮೀನು, ಪೆಡಸು ನಕ್ಷತ್ರ, ಕಡಲ ಲಿಲ್ಲಿ ಇವು ಕಂಟಕ ಚರ್ಮಿಗಳು.
(659) ‘ಪರ್ಲ್ ಆಯಿಸ್ಟಾರ್” ಎಂಬ ಮೃದ್ವಂಗಿಯಿಂದ ಮುತ್ತುಗಳು ಉಂಟಾಗುತ್ತದೆ.
(660) ವರ್ಣತಂತುಗಳು ಡಿಎನ್‍ಎ ಮತ್ತು ಪ್ರೋಟಿನ್ ಗಳಿಂದ ಮಾಡಲ್ಪಟ್ಟಿರುತ್ತವೆ.
(661) ಕೋಶಕೇಂದ್ರ ಅಥವಾ ನ್ಯೂಕ್ಲಿಯಸ್ ಅನ್ನು 1831 ರಲ್ಲಿ ರಾಬರ್ಟ್ ಬ್ರೌನ್.
(662) ಡಿಎನ್‍ಎ ಅಣು ರಚನೆಯ ಮಾದರಿಯನ್ನು ಜೆ.ಡಿ. ವಾಟ್‍ಸನ್ ಮತ್ತು ಎಫ್.ಹೆಚ್. ಕ್ರಿಕ್ ಕಂಡುಹಿಡಿದರು (ದ್ವಿಸುರುಳಿ ಮಾದರಿ)
(663) ಡಿ.ಎನ್.ಎ. ಗಳು ಸ್ಯೂಕ್ಲಿಯೋಟೈಡ್‍ಗಳಿಂದ ಮಾಡಲ್ಪಟ್ಟಿರುತ್ತದೆ.
(664) ನ್ಯೂಕ್ಲಿಯೋಟೈಡ್‍ಗಳು ಪೆಂಟೋಸ್ ಶರ್ಕರ, ಪಾಸ್ಪೇಟ್ ಗುಂಪು, ನೈಟ್ರೋಜನ್ ಕ್ಷಾರಗಳೆಂಬ 3 ಘಟಕಗಳಿಂದ ಮಾಡಲ್ಪಟ್ಟಿರುತ್ತದೆ.
(665) 4 ಬಗೆಯ ನೈಟ್ರೋಜನ್ ಕ್ಷಾರಗಳಿರುತ್ತವೆ:-ATGC -ಅಡಿನೈನ್ ಥೈಮೀನ್, ಗ್ವಾನಿನ್, ಮತ್ತು ಸೈಟೋಸಿನ್‍ಗಳಿಂದ ಮಾಡಲ್ಪಟ್ಟಿರುತ್ತದೆ.
(666) ಆರ್.ಎನ್.ಎ ಇದು ಕೋಶಕೇಂದ್ರದಲ್ಲಿ ಕಂಡುಬರುತ್ತದೆ.
(667) ಆರ್.ಎನ್.ಎ ಮತ್ತು ಡಿ.ಎನ್.ಎ. ಗಳಿಗೆ ಇರುವ ವ್ಯತ್ಯಾಸವೇನೆಂದರೆ, ನೈಟ್ರೋಜನ್ ಕ್ಷಾರಗಳಲ್ಲಿ ಥೈಮೀನ್ ಬದಲಾಗಿ ಯುರಾಸಿಲ್ ಇರುತ್ತದೆ.
(668) ಆರ್.ಎನ್.ಎ.ಯ ಪ್ರಮುಖ ಕಾರ್ಯ - ಪ್ರೋಟೀನ್ ಸಂಶ್ಲೇಷಣೆ.
(669) ಡಿ.ಎನ್.ಎ ವಿಭಜನೆಯಾಗಿ ಎರಡು ಮರಿಕೋಶಗಳಾಗುವುದಕ್ಕೆ ಡಿ.ಎನ್.ಎ ಸ್ವಪ್ರತಿಕರಣ ಎನ್ನುವರು.
(670) ಜೀವ ಪ್ರಭೇದ ನಿರ್ದಿಷ್ಟ ರೀತಿಯಲ್ಲಿ ಮುಂದುವರಿಯಲು ಕಾರಣ-ಡಿ.ಎನ್.ಎ
(671) ‘ಮೈಟಾಸಿಸ್’ ಜೀವಿಗಳಲ್ಲಿ ನಡೆಯುವ ಕ್ರಿಯೆ.
(672) “ಮಿಯಾಸಿಸ್” ಬಹುಕೋಶೀಯ ಜೀವಿಗಳಲ್ಲಿ ಪ್ರಜನನಗಳಲ್ಲಿ ನಡೆಯುವ ಕ್ರಿಯೆ.
(673) ಕೋಶವಿಭಜನೆಯನ್ನು ಕ್ಯಾರಿಯೋಕೈನೆಸೀಸ್ ಎನ್ನುವರು.
(674) ಕೋಶ ರಸ ವಿಭಜನೆಯನ್ನು -ಸೈಟೋಕೈನೇಸಿಸ್ ಎನ್ನುವರು.
(675) ಕೋಶವಿಭಜನೆಯು 4 ವಿಧಗಳಲ್ಲಿ ನಡೆಯುತ್ತದೆ. ಅವುಗಳೆಂದರೆ 1) ಫ್ರೋಫೇಸ್ 2)ಮೆಟಾಫೇಸ್ 3)ಅನಫೇಸ್ 4) ಟಿಲೊಫೇಸ್
(676) ಮೀಯಾಸಿಸ್ ಅನ್ನು ಸಂಖ್ಯಾಕ್ಷೀಣ ವಿಭಜನೆ ಎನ್ನುವರು.
(677) ಒಂದು ಪ್ರಭೇದದ ಜೀವಿಗಳಲ್ಲಿ ವರ್ಣತಂತುಗಳ ಸಂಖ್ಯೆಯು ನಿರ್ದಿಷ್ಟವಾಗಿ ಮುಂದುವರಿಯುವುದು - ಮಿಯಾಸೀಸ್ ನಿಂದ
(678) ಮೈಟಾಸಿಸ್ ದೇಹದ ಎಲ್ಲಾ ಕಾಯಕೋಶಗಳಲ್ಲಿ ಹಾಗು ಪ್ರಜನನ ಕೋಶಗಳಲ್ಲಿ ನಡೆಯುವ ಕ್ರಿಯೆ.
(679) ದ್ವಿಗುಣಿತವಾಗುವುದಕ್ಕೆ ಡಿಪ್ಲಾಯಿಡ್, ಏಕಗುಣಿತವಾಗುವುದಕ್ಕೆ - ಹೆಪ್ಲಾಯಿಡ್ ಎನ್ನುವರು (ವರ್ಣತಂತುಗಳಿಗೆ ಸಂಬಂಧಿಸಿದಂತೆ)
(680) ಸೂಕ್ಷ್ಮಾಣು ಜೀವಿಗಳನ್ನು ಮೊದಲು 1668 ರಲ್ಲಿ ಲೆವಾನ್‍ಹಾರ್ ಕಂಡುಹಿಡಿದ.
(681) ಗಾಯಗಳಿಗೆ HCl ಬಳಸಿದವನು ಜೋಸೆಫ್ ಲೀಸ್ಟರ್
(682) Pathology-  ರೋಗ ವಿಜ್ಞಾನ
(683) Microbiology-  ಸೂಕ್ಷ್ಮಾಣು ಜೀವ ವಿಜ್ಞಾನ
(684) Immunology -  ಸೋಂಕು ರಕ್ಷಾ ವಿಜ್ಞಾನ
(685) Histo Pathology -  ಅಂಗಾಂಗ ರೋಗ ವಿಜ್ಞಾನ
(686) Chemical Pathology -  ರಸಾಯನ ರೋಗ ವಿಜ್ಞಾನ
(687) ವೈರಸ್‍ಗಳಿಂದ ಬರುವ ರೋಗಗಳು - ನೆಗಡಿ, ಸಿಡುಬು, ಡಿಫ್ತೀರಿಯಾ, ಏಡ್ಸ್, ಸಾರ್ಸ್, ಪೋಲಿಯೋ, ದಡಾರ, ಮಂಗನಬಾಹು, ಮಿದುಳುಜ್ವರ, ಇನ್‍ಫ್ಲೂಯೆಂಜಾ, ಕಾಮಲೆ.
(688) ಬ್ಯಾಕ್ಟೀರಿಯಾಗಳಿಂದ ಬರುವ ರೋಗಗಳು ಅಂಥ್ರಾಕ್ಸ್, ಮಿಷಮಶೀತಜ್ವರ, ಕ್ಷಯ, ಕಾಲರಾ ನ್ಯೂಮೋನಿಯಾ, ಧನುರ್ವಾಯು, ಸಿಫಿಲಿಸ್, ಗೋನಿರಿಯಾ.
(689) ಶೈವಲಗಳಿಗೆ ಉದಾಹರಣೆ:
(690) ಕೆಂಪು ಶೈವಲ - ರೋಡೋಫಿಲ್, ಹಳದಿ-ಹಸಿರು ಶೈಲವ ಕ್ಸಾಂತೋಫೀಲ್
(691) ಹಸಿರು ಶೈವಲ - ಕ್ಲೋರೋಫೀಲ್ ಕಂದು ಶೈವಲ - ಫಿಯೋಫಿಲ್
(692) ಯೀಸ್ಟ್ ಏಕಕೋಶಿಯ ಶಿಲಿಂದ್ರ, ಬೂಸ್ಟ್ ಮತ್ತು ಅಣಬೆ - ಬಹುಕೋಶಿಯಾ ಶಿಲಿಂಧ್ರ.
(693) ಯೀಸ್ಟ್ ಆಮ್ಲಜನಕ ರಹಿತ ಮತ್ತು ಆಮ್ಲ ಜನಕ ಸಹಿತ ಉಸಿರಾಡುತ್ತೆ.
(694) ಗಾಳಿಯ ಮೂಲಕ ಹರಡುವ ರೋಗಗಳು - ಪ್ಲೂ, ನೆಗಡಿ, ಕೆಮ್ಮು, (ವೈರಸ್‍ನಿಂದ) ಕ್ಷಯ
(695) ಪೆನ್ಸಿಲಿಯಂ ನೊಟೇಟಂ :ಇದರಿಂದ ಪೆನ್ಸಿಲೀನ್ ತಯಾರಿಸುತ್ತಾರೆ. (ಕಂಡುಹಿಡಿದವರು 1928 ರಲ್ಲಿ ಅಲೆಕ್ಸಾಂಡರ್ ಫ್ಲೆಮಿಂಗ್)
(696) ಕಂದು ಬಣ್ಣದ ಶೈವಲಗಳು ಸಮುದ್ರದ ದಡದಲ್ಲಿ 60 ಮೀಟರ್ ವರೆಗೂ ಹಬ್ಬಿರುವುದಕ್ಕೆ ‘ಕೆಲ್ಪ್’ಎನ್ನುವರು.
(697) ನೀರಿನ ಮೂಲಕ ಹರಡುವ ಕಾಯಿಲೆಗಳು :- ಕಾಲರಾ, ವಿಷಮಶೀತಜ್ವರ, ಆಮಶಂಕೆ.
(698) ಪ್ರಾಣಿಗಳಿಂದ ಹರಡುವ ರೋಗಗಳು :- ಕ್ಷಯ - ಹಸುವಿನಿಂದ, ರೇಬಿಸ್ - ನಾಯಿ, ಬೆಕ್ಕುಗಳಿಂದ, ಮೆದುಳುಜ್ವರ - ಹಂದಿಯಿಂದ
(699) ಕೀಟಗಳ ಮೂಲಕ ಹರಡುವ ರೋಗಗಳು:- ಸೊಳ್ಳೆ - ಮಲೇರಿಯ, ನೊಣ ಕಾಲರಾ, ಚಿಗಟ- ಫ್ಲೇಗ್
(700) ಮಣ್ಣಿನಲ್ಲಿರುವ ಬ್ಯಾಕ್ಟೀರಿಯ ಧನುರ್ವಾಯು
(701) “ಕ್ಲಾಸ್ಟ್ರೀಡಿಯಂ ಟಟನಿ” ಎಂಬ ಬ್ಯಾಕ್ಟೀರಿಯಾದಿಂದ ಧನುರ್ವಾಯು ಬರುತ್ತದೆ.
(702) ಕ್ಷಯ (ಟಿ.ಬಿ) - ಮೈಕ್ರೋಬ್ಯಾಕ್ಟೀರಿಯಂ ಟ್ಯುಬಕ್ರ್ಯೂಲೋಸಿಸ್ ಅಥವಾ ಟುಬರ್ ಕುಲಸ್ ಬ್ಯಾಸಿಲಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತೆ.
(703) ಕಾಲರಾ - ವಿಬ್ಸಿಯೋ ಕಾಲರೇ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.
(704) ಓಆರ್‍ಎಸ್ ಇದು ಜೀವ ಜಲವಾಗಿದೆ.
(705) ಟೈಪಾಯಿಡ್ - ನೀರಿನ ಮೂಲಕ ಸಾಲ್ಮೋನೆಲ್ಲಾ ಟೈಫಿ’ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.
(706) ಕುಷ್ಟರೋಗ (ಲೆಪ್ರಸಿ) - ಮೈಕೋಬ್ಯಾಕ್ಟೀರಿಯಂ ‘ಲೆಪ್ರೆ’ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.
(707) ಕುಷ್ಟರೋಗವನ್ನು “ಹ್ಯಾನ್‍ಸನ್ ರೋಗ” ಎಂದು ಕರೆಯುತ್ತಾರೆ.
(708) ಫ್ಲೇಗ್- ಮೊದಲು ಇಲಿಗೆ ಬರುತ್ತೆ. ಇಲಿಗಳ ದೇಹವನ್ನು ಕಚ್ಚಿದ ಚಿಗಟ, ನಂತರ ಮನುಷ್ಯನನ್ನು ಕಚ್ಚಿ ಪ್ಲೇಗ್ ಹರಡುತ್ತೆ.
(709) ಆಂಥ್ರಾಕ್ಸ್ (ನೆರಡಿ ರೋಗ) - ಬೆಸಿಲಸ್ ಆಂಥ್ರಾಕ್ಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ.
(710) ರೇಬಿಸ್ - ವೈರಸ್‍ನಿಂದ ಹರಡುವ ರೋಗಗಳು. ಇದು ‘ಕ್ಯಾಬ್ಡೊವಿರಿಡೆ’ ಎಂಬ ವೈರಸ್‍ನಿಂದ ಬರುತ್ತೆ.
(711) ಪೋಲಿಯೋ- ಪೋಲಿಯೋ ವೈರಸ್‍ನಿಂದ ಬರುತ್ತದೆ. ಮಲ, ಹೊಲಸು, ನೀರು ಇವುಗಳಿಂದ ಸೊಳ್ಳೆ ನೊಣಗಳು ರೋಗವಾಹಕಗಳಾಗಿದ್ದು, ಪೋಲಿಯೋ ವೈರಸ್‍ಗಳು ಬಾಯಿಯ ಮೂಲಕ ಪ್ರವೇಶಿಸಿ ದೇಹದ ಭಾಗವನ್ನು ನಿಸ್ಸತ್ವಗೊಳಿಸುತ್ತದೆ.
(712) ಶಿಲೀಂಧ್ರಗಳಿಂದ ಬರುವ ರೋಗಗಳು :- ಬೆಂಕಿ ರೋಗ - ಭತ್ತ, ರಾಗಿಗೆ ಬರುತ್ತೆ. ಫೀತ್ ಬ್ಲೈಟ್- ಭತ್ತದ ಬೆಳೆಗೆ, ಉಗುರು ಚುಕ್ಕೆ ರೋಗ ಕಬ್ಬು.
(713) ಕೆಂಪು ಶೈವಲ - ಇವುಗಳನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ.
(714) ರೈಜೋಬಿಯಂ ಬ್ಯಾಕ್ಟೀರಿಯಾ- ವಾತಾವರಣದಲ್ಲಿರುವ ನೈಟ್ರೋಜನ್ ಅನ್ನು ನೈಟ್ರಸ್ ಆಗಿ ಪರಿವರ್ತಿಸುತ್ತೆ.
(715) ಜೈವಿಕ ವಿಘಟನೆಯಲ್ಲಿ ಸೂಕ್ಷ್ಮಾಣು ಜೀವಿಗಳು ಪ್ರೋಟಿನ್‍ನನ್ನು ಅಮೋನಿಯಾವನ್ನಾಗಿ ಪರಿವರ್ತಿಸುತ್ತವೆ.
(716) ದಿ-ನೈಟ್ರಿಕಾರಿಕ ಬ್ಯಾಕ್ಟೀರಿಯಾಗಳು ಸಸ್ಯ-ಪ್ರಾಣಿಗಳ ಅವಶೇಷಗಳಿಂದ ನೈಟ್ರೋಜನ್ ಅನ್ನು ವಾತಾವರಣಕ್ಕೆ ಬಿಡುಗಡೆಗೊಳಿಸುತ್ತದೆ.
(717) ಯೀಸ್ಟ್ ಬ್ಯಾಕ್ಟೀರಿಯಾಗಿಳಿಂದ ಮದ್ಯಸಾರವನ್ನು ತಯಾರಿಸುತ್ತಾರೆ.
(718) ಜೀವಕೋಶ ಶಾಸ್ತ್ರಕ್ಕೆ ನಾಂದಿ ಹಾಡಿದವರು - ಲೆವನ್ ಹಾಕ್
(719) ಜೀವಶಾಸ್ತ್ರದ ಪಿತಾಮಹಾ ಅರಿಸ್ಟಾಟಲ್
(720) ಸೂಕ್ಷ್ಮಾಣು ಜೀವಿಗಳನ್ನು 5 ಭಾಗಗಳಾಗಿ ವಿಂಗಡಿಸುತ್ತಾರೆ.
(721) ಡಯಾಟಂಗಳ ಕೋಶಭಿತ್ತಿ ‘ಸಿಲಿಕಾದಿಂದ’ ತಯಾರಿಸುತ್ತಾರೆ.
(722) ಕಾಲರಾ ರೋಗವು ನೀರಿನಿಂದ ಮತ್ತು ನೊಣದಿಂದ ಬರುತ್ತದೆ.
(723) ಪ್ಯಾರಮೀಸಿಯಂ - ಲೋಮಾಂಗದ ಮೂಲಕ ಉಸಿರಾಡುತ್ತದೆ.
(724) ಸಮುದ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೈವಲಗಳು ಕಂಡುಬಂದರೆ ಅದನ್ನು ‘ಸಮುದ್ರಕಳೆ’ಎನ್ನುವರು.
(725) ಪೋಲಿಯೋ ರೋಗಾಣುಗಳು ದೇಹದ ಮೆದಳು ಮತ್ತು ಬೆನ್ನುಹುರಿ ಕೋಶವನ್ನು ಅಕ್ರಮಿಸುತ್ತದೆ.
(726) ಕೆಳವರ್ಗದ ಸಸ್ಯಗಳಲ್ಲಿ ನೀರು ವಿಸರಣೆಯ ಮೂಲಕ ಸಾಗಿಸಲ್ಪಡುತ್ತವೆ.
(727) ‘ಪ್ಲೋಯಂ ‘ ಅಂಗಾಂಶವು ಆಹಾರವನ್ನು ಕಾಂಡಕ್ಕೆ ತಲುಪಿಸಿ ಅಲ್ಲಿಂದ ಸಸ್ಯದ ಭಾಗಗಳಿಗೆ ಸಾಗಿಸಲ್ಪಡುತ್ತದೆ.
(728) ರಕ್ತ ಒಂದು ಸಂಯೋಜಕ ಅಂಗಾಂಶವಾಗಿದೆ.
(729) “ಅಸ್ಥಿಮಜ್ಜೆಯಲ್ಲಿ” (ಗುಲ್ಮ) ರಕ್ತವು 1 ಸೆಕೆಂಡಿಗೆ 2 ಮಿಲಿಯನ್ ಕಣಗಳಷ್ಟು ಉತ್ಪತ್ತಿಯಾಗುತ್ತದೆ. ಅದರ ಆಯುಷ್ಯ 120 ದಿನಗಳು.
(730) ರಕ್ತ ದೇಹದ ತೂಕದ ಶೇ. 8 ರಷ್ಟು ಇರುತ್ತದೆ. ರಕ್ತವು ಪ್ಲಾಸ್ಮಾ ಎಂಬ ದ್ರವರೂಪದ ಮಾತೃಕೆಯಿಂದ ಆವೃತ್ತವಾಗಿದೆ.
(731) ಪ್ಲಾಸ್ಮಾದಲ್ಲಿ ಫೈಬ್ರಿನೋಜಿನ್ ಮತ್ತು ಪ್ರೋಡ್ರಾಂಬಿನ್ ಎಂಬ ಪ್ರೋಟೀನ್‍ಗಳು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
(732) ರಕ್ತದಲ್ಲಿ ‘ಪ್ಲಾಸ್ಮಾ’ ಅತಿ ಹೆಚ್ಚಿನ ಭಾಗವನ್ನು ಮತ್ತು ಬಿಳಿ ರಕ್ತ ಕಣಗಳು ಕಡಿಮೆ ಭಾಗವನ್ನು ಆವರಿಸಿದೆ.
(733) ಹಿಮೋಗ್ಲೋಬಿನ್ ಉಸಿರಾಟದ ಅನಿಲಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುತ್ತದೆ.
(734) ‘ಕಿರುತಟ್ಟೆ’ಗಳು ರಕ್ತ ಹೆಪ್ಪುಗಟ್ಟಲು ಸಹಾಯಕವಾಗಿದೆ.
(735) ಹೃದಯ ಬಡಿತದಿಂದ ಉಂಟಾಗುವ ವಿದ್ಯುತ್ ತರಂಗಗಳನ್ನು ‘ಇ.ಸಿ.ಜಿ’ ಯಿಂದ ಅಳೆಯುತ್ತಾರೆ.
(736) ಇ.ಸಿ.ಜಿ ಯನ್ನು 1906 ರಲ್ಲಿ “ಐಸ್ತೋವನಿ” ಎಂಬುವನು ಕಂಡುಹಿಡಿದನು.
(737) ಹೃದಯಕ್ಕೆ ಆಮ್ಲಜನಕ ಸಹಿತ ರಕ್ತ ಕರೋನರಿ ಅಪಧಮನಿಯಿಂದ ಬರುತ್ತದೆ.
(738) ಪೆರಿಕಾರ್ಡಿಯಲ್ ದ್ರವ- ಇದು ಹೃದಯವನ್ನು ಯಾಂತ್ರಿಕ ಆಘಾತಗಳಿಂದ ಮತ್ತು ಘರ್ಷಣೆಗಳಿಂದ ರಕ್ಷಿಸುತ್ತದೆ.
(739) ಮೂತ್ರಜನಕಾಂಗದ ರಚನಾತ್ಮಕ ಮತ್ತು ಕಾರ್ಯಾತ್ಮಕ ಘಟಕ - ನೆಫ್ರಾನ್
(740) ಕಾರ್ಟೆಕ್ಸ್, ಮೆಡುಲ್ಲಾ ಪಲ್ಟಿಕ್ಸ್, ರೀನಲ್ ಅಪಧಮನಿ ಇವು ಮೂತ್ರಜನಕಾಂಗದ ಭಾಗಗಳಾಗಿವೆ.
(741) ಮೂತ್ರಜನಕಾಂಗದಲ್ಲಿ ರಕ್ತ ಸೋಸಲ್ಪಡುವ ಭಾಗ- ‘ ಗ್ಲಾಮರುಲಸ್’
(742) ಕಾರ್ಬೋಹೈಡ್ರೇಟ್ ಹಾಗು ಲಿಪಿಡ್‍ಗಳು ಶಕ್ತಿ ಉತ್ಪಾದಕಗಳಾಗಿವೆ.
(743) ಪ್ರೋಟಿನ್, ಖನಿಜಗಳು, ಮತ್ತು ನೀರು ಇವು ದೇಹ ನಿರ್ಮಾಣ ಮತ್ತು ದುರಸ್ಥಿಕರಣಕ್ಕೆ ಸಹಾಯಕವಾಗಿವೆ.
(744) ಜೀವಸತ್ವ ಮತ್ತು ಖನಿಜಗಳು ಜೈವಿಕ ಚಟುವಟಿಕೆಗಳನ್ನು ಸುಸಂಟಿತವಾಗಿ ನಿಯಂತ್ರಿಸುತ್ತದೆ.
(745) ಸಂತೃಪ್ತ ಕೊಬ್ಬಿನ ಆಮ್ಲಗಳು ಏಕಬಂಧದಿಂದ ಕೂಡಿರುತ್ತದೆ.
(746) ಕೊಲೆಸ್ಟ್ರಾಲ್ ಇದು ಮಾನವನ ದೇಹದಲ್ಲಿ ‘ಡಿ’ ಜೀವಸತ್ವವನ್ನು ಉತ್ಪಾದಿಸುತ್ತದೆ.
(747) ಪ್ರೋಟಿನ್‍ಗಳನ್ನು ಪಾಲಿಪೆಪ್ಪೈಡ್‍ಗಳೆಂದು ಕರೆಯುತ್ತಾರೆ.
(748) ಕ್ವಾಷಿಯೋರ್‍ಕರ್ ಮತ್ತು ಮರಸ್ಮಾಸ್ ಇವು ಪ್ರೋಟಿನ್ ಕೊರತೆಯಿಂದ ಬರುವ ಕಾಯಿಲೆಗಳು.
(749) ಕೊಬ್ಬಿನಲ್ಲಿ ಕರಗುವ ಜೀವಸತ್ವಗಳು ಜೀವಸತ್ವ ಎ.ಡಿ.ಕೆ. ಮತ್ತು ಇ
(750) ನೀರಿನಲ್ಲಿ ಕರಗುವ ಜೀವಸತ್ವಗಳು ಜೀವಸತ್ವ B₁, B₂, B₅, B₁₂, C  & ಪೋಲಿಕ್ ಆಮ್ಲ.
(751) ಪ್ರೋಟಿನ್ ಕೊರತೆಯಿಂದ ಬರುವ ಕಾಯಿಲೆಗಳು
(752) ಎ - ಕುಂಠಿತ ಬೆಳವಳಿಗೆ, ಕ್ಸೀರಾಪ್ಥಾಲ್ನಿಯಾ
(753) ಡಿ - ರಿಕೇಟ್ಸ್, ವಯಸ್ಕರಲ್ಲಿ ಮಲಾಸಿಯಾ
(754) ಇ - ಬಂಜೆತನ
(755) ಕೆ - ಅಧಿಕ ರಕ್ತಸ್ರಾವ
(756) ಬಿ1 - ಬೆರಿ ಬೆರಿ
(757) ಬಿ2 - ಫೋಟೋಪೋಬಿಯಾ
(758) ಬಿ3 - ಪೆಲಾಸ್ರ, ಅತಿಸಾರ ಭೇದಿ
(759) ಬಿ6 - ಡರ್ಮಟೈಟಿಸ್
(760) ಬಿ12 - ರಕ್ತಹೀನತೆ
(761) ಹಿಮೋಗ್ಲೋಬಿನಲ್ಲಿರುವ ಕಬ್ಬಿಣ ಆಕ್ಸಿಜನ್ ವಾಹಕವಾಗಿದೆ
(762) ಥೈರಾಕ್ಸಿನ್ ಹಾರ್ಮೋನ್ ಉತ್ಪತ್ತಿ ಮಾಡಲು ಅಯೋಡಿನ್ ಅವಶ್ಯಕ.
(763) ಸೋಡಿಯಂ,ಪೊಟ್ಯಾಷಿಯಂ, ಆಮ್ಲ ಮತ್ತು ಪ್ರತ್ಯಾಮ್ಲಗಳ ನಡುವೆ ಸಂತುಲತೆಯನ್ನು ಕಾಪಾಡಿಕೊಳ್ಳುತ್ತದೆ.
(764) 120 ಸಿ ಗಿಂತ ಕಡಿಮೆ ಉಷ್ಣಾಂಶದಲ್ಲಿ ಸೂಕ್ಷ್ಮ ಜೀವಿಗಳ ಚಟುವಟಿಕೆ ಕಡಿಮೆ ಇರುತ್ತದೆ.
(765) ಆಹಾರದಲ್ಲಿರುವ ನೀರಿನಂಶ ಕಡಿಮೆ ಮಾಡಿ ಆಹಾರ ಸಂರಕ್ಷಿಸುವ ವಿಧಾನ - ನಿರ್ಜಲೀಕರಣ
(766) ಆಹಾರವನ್ನು ವಿಕರಣಶೀಲತೆಯಿಂದ ರಕ್ಷಿಸುವುದು ಅಪಾಯಕಾರಿ, ಕಾರಣ ಅಯಾನಿಕ್ ವಿಕೀರಣಗಳ ಭಯ.
(767) ಭೂಮಿಯನ್ನು 4 ಗೋಳಗಳಾಗಿ ವಿಂಗಡಿಸಲಾಗಿದೆ 1. ಶಿಲಾಗೋಳ 2. ವಾಯುಗೋಳ 3. ಜಲಗೋಳ 4. ಜೀವಗೋಳ
(768) ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಹೊಂದಿರುವ ಬೃಹತ್ ಪರಿಸರ ವ್ಯವಸ್ಥೆಗೆ ಬಯೋಮ್ ಎನ್ನುವರು.
(769) ಎರಡು ವಿಧಧ ಬಯೋಮ್‍ಗಳು ಇವೆ ಅವು 1. ಭೂ 2. ಜಲ ಬಯೋಮ್
(770) ಮಣ್ಣಿನ ಕೆಳಭಾಗದ ಶಿತಲವಾದ, ಘನೀಕೃತ ಪದರಕ್ಕೆ ‘ಪರ್ಮಾಪ್ರಾಸ್ಟ್’ ಎನ್ನುವರು.
(771) ಜಲ ಬಯೋಮ್‍ನಲ್ಲಿ ಜೀವಿಗಳನ್ನು 3 ಗುಂಪುಗಳಾಗಿ ವಿಂಗಡಿಸಬಹುದು. ಅವು
(772) ಪ್ಲವಕ- ಜಡವಾಗಿ ತೇಲುತ್ತಿರುವ ಸೂಕ್ಷ್ಮ ಗಾತ್ರದ ಜೀವಿಗಳು (ಉತ್ಪಾದಕ ಜೀವಿಗಳು)
(773) ನೆಕ್ಜಾನ್ - ನೀರಿನಲ್ಲಿ ಈಜಾಡುವ ಚಟುವಟಿಕೆಯುಳ್ಳ ಜೀವಿಗಳು.
(774) ಬೆಂಧಾಸ್ ತಳಭಾಗದಲ್ಲಿ ತೆವಳುತ್ತಾ ಚಲಿಸುವ ಜೀವಿಗಳು
(775) ದ್ಯುತಿವಲಯ - ಸಮುದ್ರದಲ್ಲಿ ಸೂರ್ಯನ ಬೆಳಕು ಪ್ರವೇಶಿಸುವವರೆಗೆ, ಅಬಿಸ್ ಸೂರ್ಯನ ಬೆಳಕು ಪ್ರವೇಶಿಸಲಾರದ ನೀರಿನ ಭಾಗ.
(776) ಭೂಪರಿಸರ ವ್ಯವಸ್ಥೆಗೆ ಉದಾಹರಣೆಗಳು:- ಪಾಚಿಬಯಲು, ಹುಲ್ಲುಗಾವಲು, ಮರುಭೂಮಿ ಕಾಡು, ಜೌಗು ಪ್ರದೇಶ, ಟಾಂಡ್ರಾ.
(777) ಕೃತಕ ಪರಿಸರ ವ್ಯವಸ್ಥೆಗೆ ಉದಾಹರಣೆಗಳು:- ಉದ್ಯಾನವನ, ಹೂತೋಟ, ಮತ್ಸ್ಯಾಲಯ, ಹೊಲಗದ್ದೆ, ಗಗನಯಾತ್ರಿಗಳನ್ನು ಹೊಂದಿರುವ ಆಕಾಶ ನೌಕೆ.
(778) ಮಾಂಸಹಾರಿ ಜೀವಿಗಳು ದ್ವಿತಿಯ ಭಕ್ಷಕ ವರ್ಗಕ್ಕೆ ಸೇರುತ್ತವೆ.
(779) ಪೊಷಣ ಸ್ತರಗಳಲ್ಲಿ ಮಾಲಿನ್ಯಕಾರಕ ಘಟಕಗಳು ಸೇರುತ್ತಾ ಹೋಗುವುದಕ್ಕೆ ಜೈವಿಕ ಸಾಂದ್ರತೆ ವೃದ್ದಿ ಎನ್ನುವರು.
(780) ಕೇಸರಗಳನ್ನು ತೆಗೆದುಹಾಕುವ ಕ್ರಿಯೆಗೆ ಕಾಸ್ಪ್ರೇಷನ್ ಎನ್ನುವರು.
(781) ಜೀನ್ಸ್ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದವನು ಜೋಹಾನ್‍ಸನ್
(782) F ಪೀಳಿಗೆಗೆ ಬೇಕರ್‍ಬೋರ್ಡ್ ವಿಧಾನವನ್ನು ಬಳಸಿದವನು - ಪುನೆಟ್
(783) The Decent Man  ಪುಸ್ತಕವನ್ನು ಬರೆದವರು ಚಾಲ್ರ್ಸ್ ಡಾರ್ವಿನ್
(784) ಮಾನವ ವಿಕಾಸದ ಮೊದಲ ಪ್ರಭೇದ “ ಡ್ರಯೋಫಿಥಿಕಸ್”
(785) ಆಧುನಿಕ ಮಾನವ ವಿಕಾಸದ ಪ್ರಭೇದ ಕ್ರೋಮಾಗ್ನಿನ್
(786) ಸಂಸ್ಕøತಿ ವಿಕಾಸ, ಬೆಂಕಿಕಡ್ಡಿ ಉಪಯೋಗ ಪಡೆದ ಮಾನವ ವಿಕಾಸದ ಪ್ರಭೇದ “ಹೊಮೋ ಎರೆಕ್ಟಾಸ್”

10ನೇ ತರಗತಿ ಭೌತಶಾಸ್ತ್ರ
(787) ಕಾಂತಕ್ಷೇತ್ರವು ಬದಲಾದಾಗ ವಿದ್ಯುತ್ ಚಾಲಕ ಬಲವು ಮಂಡಲದಲ್ಲಿ ಪ್ರೇರಿತವಾಗುತ್ತದೆ. ಇದನ್ನು ವಿದ್ಯುತ್ಕಾಂತಿಯ ಪ್ರೇರಣೆ ಎನ್ನುವರು.
(788) ಪ್ಯಾರಡೆ ಮತ್ತು ಫ್ಲೆಮಿಂಗ್‍ನ ನಿಯಮಗಳೂ ವಿದ್ಯುತ್ಕಾಂತಿಯ ಪ್ರೇರಣೆಯನ್ನು ಕುರಿತು ಹೇಳುತ್ತವೆ.
(789) ವಿದ್ಯುತ್ ಕಾಂತೀಯ ಪ್ರೇರಣೆ ತತ್ವದ ಆಧಾರದ ಮೇಲೆ ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪಡೆಯುವ ಸಾಧನವೇ ಡೈನಮೋ.
(790) ಫ್ಲಮಿಂಗನ ಎಡಗೈ ನಿಯಮ ಮೋಟಾರ್ ಚಾಲನೆಯನ್ನು ಕುರಿತು ಹೇಳುತ್ತದೆ.
(791) α- ಕಿರಣ, ß ಕಿರಣ ಬೆಳಕಿನ ವೇಗಕ್ಕಿಂತ ಕಡಿಮೆ ವೇಗವನ್ನು ಹೊಂದಿವೆ ಕಾರಣ ವಿಕೀರಣಗಳಿಂದಾಗಿದೆ.
(792) ತರಂಗ ಪ್ರಸರಣದ ದಿಕ್ಕು ವಿದ್ಯುತ್ ಮತ್ತು ಕಾಂತಕ್ಷೇತ್ರಕ್ಕೆ ಉಂಬವಾಗಿರುತ್ತದೆ. ಇದರಿಂದ ವಿದ್ಯುತ್ ಕಾಂತೀಯ ತರಂಗ ಅಡ್ಡತರಂಗವಾಗಿದೆ.
(793) ವಿದ್ಯುತ್ ಕಾಂತಿಯ ತರಂಗಗಳು ಬೆಳಕಿನ ವೇಗದಷ್ಟೇ ಚಲಿಸುತ್ತವೆ.
(794) ವಿದ್ಯುತ್ ಕಾಂತಿಯ ತರಂಗಗಳು ಶೂನ್ಯ ಮಾತ್ರ. ಪರಿಪೂರ್ಣ ಪಾರದರ್ಶಕ ಮಾದ್ಯಮ ಉಳಿದೆಲ್ಲ ಮಾದ್ಯಮಗಳು ಶಕ್ತಿಯನ್ನು ಹೀರಿಕೊಳ್ಳುತ್ತವೆ.
(795) ಅವಕೆಂಪು ಕಿರಣಗಳನ್ನು (Infra red) 1800 ರಲ್ಲಿ ಹರ್ಷಲ್ ಕಂಡುಹಿಡಿದನು.
(796) ಅವಕೆಂಪು ಕಿರಣಗಳು, ನೇರಳಾತೀತ ಕಿರಣಗಳು X- ವಿಕೀರಣಗಳು, y -ವಿಕೀರಣಗಳು, ರೇಡಿಯೋ ತರಂಗಗಳು ಇವು ವಿದ್ಯುತ್ ಕಾಂತಿಯ ಕಿರಣಗಳಾಗಿವೆ.
(797) ನೇರಳಾತೀತ ಕಿರಣಗಳನ್ನು 1801 ರಲ್ಲಿ ಜೆ.ಡಬ್ಲ್ಯೂ. ರಿಟ್ಟರ್ ಎಂಬುವರು ಕಂಡುಹಿಡಿದನು.
(798) x- ವಿಕೀರಣಗಳನ್ನು 1895 ರಲ್ಲಿ ಜರ್ಮನ್ ವಿಜ್ಞಾನಿ ವಿಲಿಯಂ ರಾಂಟ್ಜೆನ್ ಕಂಡುಹಿಡಿದನು. ಇದನ್ನು ಕ್ಯಾನ್ಸರ್ ಮತ್ತು ಚರ್ಮರೋಗಗಳ ನಿವಾರಣೆಯಲ್ಲಿ ಉಪಯೋಗಿಸುತ್ತಾರೆ.
(799) ವಿಕೀರಣಶೀಲ ವಸ್ತುಗಳಿಂದ ಗಾಮಾ (Gamma) ಕಿರಣಗಳು ಉತ್ಪತ್ತಿಯಾಗುತ್ತವೆ. ದ್ಯುತಿ ವಿದ್ಯುತ್ ಪರಿಣಾಮ ಮತ್ತು ಕ್ಯಾನ್ಸರ್ ರೋಗ ಚಿಕಿತ್ಸೆಯಲ್ಲಿ ಬಳಸುತ್ತಾರೆ.
(800) ಮ್ಯಾಕ್ಸ್ ಪ್ಲಾಂಕ್ - ವಿಕಿರಣವು ನಿರ್ದಿಷ್ಟ ಪರಿಮಾಣದ ಶಕ್ತಿಯ ಪೊಟ್ಟಣಗಳ ರೂಪದಲ್ಲಿರುತ್ತದೆಂದು ತನ್ನ ವಾದವನ್ನು ಮಂಡಿಸಿದನು. ಈ ಪಟ್ಟಣಗಳಿಗೆ “ಕ್ವಾಂಟ್” ಎಂದು ಕರೆದ.
(801) ಬೆಳಕು ಪೋಟಾನ್ ಎಂಬ ಅತಿ ಸೂಕ್ಷ್ಮ ಶಕ್ತಿ ಪೊಟ್ಟಣಗಳಿಂದಾಗಿದೆ.
(802) ದ್ಯುತಿ ವಿದ್ಯುತ್ ಪರಿಣಾಮವನ್ನು 1887 ರಲ್ಲಿ ಹೆಚ್. ಹಟ್ರ್ಸ್ ಅವಿಷ್ಕರಿಸಿದ.
(803) ಓಜೋನ್ ಪರದರವು ನೇರಳಾತೀತ ಕಿರಣಗಳಿಂದ ನಾಶವಾಗುತ್ತಿದೆ.
(804) ಒಂದು ವಸ್ತುವಿನಿಂದ 3 ಅಯಾಮಗಳ ಚಿತ್ರ ತೆಗೆಯುವ ತಾಂತ್ರಿಕತೆಯೇ “ಹಾಲೋಗ್ರಾಫಿ”
(805) ಎಲೆಕ್ಟ್ರಾನಿಕ್ ಪ್ರವಾಹವೇ ವಿದ್ಯುತ್ ಪ್ರವಾಹ.
(806) ವಾಹಕ ಮತ್ತು ನಿರೋಧಕಗಳ ನಡುವೆ ಇರುವ ಲೋಹಗಳನ್ನು ಅರೆವಾಹಕಗಳು ಎಂದು ಕರೆಯುವರು ಉದಾ: ಸಿಲಿಕಾನ್ ಮತ್ತು ಜರ್ಮೇನಿಯಂ
(807) ಹೊರಗಿನ ಕವಚದಲ್ಲಿ 4 ಎಲೆಕ್ಟ್ರಾನ್ ಗಳನ್ನು ಹೊಂದಿರುವ ವಸ್ತುಗಳು ಕೊವೆಲಂಟ್ ಬಂಧಕ್ಕೆ ಒಳಪಟ್ಟಿರುತ್ತದೆ.
(808) ವೃತ್ತಿಯ ಪಥಕದಲ್ಲಿ ಚಲಿಸುತ್ತಿದ್ದಾಗ ವೃತ್ತದ ಕೇಂದ್ರದೆಡೆಗೆ ಪ್ರೇರಿತವಾಗುವ ತ್ರಿಜ್ಯೇಯ ಬಲವನ್ನು ಆ ಕಾಯದ ಮೇಲೆ ವರ್ತಿಸುವ ಕೇಂದ್ರಾಭಿಮುಖ ಬಲವೆಂದು ಕರೆಯುವರು.
(809) ಕೇಂದ್ರಭಿಮುಖ ಬಲ ಕಂಡು ಹಿಡಿಯುವ ಸೂತ್ರ ಜಿ = mv²/r
(810) ಕೇಂದ್ರತ್ಯಾಗಿ ಬಲವನ್ನು ಸೃಷ್ಟಿಸಲು ಸಾದ್ಯವಿಲ್ಲ. ಇದು ವೃತ್ತಿಯ ಚಲನೆಯಲ್ಲಿ ಉಂಟಾಗುವ ಜಡತ್ವದ ಪರಿಣಾಮ.
(811) ಗುರುತ್ವಾಕರ್ಷಣ ಬಲವು ಕಣಗಳ ರಾಶಿಗಳ ಗುಣಲಬ್ದಕ್ಕೆ ನೇರ ಅನುಪಾತದಲ್ಲಿಯೂ, ಅಣು ನಡುವಣ ದೂರದ ವರ್ಗಕ್ಕೆ ವಿಲೋಮಾನುಪಾತದಲ್ಲಿಯೂ ಇರುತ್ತದೆ. ಬಲದ ದಿಕ್ಕು ಕಣಗಳನ್ನು ಜೋಡಿಸುವ ರೇಖೆಯ ತನಕ ಇರುತ್ತದೆ.
(812) ಚೋದಿತ ಉತ್ಸಾರ್ಜನೆಯಿಂದ ಬೆಳಕಿನ ಪ್ರವರ್ಧನೆಯಾಗುತ್ತದೆ.
(813) AM – Amplitude Modulation,  FM – Frequency Modulation
(814) 1969 ರಲ್ಲಿ ಇಸ್ರೋ ಸ್ಥಾಪನೆಯಾಯಿತು. (ISRO)
(815) ಭಾರತದ ಬಾಹ್ಯಕಾಶ ಪಿತಾಮಹಾ ಡಾ|| ವಿಕ್ರಂ ಸಾರಾಭಾಯಿ
(816) ಭಾರತ ರಚಿಸಿದ ಮೊದಲ ಅನ್ವೇಷಕ ರಾಕೇಟ್ ರೋಹಿಣಿ RH-75 ಇದನ್ನು ತುಂಬಾದಿಂದ 1967ರಲ್ಲಿ ಹಾರಿಸಲಾಯಿತು.
(817) ಭಾರತದ ಮೊದಲ ಉಪಗ್ರಹ ಆರ್ಯಭಟ. ಇದರ ತೂಕ 360 ಕೆ.ಜಿ. ಇದನ್ನು 1975 ರ ಏಪ್ರಿಲ್ 19 ರಂದು ರಷ್ಯಾದ ಸಿ-1 ಇಂಟರ್ ಕಾಸ್ಸಾಸ್ ಮೂಲಕ ಹಾರಿಸಲಾಯಿತು.
(818) ಭಾರತದ ಮೊದಲ ದೂರಸಂವೇದಿ ಉಪಗ್ರಹ - ಬಾಸ್ಕರ-1 ಇದನ್ನು 1979ರ ಜೂನ್‍ನಲ್ಲಿ ಹಾರಿಸಲಾಯಿತು.
(819) 3600 ಕಿ.ಮಿ. ದೂರದ ಅತೀ ಎತ್ತರದ ಭೂಸ್ಥಿರ ಕಕ್ಷೆಯನ್ನು ತಲುಪಿದ ಮೊದಲ ಉಪಗ್ರಹ- ಆಪೆಲ್. ಫ್ರೆಂಚ್ ಗಯಾನದ ಕೌರವ್ ಉಪಗ್ರಹ ಉಡಾವಣೆ ಕೇಂದ್ರದಿಂದ ಹಾರಿಸಲಾಯಿತು.
(820) APPLE – Arian Passanger Preload Experiment.
(821) ಐ.ಅರ್.ಎಸ್. ಸರಣಿಯ ಉಪಗ್ರಹಗಳನ್ನು 1979 ರಲ್ಲಿ ಭಾರತ ಹಾರಿಸಿತು.
(822) ಇನ್ಸಾಟ್ ಸರಣಿಯ ಉಪಗ್ರಹವನ್ನು ಭಾರತು 1982 ರಿಂದ ಹಾರಿಸಲಾಯಿತು.
(823) ಉಷ್ಣ ಎಂಜೀನ್‍ಗಳು ಗುಪ್ತೋಷ್ಣ ತತ್ವದ ಮೇಲೆ ಕೆಲಸ ಮಾಡುತ್ತದೆ.
(824) ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುವ ಸಾಧನ ಉಷ್ಣ ಯಂತ್ರ
(825) ಬಹಿರ್ದನ ಎಂಜಿನ್‍ಗಿಂತ ಅಂತರ್‍ದಹನ ಎಂಜಿನ್ ಬಹುಉಪಯುಕ್ತ.
(826) ಅಣುಗಳಿಂದ ಬೆಳಕು ಚದುರಿ ಆಕಾಶದ ಬಣ್ಣ ನೀಲಿಯಾಗಿದೆ ಎಂದು ಲಾರ್ಡ್ ರ್ಯಾಲೆ 1891 ರಲ್ಲಿ ಕಂಡುಹಿಡಿದನು.
(827) ಶ್ರವಣ ಶಬ್ದ - 20 Hz to 20,000 Hz
(828) ಶ್ರಾವಣಾತೀತ ಶಬ್ದ 20 Khz
(829) ಶ್ರಾವಣಾತೀತ ಶಬ್ದಗಳ ಅಧ್ಯಯನ ಮಾಡುವ ವಿಜ್ಞಾನಕ್ಕೆ ಅಲ್ಟ್ರಾಸಾನಿಕ್ಸ್ ಎನ್ನುವರು.
(830) 20 Hz ಗಳಿಗಿಂತ ಕಡಿಮೆ ಇರುವ ಶಬ್ದವನ್ನು “ಇರ್ಫಾಸಾನಿಕ್ಸ್” ಎನ್ನುವರು.
(831) ಸೂರ್ಯ ಭೂಮಿಯಿಂದ 5 x 10 ಕಿ.ಮಿ. ದೂರ ಇದೆ.
(832) ಸೂರ್ಯನ ಬೆಳಕು ಭೂಮಿಗೆ ತಲುಪಲು 8 ನಿಮಿಷ ಬೇಕು.
(833) ಸೂರ್ಯ ಎಲ್ಲಾ ದಿಕ್ಕುಗಳಲ್ಲಿ ಪ್ರತಿ ಸೆಕೆಂಡಿಗೆ ಹುಮ್ಮಿಸುವ ಶಕ್ತಿ “ಸೌರದೀಪ್ತತೆ ಎನ್ನುವರು (ಸಂಕೇತ-L)
(834) ಸೂರ್ಯನ ಮೇಲ್ಮೈಯಿಂದ ಸಿಡಿಲಮಳೊಪಾದಿಯಲ್ಲಿ ದ್ರವ್ಯ ಕೆಲವೊಮ್ಮೆ ಸ್ಪೋಟಿಸುತ್ತದೆ.
(835) ಸೌರಜ್ವಾಲೆಗಳು ಕೆಲವೊಮ್ಮೆ ಬೃಹತ್ತ ಪ್ರಮಾಣದಲ್ಲಿ ಸುರಳಿಯಾಕಾರದಲ್ಲಿ ಸುತ್ತಿಕೊಂಡು ತೇಜೋಮಂಡಲಕ್ಕೆ ಹಿಂದಿರುಗುವುದಕ್ಕೆ ಸೌರಚಾಚಿಕೆ ಎನ್ನುವರು.
(836) ಸೂರ್ಯನ ಮೇಲ್ಮೈಯಲ್ಲಿ ಅನಿಯತ ಕಪ್ಪು ಮಚ್ಚೆಗಳಿಗೆ ಸೌರ ಕಲೆ ಎನ್ನುವರು ತಾಪ 4000 K.
(837) 1 ಪಾರ್ಸೆಕ್ = 3.26 ಜೋತಿವರ್ಷಗಳು.
(838) ನಕ್ಷತ್ರಗಳು ಸ್ಪೋಟಿಸುವ ವಿದ್ಯಾಮಾನವನ್ನು “ಸೂಪರ್‍ನೋವ” ಎಂದು ಕರೆಯುತ್ತಾರೆ.
(839) ವಿಶ್ವದ ಅದ್ಯಯನಕ್ಕೆ ಕಾಸ್ಮಾಲಾಜಿ ಎನ್ನುವರು.
(840) ಆದಿ ನಕ್ಷತ್ರದಲ್ಲಿ (ಪ್ರೊಟೋಸ್ಟಾಕ್) ಹೈಡ್ರೋಜನ್ ಗರ್ಭವಿರುತ್ತದೆ.
(841) ಹೈಡ್ರೋಜನ್ ಸಮ್ಮಿಲನಗೊಂಡು ವಿಕಿರಣಗಳಿಂದ ಹೊರಚಾಚುತ್ತಾ ತಣ್ಣಗಾಗುತ್ತೆ. ಇದರಿಂದ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು “ಕೆಂಪು ದೈತ್ಯ’ ಎನ್ನುವರು
(842) 1.4 ಗಿಂತ ಕಡಿಮೆ ಇರುವ ನಕ್ಷತ್ರದ ರಾಶಿಯ ಅಂತಿಮ ಹಂತ - ಶ್ವೇತ ಕುಬ್ಜ
(843) ಗರ್ಭದಲ್ಲಿ ತಾಪ ಹೆಚ್ಚಾದಂತೆ ಹೊರಮುಖ ಒತ್ತಡ ಏರುತ್ತಾ ಹೋಗಿ ಕುಸಿತ ಉಂಟಾಗುತ್ತಾ ಇದರಿಂದ ಗರ್ಭ ಹೊಳೆಯುತ್ತದೆ. ಇದನ್ನು ಶ್ವೇತಕುಬ್ಜ ಎನ್ನುವರು.
(844) ಶ್ವೇತಕುಬ್ಜದಲ್ಲಿ ನಕ್ಷತ್ರದ ಗರ್ಭದಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ನಿಂತು ಶಕ್ತಿ ಕಡಿಮೆಯಾಗಿ, ತಾಪವು ಕಡಿಮೆಯಾಗಿ ಬೆಳಕು ಹೊಮ್ಮುವುದು ನಿಲ್ಲುತ್ತದೆ. ಇದನ್ನು ಕೃಷ್ಣಕುಬ್ಜ ಎನ್ನುವರು.
(845) ನಕ್ಷತ್ರದಲ್ಲಿ ಕಬ್ಬಿಣದ ಗರ್ಭ ಉಂಟಾದಾಗ ನಕ್ಷತ್ರ ಸ್ಫೋಟುಸುತ್ತದೆ. ಇದನ್ನು ಸೂಪರ್‍ನೋವ ಎನ್ನುವರು.
(846) ಸೂಪರ್‍ನೋವಾ ಉಂಟಾದಾಗ ಬಹುಪಾಲು ದ್ರವ್ಯ 10⁴ ಕಿಮಿ ವೇಗದಲ್ಲಿ ಸಿಡಿಯುತ್ತದೆ. ಆಗ ಗರ್ಭದಲ್ಲಿ ನ್ಯೂಟ್ರಾನ್ ಗೋಲ ಉಂಟಾಗುತ್ತದೆ. ಇದನ್ನು ನ್ಯೂಟ್ರಾನ್ ನಕ್ಷತ್ರ ಎನ್ನುವರು.
(847) ಸೂಪರ್‍ನೋವಾದ ಅವಶೇಷಗಳು ಬೃಹತ್‍ಗಾತ್ರದಿಂದ ಸಣ್ಣಗಾತ್ರಕ್ಕೆ ಸಂಪಿಡನೆಗೊಳ್ಳುತ್ತವೆ. ಇದರಿಂದ ಅದರ ಗುರುತ್ವಕ್ಷೇತ್ರ ಅತ್ಯಂತ ತೀವ್ರವಾಗಿರುತ್ತದೆ. ಇದನ್ನು ಬ್ಲಾಕ್ ಹೋಲ್ ಅಥವಾ ಕಪ್ಪು ಕುಳಿ ಎನ್ನುವರು.
(848) ಶ್ವೇತಕುಬ್ಜ ನ್ಯೂಟ್ರಾನ್ ತಾರೆ, ಕಪ್ಪುಕುಳಿ ಇವು ನಕ್ಷತ್ರ ವಿಕಾಸದ 3 ರೀತಿಯ ಅಂತ್ಯಗಳಾಗಿವೆ.
(849) α- ಆಲ್ಫಾ (ಧನಾವೇಶ) ß ಬೀಟಾ (ಋಣಾವಶೇಷ), ý- ಗಾಮಾ (ತಟಸ್ಥ + ಉಚ್ಚಾಶಕ್ತಿ)
(850) ಒಂದೇ ಸಂಖ್ಯೆಯ ಪ್ರೋಟಾನ್‍ಗಳನ್ನು ಹೊಂದಿದ್ದು, ಬೇರೆ ಬೇರೆ ಸಂಖ್ಯೆಯ ನ್ಯೂಟ್ರಾನ್‍ಗಳನ್ನು ಹೊಂದಿರುವುದಕ್ಕೆ “ಐಸೋಟೋಪು”ಗಳು ಎನ್ನುವರು.
(851) ವಿಕೀರಿಣಪಟು ದಾತುವನ್ನು ರೇಡಿಯೋ ಐಸೋಟೋಪು ಎಂದು ಕರೆಯಲಾಗುತ್ತದೆ.
(852) ಸಿಲಿಕಾನ್ ಒಂದು ಅರೆ ಅಂತರ್‍ವಾಹಕ. ಇದು ತಾಪ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದಕ್ಕೆ ಉಷ್ಣತೆ ಹೆಚ್ಚಿಸಿದಾಗ ಅಂತರ್ ವಾಹಕವಾಗುತ್ತದೆ.
(853) ಕಾರ್ಬನ್ ತನ್ನ ಪರಮಾಣುಗಳೊಂದಿಗೆ ಬಂಧಗಳನೇರ್ಪಡಿಸಿಕೊಂಡು ಸರಪಳಿ ರಚಿಸುವ ಕ್ರಿಯೆಗೆ “ಕೆಟನಿಕರಣ” ಎನ್ನುವರು.
(854) ಸರಪಳಿಯಲ್ಲಿ ನೇರ, ಕವಲು, ಮತ್ತು ಮುಚ್ಚಿದ ಸರಪಳಿ ಎಂದು 3 ವಿಧಧ ಸರಪಳಿಗಳಿವೆ.
(855) ಹೈಡ್ರೋಕಾರ್ಬನ್‍ನಲ್ಲಿ 2 ವಿಧ : ಅಲಿಪ್ಯಾಟಿಕ್ (ಪರ್ಯಾಪ್ತ), ಆರೋಮ್ಯಾಟಿಕ್ (ಅಪರ್ಯಾಪ್ತ)
(856) ಅಲಿಪ್ಯಾಟಿಕ್‍ನಲ್ಲಿ 3 ವಿಧ ಅವು 1) ಅಲೇನ್- ಏಕಬಂಧ 2) ಆಲ್ಡಿನ್ - ದ್ವಿಬಂಧ 3) ಆಲೈನ್ ತ್ರಿಬಂಧ
(857) ಆರೋಮ್ಯಾಟಿಕ್- ಸುವಾ
(858) ನೀರಿನ ತಾತ್ಕಾಲಿಕ ಗಡಸುತನಕ್ಕೆ ಕಾರಣಗಳು.: ಮೆಗ್ನೀಷಿಯಂ, ಕ್ಯಾಲ್ಸಿಯಂ, ಬೈಕಾರ್ಬೋನೇಟುಗಳು, ಕಬ್ಬಿಣದ ಲವಣಗಳು.
(859) ಶಾಶ್ವತ ಗಡಸುತನಕ್ಕೆ ಕಾರಣಗಳು : ಮೆಗ್ನೀಷಿಯಂ, ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಸಲ್ಫೇಟ್.
(860) ಗಡಸುತನವನ್ನು ನಿವಾರಿಸುವ ವಿಧಾನಗಳು : ಆಸವನ, ಸೋಡಾ ವಿಧಾನ, ಫಮ್ರ್ಯೂಟೇಟ್ ವಿಧಾನ.
(861) ಫಮ್ರ್ಯೂಟೇಟ್ : ಸೋಡಿಯಂ ಅಲ್ಯುಮಿನಿಯಂ ಸಿಲಿಕೇಟ್ (ಜಿಯೋಲೇಟ್)
(862) ಸೋಡಿಯಂ ಮತ್ತು ಪೊಟ್ಯಾಸಿಯಂ ಲವಣಗಳು ನೀರಿನ ಗಡಸುತನವನ್ನು ಹೋಗಲಾಡಿಸುತ್ತದೆ.
(863) –COOH-> ಇದು ಕಾರ್ಬಾಕ್ಸಿಲ್ ಮೆದಾಮ್ಲಗಳು
(864) ಸಾಬೂನು - ಕೊಬ್ಬಿನೆಣ್ಣೆ, ಸೋಡಿಯಂ ಹೈಡ್ರಾಕ್ಸೈಡ್, ಸೋಡಿಯಂ ಕ್ಲೋರೈಡ್.
(865) ಮಾರ್ಜಕ - ಸೋಡಿಯಂ ಲವಣ
(866) ಹೈಡ್ರೋಕಾರ್ಬನ್ ಸರಪಳಿಯನ್ನು ಸಾರಿಕೃತ ಗಂಧಕಾಮ್ಲದೊಂದಿಗೆ ಸಂಸ್ಕರಿಸಿ, ಸೋಡಿಯಂ ಹೈಡ್ರಾಕ್ಸೈಡ್‍ನೊಂದಿಗೆ ತಟಸ್ಥಗೊಳಿಸಿ ಇದರಿಂದ ಬರುವ ಸೋಡಿಯಂ ಲವಣ ಮಾರ್ಜಕ.
(867) ಸಾಬೂನು - ಸೋಡಿಯಂ ಅಥವಾ ಪೊಟ್ಯಾಷಿಯಂ ಲವಣಗಳು.
(868) ಸೋಡಿಯಂ ಸ್ಪಿಯರೇಟ್, ಸೋಡಿಯಂ ಓಲಯೇಟ್, ಸೋಡಿಯಂ ಪಾಯಿಟೇಟ್ ಇವು ಸಾಬೂನಿಗೆ ಕೆಲವು ಉದಾಹರಣೆಗಳು.
(869) ಗ್ಲಿಸರಾಲ್ - ಸಾಬೂನಿನ ಉಪ ಉತ್ಪನ್ನವಾಗಿದೆ. ಇದರ ಅಣು ಸೂತ್ರ : CH₂OH, CHOH, CH₂OH ಇದನ್ನು ಶಿಥಲೀಕರಣ ತಡೆಯಲು, ಸ್ಟೋಟಕದ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
(870) ಕಿರಿದಾದ ತರಂಗದೂರ ವ್ಯಾಪ್ತಿಯನ್ನು ಹೊಂದಿರುವ ವಿದ್ಯುತ್ ಕಾಂತಿಯ ವಿಕಿರಣ ದೃಗ್ಗೋಚರ ಕಿರಣ
(871) ಅಲ್ಟ್ರಾ ವೈಲೇಟ್ ಕಿರಣಗಳನ್ನು 1801 ರಲ್ಲಿ ಫೋಟೋಗ್ರಾಫಿಕ್ ಕ್ರಿಯೆಯಿಂದ ಕಂಡುಹಿಡಿಯಲಾಯಿತು.

ಜೀವಶಾಸ್ತ್ರ 10ನೇ ತರಗತಿ
(872) ಶೈವಲಗಳನ್ನು 3 ವರ್ಗಗಳಲ್ಲಿ ಗುರುತಿಸಲಾಗಿದೆ.
(873) ಕೆಂಪು ಶೈವಲ - ಬೆಟ್ರಕೋಸ್ಪಾರ್ಮ್, ಪಾಲಿಸೈಪೋನಿಯಾ
(874) ಕಂದು ಶೈವಲ - ಸರ್‍ಗ್ಯಾಸಂ, ಎಕ್ಟೋಕಾರ್ಪಸ್ ಹಸಿರು ಶೈವಲ - ಸ್ಪೈರೋಗೈರಾ, ಯುಲೋಥ್ರಿಕ್ಸ್.
(875) ಕೆಂಪು ಮತ್ತು ಕಂದು ಶೈವಲಗಳೂ ಸಮುದ್ರ ವಾಸಿಗಳು, ಹಸಿರು ಶೈವಲಗಳು ಸಿಹಿನೀರು ವಾಸಿಗಳು.
(876) ಶೈವಲಗಳಲ್ಲಿ ಪ್ರಜನನ ಕ್ರಿಯೆಯು ಲೈಂಗಿಕ ಮತ್ತು ನಿರ್ಲಿಂಗ ರೀತಿಯಲ್ಲಿ ನಡೆಯುತ್ತದೆ.
(877) ಹಾವಸೆ ಸಸ್ಯಗಳು ಉಭಯವಾಸಿ ಸಸ್ಯಗಳಾಗಿದೆ ಉದಾ: ರಕ್ಷಿಯಾ, ಮಾಸ್, ಮಾಕ್ರ್ಯನ್ಷಿಯಾ, ಪೈನ್, ಪ್ಯೂನೇರಿಯಾ.
(878) ಸೈಕಾಸ್,ಪೈನಸ್, ದೇವದಾರು, ಇವು ಅನಾವೃತ ಬೀಜ ಸಸ್ಯಗಳಿಗೆ ಉದಾಹರಣೆ.
(879) ಕೋನಿಫೆರಸ್ ಮರಗಳು ಜಗತ್ತಿನ ಅತಿ ಹಳೆಯ ಹಾಗೂ ಅತಿ ಎತ್ತರದ ಮರಗಳಾಗಿವೆ.
(880) ಮೀನುಗಳಲ್ಲಿ ‘ಎ’ ಮತ್ತು ‘ಡಿ’ ಜೀವಸತ್ವಗಳು ಹೆಚ್ಚಾಗಿವೆ.
(881) ಮೀನುಗಳಲ್ಲಿ ವಿದ್ಯುತ್‍ಚ್ಛಕ್ತಿಯನ್ನು ಉತ್ಪಾದಿಸುವ ವಿಶೇಷ ಅಂಗಗಳಿವೆ.
(882) ಮೀನುಗಳಲ್ಲಿ ಎರಡು ಕೋಣೆಯ ಹೃದಯವಿರುತ್ತದೆ.
(883) ಉಭಯವಾಸಿಗಳಲ್ಲಿ ಹಿಂಗಾಲುಗಳು ಮುಂಗಾಲಿಗಿಂತ ದೊಡ್ಡವು. ಮುಂಗಾಲಿನಲ್ಲಿ 4, ಹಿಂಗಾಲಿನಲ್ಲಿ 5 ಬೆರಳುಗಳಿರುತ್ತವೆ.
(884) ಉಭಯವಾಸಿಗಳಿಗೆ 3 ಕೋಣೆಯ ಹೃದಯವಿರುತ್ತದೆ. ( ಮೀನು-2, ಉಭಯವಾಸಿ-3 ಪಕ್ಷಿಗಳು-4 ಕೋಣೆಯ ಹೃದಯವಿರುತ್ತದೆ.)
(885) ಸರಿಸೃಪಗಳಲ್ಲಿ ಕೆಲವೊಂದಕ್ಕೆ ಕಾಲುಗಳಿರುತ್ತವೆ ಮತ್ತೆ ಕೆಲವುಗಳಿಗೆ ಕಾಲು ಇರುವುದಿಲ್ಲ.
(886) ಮೊಸಳೆ, ಹಾವು, ಗೋಸುಂಬಿ, ಆಮೆ, ಡೈನೋಸಾರ್, ಇವುಗಳು ಸರಿಸೃಪಗಳಾಗಿವೆ.
(887) ಸರಿಸೃಪಗಳು ಹಾಗು ಮೀನುಗಳು 3 ಕೋಣೆಯ ಹೃದಯ ಹೊಂದಿರುತ್ತದೆ.
(888) ಅತೀ ಚಿಕ್ಕ ಪಕ್ಷಿ - ಹಮ್ಮಿಂಗ್ ಬರ್ಡ್ (ಝೆಂಕಾರ ಹಕ್ಕಿ)
(889) ಅತಿ ದೊಡ್ಡ ಪಕ್ಷಿ ಆಸ್ಟ್ರೀಚ್ (ಎತ್ತರ 24 ಎಂ. ತೂಕ 140 ಕೆಜಿ)
(890) ಅತೀ ದೂರ ವಲಸೆ ಹೋಗುವ ಹಕ್ಕಿ ಆಕ್ರ್ಟಿಕ್ ಟರ್ನ್ (ತಡೆಯಿಲ್ಲದೆ 18000 ಕಿಮಿ)
(891) ಹಕ್ಕಿಗಳು ಸ್ಥಿರವಾದ ದೇಹದ ಉಷ್ಣತೆಯನ್ನು ಹೊಂದಿರುವ ಬಿಸಿರಕ್ತದ ಕ್ರಿಯಾಶೀಲ ಜೀವಿಗಳಾಗಿವೆ.
(892) ಮರಿಗಳಿಗೆ ಹಾಲುಣಿಸಿ ಬೆಳೆಸುವ ಪ್ರಾಣಿಗಳಿಗೆ ಸಸ್ತನಿಗಳು ಎನ್ನುವರು
(893) ಮೊಟ್ಟೆಯ ಚಿಪ್ಪು ಕ್ಯಾಲ್ಸಿಯಂ ಕಾರ್ಬೋನೆಟ್ ನಿಂದ ಆಗಿರುತ್ತದೆ.
(894) ಮೊಟ್ಟೆ ಇಡುವ ಸಸ್ತನಿಗಳು - ಪ್ಲಾಟಿಪಾಸ್ ಮತ್ತು ಇಕಿಡ್ನಾ, ಹಾರುವ ಸಸ್ತನಿ - ಬಾವಲಿ
(895) ಕೋನ ರಚನೆಗಳು ಕಂಡುಬರುವ ಸಸ್ಯ ಅನಾವೃತ ಬೀಜ ಸಸ್ಯಗಳು.
(896) ವರ್ಧನ ಅಂಗಾಂಶ ಸಸ್ಯಗಳಲ್ಲಿ ಕೋಶವಿಭಜನ ಅಂಗಾಂಶವಾಗಿದೆ. ಇದು ತಾತ್ಕಾಲಿಕ ಅಂಗಾಂಶವಾಗಿದೆ.
(897) ಸಸ್ಯಗಳಲ್ಲಿ Sclerenchyma  ಆಧಾರ ಅಂಗಾಂಶವಾಗಿದೆ. ಕೆಲವು ಸಸ್ಯಗಳಲ್ಲಿ ನಾರಿನ ಭಿತ್ತಿಯನ್ನು ನಿರ್ಮಾಣ ಮಾಡುತ್ತದೆ.
(898) Xylum ಇದು ಜಲವಾಹಕ ಅಂಗಾಂಶವಾಗಿದೆ. Phloem ಇದು ಆಹಾರ ವಾಹಕ ಅಂಗಾಂಶವಾಗಿದೆ
(899) ಸಸ್ಯ ದೇಹದ ಹೊರಭಾಗವನ್ನು ಆವರಿಸಿರುವ ಅಂಗಾಂಶ ಎಪಿಡರ್ಮಲ್
(900) ಹೊರದರ್ಮ (ಎಪಿಡರ್ಮಲ್) ಅಂಗಾಂಶವು “ಕ್ಯುಟಿನ್” ಎಂಬ ಕೊಬ್ಬಿನ ಪದಾರ್ಥದಿಂದಾಗಿದೆ.
(901) ಪ್ರಾಣಿ ಅಂಗಾಂಶಗಳಲ್ಲಿ 1. ಅನುಲೇಪಕ 2. ಸ್ನಾಯು 3. ಸಂಯೋಜಕ 4 ನರ ಅಂಗಾಂಶಗಳು ಎಂಬುದಾಗಿ ರಚನೆಯಾಗಿದೆ.
(902) ಅನುಲೇಪಕ ಅಂಗಾಂಶವು ದೇಹದ ಹೊರ ಹಾಗು ಒಳಭಾಗದಲ್ಲಿ ಆವರಿಸಿರುವ ಚರ್ಮವಾಗಿದೆ.
(903) ಸ್ನಾಯು ಅಂಗಾಂಶವು ದೇಹದ ಚಲನವಲನಗಳಿಗೆ, ಸಂಕೋಚನ ಮತ್ತು ವಿಕಸನಗಳಿಗೆ ಸಂಬಂದಿಸಿದ್ದು.
(904) ಸಂಯೋಜಕ ಅಂಗಾಂಶವು ದೇಹದ ವಿವಿಧ ಅಂಗಾಂಶಗಳನ್ನು ಬಂಧಿಸುವ ಅಂಗಾಂಶವಾಗಿದೆ.
(905) ಸಂಯೋಜಕ ಅಂಗಾಂಶದಲ್ಲಿ ಏರಿಯೋಲರ್ ಅಂಗಾಂಶವು ಚರ್ಮದ ತಳಭಾಗದಲ್ಲಿ ತಂತುಗಳ ರಚನೆಯನ್ನು ಹೊಂದಿದೆ.
(906) ರಕ್ತ ಮತ್ತು ದುಗ್ದರಸ ದ್ರವರೂಪ ಸಂಯೋಜಕ ಅಂಗಾಂಶವಾಗಿದೆ.
(907) ರಕ್ತದಲ್ಲಿರುವ ಪ್ಲಾಸ್ಮಾವು ಎಲ್ಲಾ ವಸ್ತುಗಳನ್ನು ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಾಣಿಕೆ ಮಾಡುತ್ತೆ ಮತ್ತು ದೇಹದ ಎಲ್ಲಾ ಜೀವಕೋಶಗಳನ್ನು ಸಂಯೋಜಿಸುತ್ತದೆ.
(908) ರಕ್ತವನ್ನು ಹೋಲುವ ಆದರೆ ಬಣ್ಣವಿಲ್ಲದ ವಸ್ತುವನ್ನು ದುಗ್ದರಸ ಎನ್ನುವರು.
(909) ರಕ್ತದ ಕೋಶಕಾಯದಿಂದ ಹೊರಟಿರುವ ಸಣ್ಣ ಕವಲುಗಳಿಗೆ ಡೇಂಡ್ರೈಟ್ ಎನ್ನುವರು.
(910) ರಕ್ತದ ಕೋಶಕಾಯದಿಂದ ಹೊರಟಿರುವ ಉದ್ದವಾದ ರಚನೆಗೆ ‘ಆಕ್ಸಾನ್’ ಎನ್ನುವರು.
(911) ಜ್ಞಾನೇಂದ್ರಿಯಗಳು- ಗ್ರಾಹಕಗಳು, ಸ್ನಾಯು ಮತ್ತು ಗ್ರಂಥಿಗಳು- ಕಾರ್ಯನಿರ್ವಾಹಕಗಳು, ನರ ಅಂಗಾಂಶಗಳು - ವಾಹಕಗಳು.
(912) ಮಾನವನ ನರವ್ಯೂಹವನ್ನು 1.ಕೇಂದ್ರ  2. ಪರಿಧಿ 3 ಸ್ವಯಂ ನಿಯಂತ್ರಕ ನರವ್ಯೂಹ  ಎಂದು ವಿಭಾಗಿಸಲಾಗಿದೆ.
(913) ಪುರುಷರ ಮೆದುಳಿನ ತೂಕ 1400 ಗ್ರಾಂ, ಮಹಿಳೆಯರ ಮೆದುಳಿನ ತೂಕ 1260 ಗ್ರಾಂ
(914) ಮುಮ್ಮೆದುಳಿನಲ್ಲಿ 1. ಸೆರಿಬ್ರಮ್  2.ಡೈಎನ್‍ಸೆಫೆಲಾನ್ ಎಂಬ ಭಾಗಗಳಿವೆ.
(915) ಮೆದುಳಿನಲ್ಲಿ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುವುದು ‘ ಪಾನ್’ ಎಂಬುದಾಗಿದೆ.
(916) ಸೆರಬ್ರಮ್ ಅಥವಾ ಮಹಾಮಸ್ತಿಷ್ಕವು (ಮುಮ್ಮೆದುಳು) ಮಿದುಳಿನ ಅತ್ಯಂತ ದೊಡ್ಡದಾದ ಭಾಗವಾಗಿದೆ.
(917) ಸೆರಿಬ್ರಮ್ ಬುದ್ದಿಶಕ್ತಿ ಮತ್ತು ಪ್ರಜ್ಷೆಯ ಕೇಂದ್ರವಾಗಿದೆ.
(918) ಡೈಎನ್ಸೆಫೆಲಾನ್ ಇದು ಸ್ವಯಂ ನಿಯಂತ್ರಕ ನರವ್ಯೂಹ ಮತ್ತು ಪಿಟ್ಯುಟರಿ ಗ್ರಂಥಿಯ ಮೇಲೆ ಹಿಡಿತ ಸಾಧಿಸಿದೆ.
(919) ಮದ್ಯ ಮೆದುಳು ಇದು ಹಿಮ್ಮೆದುಳು ಮತ್ತು ಮುಮ್ಮೆದುಳಿನ ನಡುವೆ ಸಂಬಂಧ ಕಲ್ಪಿಸುತ್ತದೆ.
(920) ಮಧ್ಯಮೆದುಳಿನಲ್ಲಿ ಪಾನ್ಸ್, ಅನುಮಸ್ತಿಷ್ಕ ಮತ್ತು ಮೆಡುಲ್ಲಾ ಅಬ್ಲಾಂಗೆಟಾ ಎಂಬ 3 ಭಾಗಗಳಿವೆ
(921) ಸಿರೆಬೆಲ್ಲಮ್ ಅಥವಾ ಅನುಮಸ್ತಿಷ್ಕ ವು ಶರೀರದ ಸಮತೋಲನವನ್ನು ಕಾಪಾಡುತ್ತದೆ. ಸ್ನಾಯುಗಳ ಕಾರ್ಯ ಹೊಂದಾಣಿಕೆಯನ್ನು ಮಾಡುತ್ತದೆ.
(922) ಮೆಡುಲ್ಲಾ ಅಬ್ಲಾಂಗೆಟ ಅಥವಾ ಮಣಿಶಿರ ಮೆದುಳು ಬಳ್ಳಿಯಾಗಿ ಮುಂದುವರಿಯುತ್ತದೆ. ಇದು ದೇಹ ಅನೈಚ್ಚಿಕ ಕ್ರಿಯೆಗಳ ಮೇಲೆ ಹಿಡಿತ ಸಾಧಿಸಿದೆ.
(923) 31 ಜೊತೆ ನರಗಳು ಮೆದುಳುಬಳ್ಳಿಯಿಂದ ದೇಹದ ಭಾಗಗಳಿಗೆ ಹೊರಡುತ್ತವೆ.
(924) ಪ್ರಚೋದನೆಗೆ ತಾನೆ ತಾನಾಗಿ ಉಂಟಾಗುವ ಪ್ರತಿಕ್ರಿಯೆಗೆ ಪರಾವರ್ತಿತ ಪ್ರತಿಕ್ರಿಯೆ ಎನ್ನುವರು. ಮೆದುಳುಬಳ್ಳಿಯು ಈ ಕ್ರಿಯೆಗಳ ಕೇಂದ್ರವಾಗಿದೆ.
(925) ವೇಗಸ್ ನರವು ಸ್ವಯಂ ನಿಯಂತ್ರಕ ನರವ್ಯೂಹದ ಭಾಗವಾಗಿದೆ.
(926) ಸ್ವಯಂ ನಿಯಂತ್ರಕ ನರವ್ಯೂಹದಲ್ಲಿ 1. ಅನುವೇದನಾ ವ್ಯೂಹ 2. ಪ್ಯಾರ ಅನುವೇದನಾ ವ್ಯೂಹ ಎಂಬುದಾಗಿ ಇದ್ದು, ಇವು ಚಟುವಟಿಕೆಗಳ ಸಮತೋಲನವನ್ನು ಕಾಪಾಡುತ್ತದೆ.
(927) ಕಣ್ಣುಗುಡ್ಡೆಯ ಗೋಡೆಯು ಸ್ಲೀರಾ, ಕೋರಾಯಿಡ್ ಮತ್ತು ರೆಟಿನಾ ಎಂಬ 3 ಪದರಗಳೀಂದಾಗಿದೆ.
(928) ಕಣ್ಣಿನ ಮುಂದೆ ಉಬ್ಬಿರುವ ಮುಂಭಾಗವನ್ನು ಕಾರ್ನಿಯಾ ಎನ್ನುವರು.
(929) ಕಾರ್ನಿಯಾ ‘ ಕಂಜೆಕ್ಟೀವ್ ಎಂಬ ಪೊರೆಯಿಂದ ರಕ್ಷಣೆ ಪಡೆದಿದೆ.
(930) ಪಾಪೆಯು ಕಣ್ಣುಗುಡ್ಡೆಯ ಮುಂಭಾಗದ ಕೇಂದ್ರಭಾಗದಲ್ಲಿದೆ.
(931) ರೆಟಿನಾ ಅಥವಾ ಅಕ್ಷಿಪಟಲದಲ್ಲಿ ಬೆಳಕನ್ನು ಗ್ರಹಿಸುವ ರಾಡ್ ಮತ್ತು ಕೋನ್‍ಗಳಿವೆ.
(932) ಮಾನವನ ಪ್ರತಿ ಕಣ್ಣಿನಲ್ಲಿ 125 ಮಿಲಿಯನ್ ರಾಡ್‍ಗಳು, 7 ಮಿಲಿಯನ್ ಕೋನಗಳಿವೆ.
(933) ಕಣ್ಣಿಗೆ ಸಂಬಂಧಿಸಿದ ದೋಷಗಳು: ಮಧುಮೇಹ- ಅಕ್ಷಿಪಟಲ, ಅಸಮ ದೃಷ್ಟಿ- ದೃಷ್ಟಿ ದೋಷ, ಗ್ಲುಕೋಮ
(934) ಕಿವಿಯಲ್ಲಿ ಹೊರಕಿವಿ, ಮಧ್ಯಕಿವಿ, ಮತ್ತು ಒಳಕಿವಿ ಎಂಬ ಭಾಗಗಳಿವೆ.
(935) ಹೊರಕಿವಿಯು : 1. ಹಾಲೆ 2. ಕರ್ಣನಾಳ 3. ತಮಟೆ ಎಂಬ ಭಾಗಗಳಿಂದ ಕೂಡಿದೆ.
(936) ತಮಟೆಯು ಹೊರಕಿವಿಯನ್ನು ಮಧ್ಯಕಿವಿಯಿಂದ ಪ್ರತ್ಯೇಕಿಸುತ್ತದೆ.
(937) ಒಳಕಿವಿಯಲ್ಲಿ ‘ಎಂಡೋಲಿಂಪ್’ ಎಂಬ ದ್ರವವಿದೆ. ಜೊತೆಗೆ ‘ಪೆರಿಲಿಂಕ್’ ಎಂಬ ದ್ರವದಿಂದ ಸುತ್ತುವರಿಯಲ್ಪಟ್ಟಿದೆ.
(938) ಕಾಕ್ಲಿಯಾದಲ್ಲಿ ‘ಕಾರ್ಟಿಯಾ’ ಎಂಬ ಬಹು ಸೂಕ್ಷ್ಮವಾದ ಅಂಗವಾಗಿದೆ.
(939) ಹೊರಕಿವಿಯ ಹಾಲೆಯು ಶಬ್ದ ತರಂಗಗಳನ್ನು ಕರ್ಣನಾಳಕ್ಕೆ ನಿರ್ದೇಶಿಸುತ್ತದೆ.
(940) ಮೂಗು ನಾಸಿಕ ಕುಹರದಲ್ಲಿ ವಾಸನೆಯನ್ನು ಗ್ರಹಿಸಲು ಆಫ್ರಾಣ ಭಿತ್ತಿಯಿಂದ ಆವರಿಸಲ್ಪಟ್ಟಿದೆ.
(941) ನಾಲಿಗೆಯಲ್ಲಿ ರಸಾಂಕುರಗಳು ಪೊರೆಯಿಂದ ಆವೃತ್ತವಾಗಿದೆ.
(942) ಸಿಹಿ ರುಚಿಯನ್ನು ಹೊಂದಿರುವ ರಸಾಂಕುರ ನಾಲಿಗೆಯ ಮುಂಭಾಗದಲ್ಲಿದೆ.
(943) ಮಾನವ ಶರೀರದಲ್ಲಿ 2 ವಿಧಧ  ಗ್ರಂಥಿಗಳಿವೆ : 1. ನಳಿಕಾ ಗ್ರಂಥಿಗಳು 2. ನಿರ್ನಾಳ ಗ್ರಂಥಿಗಳು.
(944) ನಳಿಕಾ ಗ್ರಂಥಿಗಳು: ಮೆದೋಜೀರಕಾಂಗ , ಲಾಲಾಗ್ರಂಥಿಗಳು.
(945) ನಿರ್ನಾಳ ಗ್ರಂಥಿಗಳು ಸ್ರವಿಸುವ ರಾಸಾಯನಿಕ ವಸ್ತುಗಳಿಗೆ ‘ಹಾರ್ಮೋನುಗಳು’ ಎನ್ನುವರು.
(946) ರಸದೂತ - ಹಾರ್ಮೋನುಗಳು ಪ್ರಚೋದನೆಯನ್ನು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಒಯ್ಯುತ್ತದೆ.
(947) ಮಾನವ ದೇಹದಲ್ಲಿರುವ ಪ್ರಮುಖ ನಿರ್ನಾಳ ಗ್ರಂಥಿಗಳು. ಪಿಟ್ಯುಟರಿ, ಥೈರಾಯಿಡ್, ಪ್ಯಾರಾಥೈರಾಯಿಡ್, ಅಡ್ರಿನಲ್, ಲಾಂಗರ್‍ಹ್ಯಾನ್ಸ್, ಕಿರುದ್ವೀಪಗಳು, ಜನನ ಗ್ರಂಥಿಗಳು.
(948) ಮಾನವ ದೇಹದಲ್ಲಿರುವ ಅತಿ ಚಿಕ್ಕ ಗ್ರಂಥಿ - ಪಿಟ್ಯುಟರಿ ಗ್ರಂಥಿ. ಇದು ಮೆದುಳಿನ ಕೆಳಗೆ ಇದೆ
(949) ಥೈರಾಯಿಡ್ ಗ್ರಂಥಿ ಥೈರಾಕ್ಸಿನ್ ಹಾರ್ಮೋನ್ ಸ್ರವಿಸುತ್ತದೆ.
(950) ಥೈರಾಕ್ಸಿನ್ - ವ್ಯಕ್ತಿತ್ವದ ಹಾರ್ಮೋನು ಎಂದು ಕರೆಯುವರು.
(951) ಥೈರಾಯಿಡ್ ಗ್ರಂಥಿಗೆ ಸಂಬಂಧಿಸಿದ ಖಾಯಿಲೆಗಳು.
(952) ಹೈಪೋಥೈರಾಯಿಡಿಸಂ - ಕೊರತೆಯಿಂದ
(953) ಸರಳ ಗಾಯಿಟರ್ - ಗ್ರಂಥಿಯ ಬೆಳವಣಿಗೆಯ ಅಸಹಜತೆಯಿಂದ
(954) ಮಿಕ್ಸೆಡೀಯಾ - ಪ್ರೌಢರಲ್ಲಿ ಗ್ರಂಥಿಯ ಕಾರ್ಯ ಕ್ಷೀಣತೆಯಿಂದ
(955) ಕ್ರಿಟನಿಸಮ್ - ಶಿಶುಗಳಲ್ಲಿ ಥೈರಾಕ್ಸಿನ್ ಕೊರತೆಯಿಂದ
(956) ಹೈಪರ್ ಥೈರಾಯಿಡಿಸಂ - ಥೈರಾಯಿಡ್ ಗ್ರಂಥಿಯ ವಿಸ್ತರಣೆಯಿಂದ
(957) ಪ್ಯಾರಾಥೈರಾಯಿಡ್ ಗ್ರಂಥಿಗಳು ಥೈರಾಯಿಡ್ ಗ್ರಂಥಿಯ ಅಂಗಾಂಶದಲ್ಲಿ ಹುದುಗಿಕೊಂಡಿದೆ.
(958) ಪ್ಯಾರಾಥೈರಾಯಿಡ್ ಗ್ರಿಂಥಿಯು ಪ್ಯಾರಾಥಾರ್ಮನ್ ಹಾರ್ಮೋನು ಸ್ರವಿಸುತ್ತದೆ.
(959) ಪ್ಯಾರಾಥಾರ್ಮೋನ್ ಹಾರ್ಮೋನು ರಕ್ತದಲ್ಲಿರುವ ಕ್ಯಾಲ್ಸಿಯಂ ನಿಯಂತ್ರಿಸುತ್ತದೆ.
(960) ಅಡ್ರಿನಲ್ ಗ್ರಂಥಿಗಳು ಪ್ರತಿ ಮೂತ್ರಜನಕಾಂಗದ ಮೇಲೆ ತ್ರಿಕೋರ್ಣಾಕಾರದ ರಚನೆಯನ್ನು ಹೊಂದಿದೆ.
(961) ಅಡ್ರಿನಲ್ ಗ್ರಂಥಿಯಲ್ಲಿ 2 ಭಾಗಗಳು: ಹೊರಭಾಗದ ತೊಗಟೆ, ಒಳಭಾಗದ ಮೆಡುಲ್ಲಾ.
(962) ತೊಗಟೆ ‘ಕಾರ್ಟಿಸೋನ್’ ಎಂಬ ಹಾರ್ಮೋನ್ ಸ್ರವಿಸುತ್ತದೆ.
(963) ಅಡ್ರಿನಲ್ ಮೆಡುಲ್ಲಾ 3 ಬಗೆಯ ಹಾರ್ಮೋನು ಸ್ರವಿಸುತ್ತದೆ: ಅಡ್ರಿನಲಿನ್, ನಾರ್ ಅಡ್ರಿನಲಿನ್, ಡೋಪಯಿನ್.
(964) ಅಡ್ರಿನಲಿನ್ ಹಾರ್ಮೋನು “ತುರ್ತು ಪರಿಸ್ಥಿತಿಯ ಹಾರ್ಮೋನು” ಎನ್ನುವರು. ಕಾರಣ ಇದು ಸಂವೇದನೆಗಳ ಮಧ್ಯ ಹೊಂದಾಣಿಕೆಯನ್ನು ಉಂಟುಮಾಡುತ್ತದೆ.
(965) ಮೆದೋಜೀರಕಾಂಗ ಗ್ರಂಥಿಯ ಅಂತಸ್ರಾವಕ ಭಾಗವನ್ನು ‘ಲ್ಯಾಂಗರ್‍ಹಾನ್ಸ್’ ಕಿರುದ್ವೀಪಗಳು ಎನ್ನುವರು.
(966) ಲ್ಯಾಂಗರ್ ಹಾನ್ಸ್ ಕಿರುದ್ವೀಪಗಳು,ಇನ್ಸುಲೀನ್ ಮತ್ತು ಗ್ಲುಕಗಾನ್ ಎಂಬ ಹಾರ್ಮೋನು ಗಳನ್ನು ಸ್ರವಿಸುತ್ತದೆ.
(967) ಇನ್ಸುಲೀನ್ ಗ್ಲೂಕೋಸನ್ನು ಗ್ಲೈಕೋಜಿನ್ ಆಗಿ ಪರಿವರ್ತಿಸುತ್ತದೆ.
(968) ಇನ್‍ಸುಲಿನ್ ಉತ್ಪತ್ತಿ ಕಡಿಮೆಯಾದರೆ ಸಿಯಿಮೂತ್ರ ರೋಗ ಬರುತ್ತದೆ.
(969) ಪುರುಷರಲ್ಲಿ ಟೆಸ್ಟೋಸ್ಟಿರಾನ್ ಹಾರ್ಮೋನು ಸ್ರವಿಕೆಯಿಂದ ಪುರುಷತ್ವದ ಲಕ್ಷಣಗಳನ್ನು ಪಡೆಯುತ್ತಾರೆ.
(970) ಮಹಿಳೆಯರಲ್ಲಿ ಈಸ್ಟೋಜನ್ ಹಾರ್ಮೋನ್ ಸ್ರವಿಕೆಯಿಂದ ಮಹಿಳೆಯ ಲಕ್ಷಣಗಳು ಕಂಡು ಬರುತ್ತದೆ.
(971) ಪರಿವರ್ತಿತ ಪ್ರತಿಕ್ರಿಯೆಯನ್ನು ನಿಯಂತ್ರಿಸುವ ಭಾಗ ‘ಮೆದುಳುಬಳ್ಳಿ’
(972) ಮದ್ಯಕಿವಿಯನ್ನು ಗಂಟಲಿಗೆ ಸಂಪರ್ಕಿಸುವ ನಳ - ಮಧ್ಯಕರ್ಣಾತರ ನಾಳ
(973) ಒಂದು ಗ್ರಂಥಿಯಲ್ಲಿ ಹುದುಗಿರುವ ಇನ್ನೊಂದು ಗ್ರಂಥಿ - ಪ್ಯಾರಾಥೈರಾಯಿಡ್
(974) 1981 ರಲ್ಲಿ ಏಡ್ಸ್ ಅನ್ನು ಅಮೇರಿಕಾದಲ್ಲಿ ಗುರುತಿಸಲಾಯಿತು.
(975) 1983ರಲ್ಲಿ ಎಡ್ಸ್ ವೈರಸನ್ನು ಫ್ರೆಂಚ್ ವಿಜ್ಞಾನಿಗಳು ಪತ್ತೆ ಹಚ್ಚಿದರು.
(976) ಹೆಚ್.ಐ.ವಿ ಪತ್ತೆಯ ಪರೀಕ್ಷೆಗಳು:
(977) ಎಲಿಸಾ ಎಂಜೈಮ್ ಲಿಂಕಡ್ ಇಮ್ಯೂನೋ ಸಾರ್ಬೇಂಟ್ ಆಸೈ
(978) ಪಿ.ಸಿ.ಅರ್ - ಪಾಲಿಮರೇಸ್ ಚೈನ್ ರಿಯಾಕ್ಷನ್
(979) ವೆಸ್ಟ್ರರ್ನ್ ಬ್ಲಾಟ್
(980) WAF – World Aids Foundation ( started from 1988 in Switerzland )
(981) NACO – National Aids Control Organization  (1992)
(982) ಹೆಪಟೈಟಿಸ್ ಖಾಯಿಲೆಯು ಪಿತ್ತಕೋಶದ ಮೇಲೆ ಪರಿಣಾಮ ಬೀರುತ್ತದೆ.
(983) ದೇಹದ ರಾಸಾಯನಿಕ ಕಾರ್ಖಾನೆ ‘ಪಿತ್ತಕೋಶ’
(984) ಅಮೋನಿಯಾ ಲವಣಗಳನ್ನು ಸೈಟ್ರೈಟುಗಳಾಗಿ ಪರಿವರ್ತಿಸುವ ಬ್ಯಾಕ್ಟೀರಿಯಾ - ನೈಟ್ರೋಸೋಮಾನಾಸ್
(985) ನೈಟ್ರೈಟುಗಳನ್ನು ನೈಟ್ರೈಡುಗಳಾಗಿ ಪರಿವರ್ತಿಸುವ ಬ್ಯಾಕ್ಟೀರಿಯಾ - ನೈಟ್ರೋಬ್ಯಾಕ್ಟರ್
(986) ನೈಟ್ರೈಟ್‍ಗಳನ್ನು ನೈಟ್ರೋಜನ್ ಅನಿಲದ ರೋಪಕ್ಕೆ ಪರಿವರ್ತಿಸಿ ವಾತಾವರಣಕ್ಕೆ ಬಿಡುಗಡೆ ಮಾಡುವುದಕ್ಕೆ ಡಿನೈಟ್ರೀಕರಣ ಎನ್ನುವರು.
(987) ಡಿನೈಟ್ರೀಕರಣ ಮಾಡುವ ಬ್ಯಾಕ್ಟೀರಿಯಾ - ಸೋಡಮಾನಸ್
(988) ವಿಘಟನೆಗೆ ಒಳಪಡುವ ಮಾಲಿನ್ಯಕಾರಕ - ಸಲ್ಫರ್ ಡೈ ಆಕ್ಸೈಡ್
(989) ಜೀವಿಗಳ ದೇಹದ ಹೊರಗೆ ಡಿ.ಎನ್.ಎ ಯಲ್ಲಿ ಹಸ್ತಕ್ಷೇಪ ಮಾಡುವ ವಿಧಾನಕ್ಕೆ ಕ್ಲೋನಿಂಗ್ ಅಥವಾ ತದ್ರೂಪಿ ಸೃಷ್ಟಿ ಎನ್ನುವರು.
(990) ಸೈಟಾಲಜಿ ಕೋಶಿಕ ವಿಜ್ಞಾನ
(991) ಬಯೋಟೆಕ್ನಾಲಜಿ ಜೈವಿಕ ತಂತ್ರಜ್ಞಾನ
(992) ಬಯೋಕೆಮಿಸ್ಟ್ರಿ - ಜೀವರಾಸಾಯನ ಶಾಸ್ತ್ರ
(993) ಜೀವಿಗಳ ಗುಣಲಕ್ಷಣಗಳನ್ನು ಬಳಸಿಕೊಂಡು ಉಪಯುಕ್ತ ಉತ್ಪನ್ನಗಳನ್ನು ಪಡೆಯುವುದಕ್ಕೆ ಜೈವಿಕ ತಂತ್ರಜ್ಞಾನ ಎನ್ನುವರು.
(994) ಜೈವಿಕ ತಂತ್ರಜ್ಞಾನ ಎಂಬ ಪದ 1920 ರಲ್ಲಿ ಬ್ರಿಟನ್ ನಲ್ಲಿ ಬಳಕೆಗೆ ಬಂದಿತು.
(995) ಭಾರತದಲ್ಲಿ NBTB 1982 ರಲ್ಲಿ ಸ್ಥಾಪಿಸಲಾಯಿತು.
(996)  NBTB  – National Biotechnology Board
(997) ವಂಶವಾಹಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಉಂಟುಮಾಡುವ ತಂತ್ರಜ್ಞಾನ ತಳಿ ತಂತ್ರಜ್ಞಾನ